ಮಧ್ಯಮ ವರ್ಗದವರ ಕನಸು ಸಾಕಾರಗೊಳಿಸಿ ಬಜೆಟ್​ನಲ್ಲಿ ಫಿಟ್ ಆಗುವ ಹೊಂಡಾ ಅಮೇಜ್ ಪೇಸ್​ಲಿಫ್ಟ್​  ಕಾರು ಬಂದುಬಿಟ್ಟಿದೆ!

ಮಧ್ಯಮ ವರ್ಗದವರ ಕನಸು ಸಾಕಾರಗೊಳಿಸಿ ಬಜೆಟ್​ನಲ್ಲಿ ಫಿಟ್ ಆಗುವ ಹೊಂಡಾ ಅಮೇಜ್ ಪೇಸ್​ಲಿಫ್ಟ್​  ಕಾರು ಬಂದುಬಿಟ್ಟಿದೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 19, 2021 | 4:22 PM

ಹೊಂಡಾ ಅಮೇಜ್ ಪೇಸ್​ಲಿಫ್ಟ್​  ಕಾರು ಮೂರು ಬಗೆಯಲ್ಲಿ ಲಭ್ಯವಿದೆ. ಈ ಕಾರುಗಳ ಗರಿಷ್ಟ ಬೆಲೆ ದೆಹಲಿಯಲ್ಲಿ (ಎಕ್ಸ್ ಶೋರೂಮ್) ರೂ. 11.15 ಲಕ್ಷಗಳಷ್ಟಿದೆ. ಕಂಪನಿಯು ಹಿಂದೆ ಲಾಂಚ್ ಮಾಡಿದ ಅಮೇಜ್ ಕಾರುಗಳ ಬೆಲೆ ರೂ. 6.22 ಲಕ್ಷಗಳಿಂದ 9.99 ಲಕ್ಷಗಳವರೆಗೆ ಇತ್ತು.

ಮಧ್ಯಮವರ್ಗ ಕುಟುಂಬಗಳ ಕನಸುಗಳು ಒಂದಲ್ಲ ಹಲವು; ಮಕ್ಕಳ ಓದು, ಮದುವೆ ಅವರ ಪ್ರಥಮ ಆದ್ಯತೆಗಳಾಗಿರೋದು ನಿಜವೇ. ಅವುಗಳೊಟ್ಟಿಗೆ ಮನೆ ಕಟ್ಟುವುದು ಮತ್ತು ತಮ್ಮ ಬಜೆಟ್ನಲ್ಲಿ ಫಿಟ್ ಆಗುವ ಕಾರು ಖರೀದಿಸುವುದು ಸಹ ಅವರ ಕನಸುಗಳ ಭಾಗವಾಗಿವೆ. ಕೈಗೆಟುಕುವ ದರದಲ್ಲಿ ಹೈಎಂಡ್ ಥರ ಕಾಣುವ ಕಾರು ಸಿಗಬಹುದಾ ಅಂತ ಅವರು ತಡಕಾಡುವುದು ಸುಳ್ಳಲ್ಲ. ಹೊಂಡಾ ಕಾರ್ಸ್ ಕಂಪನಿಯು ಮಧ್ಯಮವರ್ಗದವರ ಆಶಯಗಳಿಗೆ ತಕ್ಕನಾದ ಕಾರುಗಳನ್ನು ಲಾಂಚ್ ಮಾಡಿದೆ. ಹೊಂಡಾ ಅಮೇಜ್ ಪೇಸ್​ಲಿಫ್ಟ್ ಕಾರು ಬಹಳ ಸೊಗಸಾದ ಲುಕ್ ಹೊಂದಿದೆ ಮತ್ತು ನೋಡಿದಾಕ್ಷಣ ಲಕ್ಸುರಿ ಕಾರ್ ಅನಿಸುತ್ತದಾದರರೂ ದೆಹಲಿಯಲ್ಲಿ ಇದರ ಎಕ್ಸ್ ಶೋರೂಮ್ ಬೆಲೆ ರೂ 6.32 ಲಕ್ಷ ಮಾತ್ರ. ನಿಮಗೆ ಗೊತ್ತಿದೆ, ಇತ್ತೀಚಿಗೆ ಬೇಸಿಕ್ ಮಾಡೆಲ್ ಕಾರುಗಳ ಬೆಲೆ 5 ಲಕ್ಷಕ್ಕಿಂತ ಕಮ್ಮಿಯಿಲ್ಲ.

ಅಂದಹಾಗೆ, ಹೊಂಡಾ ಅಮೇಜ್ ಪೇಸ್​ಲಿಫ್ಟ್​  ಕಾರು ಮೂರು ಬಗೆಯಲ್ಲಿ ಲಭ್ಯವಿದೆ. ಈ ಕಾರುಗಳ ಗರಿಷ್ಟ ಬೆಲೆ ದೆಹಲಿಯಲ್ಲಿ (ಎಕ್ಸ್ ಶೋರೂಮ್) ರೂ. 11.15 ಲಕ್ಷಗಳಷ್ಟಿದೆ. ಕಂಪನಿಯು ಹಿಂದೆ ಲಾಂಚ್ ಮಾಡಿದ ಅಮೇಜ್ ಕಾರುಗಳ ಬೆಲೆ ರೂ. 6.22 ಲಕ್ಷಗಳಿಂದ 9.99 ಲಕ್ಷಗಳವರೆಗೆ ಇತ್ತು.

2021 ಅಮೇಜ್ ಫೇಸ್ಲಿಫ್ಟ್ ಕಾರು ಹಲವಾರು ಬಗೆಯ ಹೊರ ಮತ್ತು ಒಳಗಣ ವಿನ್ಯಾಸಗಳೊಂದಿಗೆ ಲಭ್ಯವಾಗುತ್ತಿದೆ. ಈ ಕಾರು ಎಲ್ಇಡಿ ಡಿಆರ್‌ಎಲ್‌ಗಳನ್ನು ಸಂಯೋಜಿಸಿರುವ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳಿಂದ ಸುತ್ತುವರಿದ ಹೊಸ ‘ಸಾಲಿಡ್ ವಿಂಗ್ ಫೇಸ್’ ಫ್ರಂಟ್ ಗ್ರಿಲ್ ಅನ್ನು ಹೊಂದಿದೆ. ಮರುವಿನ್ಯಾಸಗೊಳಿಸಿಲಾಗಿರುವ ಬಂಪರ್ ಹೊಸ ಎಲ್ಇಡಿ ಮಂಜು ದೀಪಗಳನ್ನು ಹೊಂದಿದೆ.

ಹಿಂಭಾಗದಲ್ಲಿ, ಹೊಸ ಸಿ-ಆಕಾರದ ಎಲ್ಇಡಿ ಸಂಯೋಜನೆಯ ದೀಪಗಳಿವೆ. ಹಿಂಭಾಗದ ಬಂಪರ್ ಅನ್ನು ಪುನರ್ ವಿನ್ಯಾಸಗೊಳಿಲಾಗಿದೆ. ಕಾಂಪ್ಯಾಕ್ಟ್ ಸೆಡಾನ್ ಹೊಸ ಕ್ರೋಮ್ ಡೋರ್ ಹ್ಯಾಂಡಲ್‌ಗಳನ್ನು ಟಚ್ ಸೆನ್ಸರ್ ಆಧಾರಿತ ಸ್ಮಾರ್ಟ್ ಎಂಟ್ರಿ ಸಿಸ್ಟಮ್ ಮತ್ತು 15 ಇಂಚಿನ ಆಯ್ಕೆಗಳ ಹೊಸ ಸೆಟ್ ಅನ್ನು ಒಳಗೊಂಡಿದೆ-ಗೋಲ್ಡನ್ ಬ್ರೌನ್ ಮೆಟಾಲಿಕ್, ಪ್ಲಾಟಿನಂ ವೈಟ್ ಪರ್ಲ್, ರೇಡಿಯಂಟ್ ರೆಡ್ ಮೆಟಾಲಿಕ್, ಲೂನಾರ್ ಸಿಲ್ವರ್ ಮೆಟಾಲಿಕ್ ಮತ್ತು ಹೊಸದಾಗಿ ಪರಿಚಯಿಸಲಾಗಿರುವ ಮೆಟಿಯರಾಯ್ಡ್ ಗ್ರೇ.

ಹಾಗೆಯೇ, 2021 ಹೊಂಡಾ ಅಮೇಜ್ ಫೇಸ್ಲಿಫ್ಟ್ ಮೊದಲಿನಂತೆಯೇ 1.2 ಲೀಟರ್ ಐ-ವಿಟೆಕ್ ಪೆಟ್ರೋಲ್ ಮತ್ತು 1.5 ಲೀಟರ್ ಐ-ಡಿಟೆಕ್ ಡೀಸೆಲ್ ಆಪ್ಶನ್​ಗಳೊಂದಿಗೆ ಲಭ್ಯವಾಗಲಿದೆ

ಇದನ್ನೂ ಓದಿ: ರೋಬೋಟ್​ಗಿಂತ ವೇಗವಾಗಿ ದೋಸೆ ಮಾಡ್ತಾನೆ ಈತ! ಆನಂದ್ ಮಹೀಂದ್ರ ಹಂಚಿಕೊಂಡ ವಿಡಿಯೋ ವೈರಲ್