ಬೆಂಗಳೂರಿನ ಕೇಂದ್ರೀಯ ಜೈಲಿಗೆ ದಿಢೀರ್ ಭೇಟಿ ನೀಡಿ ದೂರುಗಳ ಪರಿಶೀಲನೆ ನಡೆಸಿದರು ಗೃಹ ಸಚಿವ ಆರಗ ಜ್ಞಾನೇಂದ್ರ
ಖೈದಿಗಳ ಸಂಬಂಧಿಕರಿಂದ ಹಣ ವಸೂಲಿ ಮಾಡಕಾಗುತ್ತಿದೆ ಎಂಬ ಲೇಟೆಸ್ಟ್ ಆರೋಪ ಕೇಳಿ ಬಂದ ಬಳಿಕ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಂಗಳವಾರ ಬೆಳಗ್ಗೆ ಜೈಲಿಗೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಬೆಂಗಳೂರು: ಪರಪ್ಪನ ಆಗ್ರಹಾರ ಏರಿಯಾನಲ್ಲಿರುವ ಬೆಂಗಳೂರಿನ ಕೇಂದ್ರೀಯ ಜೈಲಿಗೆ (central jail) ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳಿವೆ. ಒಳಗಿರುವ ಖೈದಿಗಳು ಬಿಂದಾಸ್ ಆಗಿ ಮೊಬೈಲ್ ಫೋನುಗಳನ್ನು ಉಪಯೋಗಿಸುತ್ತಿದ್ದಾರೆ ಅಂತ ನಾವು ಇತ್ತೀಚಿಗೆ ವರದಿ ಮಾಡಿದ್ದೆವು. ಖೈದಿಗಳ (prisoners) ಭೇಟಿಗೆ ಬಂದ ಸಂಬಂಧಿಕರಿಂದ ಹಣ ವಸೂಲಿ ಮಾಡಕಾಗುತ್ತಿದೆ ಎಂಬ ಲೇಟೆಸ್ಟ್ ಆರೋಪ ಕೇಳಿ ಬಂದ ಬಳಿಕ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಅವರು ಮಂಗಳವಾರ ಬೆಳಗ್ಗೆ ಜೈಲಿಗೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ: Rashmika Mandanna: ‘ನನ್ನ ಮತ್ತು ಟೈಗರ್ ಶ್ರಾಫ್ ಕುರಿತ ಗಾಸಿಪ್ ನಿಜ’: ವಿಡಿಯೋ ಸಮೇತ ಒಪ್ಪಿಕೊಂಡ ರಶ್ಮಿಕಾ ಮಂದಣ್ಣ
Latest Videos