ಭಾರತ-ಬಾಂಗ್ಲಾದೇಶ ಗಡಿ ಭದ್ರಪಡಿಸದೆ ಪಶ್ಚಿಮ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ
ಸಿಲಿಗುರಿಯಲ್ಲಿರುವ ಶಸಸ್ತ್ರ ಸೀಮಾ ಬಲ್ (SSB) ಫ್ರಂಟಿಯರ್ ಪ್ರಧಾನ ಕಚೇರಿಯಲ್ಲಿ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅಮಿತ್ ಶಾ, "ಬಿಎಸ್‌ಎಫ್ (BSF) ಮೂಲಕ ಗಡಿ ಬೇಲಿಗಳನ್ನು ನಿರ್ಮಿಸಲು ಭೂಮಿ ನೀಡುವಂತೆ ಮಮತಾ ಬ್ಯಾನರ್ಜಿ ಅವರಿಗೆ ನಾನು ಮಾಡಿದ ಮನವಿಗಳು ವ್ಯರ್ಥವಾದವು. ಗಡಿ ಭದ್ರತೆಯನ್ನು ಬಲಪಡಿಸಲು ನಾನು 2014ರಿಂದ 1,129 ಎಕರೆ ಜಮೀನು ನೀಡುವಂತೆ ಕೇಳುತ್ತಿದ್ದೆ. ರಾಜ್ಯದಲ್ಲಿ ಅಧಿಕಾರಿ ನೇತೃತ್ವದ ಸರ್ಕಾರ ರಚನೆಯಾದ ನಂತರವಷ್ಟೇ ನಮಗೆ ಆ ಜಮೀನು ಸಿಕ್ಕಿದೆ" ಎಂದು ತಿಳಿಸಿದ್ದಾರೆ.
ನವದೆಹಲಿ, ಆಗಸ್ಟ್ 21: ಭಾರತ-ಬಾಂಗ್ಲಾದೇಶದ ಗಡಿಯನ್ನು ಸಂಪೂರ್ಣವಾಗಿ ಭದ್ರಪಡಿಸದ ಹೊರತು ಪಶ್ಚಿಮ ಬಂಗಾಳವಾಗಲಿ ಅಥವಾ ದೇಶವಾಗಲಿ ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಗಡಿ ಬೇಲಿ ನಿರ್ಮಿಸಲು ಅಗತ್ಯವಿರುವ ಜಮೀನಿಗಾಗಿ ತಾವು ಮಾಡಿದ ನಿರಂತರ ಮನವಿಗಳನ್ನು ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಿರಸ್ಕರಿಸಿದ್ದರು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿಲಿಗುರಿಯಲ್ಲಿರುವ ಶಸಸ್ತ್ರ ಸೀಮಾ ಬಲ್ (SSB) ಫ್ರಂಟಿಯರ್ ಪ್ರಧಾನ ಕಚೇರಿಯಲ್ಲಿ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅಮಿತ್ ಶಾ, “ಬಿಎಸ್‌ಎಫ್ (BSF) ಮೂಲಕ ಗಡಿ ಬೇಲಿಗಳನ್ನು ನಿರ್ಮಿಸಲು ಭೂಮಿ ನೀಡುವಂತೆ ಮಮತಾ ಬ್ಯಾನರ್ಜಿ ಅವರಿಗೆ ನಾನು ಮಾಡಿದ ಮನವಿಗಳು ವ್ಯರ್ಥವಾದವು. ಗಡಿ ಭದ್ರತೆಯನ್ನು ಬಲಪಡಿಸಲು ನಾನು 2014ರಿಂದ 1,129 ಎಕರೆ ಜಮೀನು ನೀಡುವಂತೆ ಕೇಳುತ್ತಿದ್ದೆ. ರಾಜ್ಯದಲ್ಲಿ ಅಧಿಕಾರಿ ನೇತೃತ್ವದ ಸರ್ಕಾರ ರಚನೆಯಾದ ನಂತರವಷ್ಟೇ ನಮಗೆ ಆ ಜಮೀನು ಸಿಕ್ಕಿದೆ” ಎಂದು ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ