ದರ್ಶನ್ ಬಗ್ಗೆ ಪ್ರಶ್ನೆ ಕೇಳಿಸಿಕೊಳ್ಳುವುದು ಗೃಹಸಚಿವ ಪರಮೇಶ್ವರ್ಗೆ ಈಗಲೂ ಇಷ್ಟವಾಗುತ್ತಿಲ್ಲ!
ನಗರದ ಸೆಂಟ್ರಲ್ ಜೈಲಿನಲ್ಲಿ ದರ್ಶನ್ ಕೆಲ ನಟೋರಿಯಸ್ ಅಪರಾಧಿಗಳೊಂದಿಗೆ ಸಿಗರೇಟು ಸೇದುತ್ತ ಹರಟೆ ಹೊಡೆಯುತ್ತಿದ್ದ ಪೋಟೋ ಹೊರಬಿದ್ದ ನಂತರ ಜಿಪರಮೇಶ್ವರ್ ವಿಚಲಿತರಾಗಿದ್ದು ಸುಳ್ಳಲ್ಲ. ಕೂಡಲೇ ಕಾರ್ಯಪ್ರವೃತ್ತರಾಗಿ ಅವರು 9 ಜೈಲು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದರು.
ಬೆಂಗಳೂರು: ಕೊಲೆ ಆರೋಪಿ ದರ್ಶನ್ ಬಗ್ಗೆ ಪ್ರಶ್ನೆ ಕೇಳಿದರೆ ಗೃಹಸಚಿವ ಜಿ ಪರಮೇಶ್ವರ್ ಅವರಿಗೆ ಈಗಲೂ ಇರುಸು ಮುರುಸು ಉಂಟಾಗುತ್ತಿದೆ. ದರ್ಶನ್ ರನ್ನು ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ, ಇನ್ನೂ ಎಷ್ಟು ಸಲಾಂತ ಅವರ ಬಗ್ಗೆ ಕೇಳುತ್ತೀರಿ, ಒಂದು ವಾರದವರೆಗೆ ಸುದ್ದಿಯನ್ನು ಕವರ್ ಮಾಡಿದ್ದೀರಲ್ಲ ಎಂದು ನಗುತ್ತ ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹೋಮ್ ಮಿನಿಸ್ಟರ್ ಪರಮೇಶ್ವರ್ ಕೋ ಗುಸ್ಸಾ ಕ್ಯೋಂ ಆತಾ ಹೈ? ಫಜೀತಿಗೆ ಸಿಕ್ಕರೆ ಕೋಪ!
Published on: Aug 28, 2024 12:16 PM