AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಮಾರ್ಟ್​ವಾಚ್​​ಗಳಿಗೆ ಇನ್ನು ದುಬಾರಿ ಬೆಲೆ ತೆರಬೇಕಿಲ್ಲ, ರೂ, 5,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಹಲವಾರು ಬ್ರ್ಯಾಂಡ್​ಗಳು ಲಭ್ಯ!

ಸ್ಮಾರ್ಟ್​ವಾಚ್​​ಗಳಿಗೆ ಇನ್ನು ದುಬಾರಿ ಬೆಲೆ ತೆರಬೇಕಿಲ್ಲ, ರೂ, 5,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಹಲವಾರು ಬ್ರ್ಯಾಂಡ್​ಗಳು ಲಭ್ಯ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Aug 19, 2021 | 5:26 PM

Share

ಆದರೆ ಈಗ ಪರಿಸ್ಥಿತಿ ಮೊದಲಿನಂತಿಲ್ಲ. ಅಂದದ ಸ್ಮಾರ್ಟ್​ಗಳು ಹತ್ತಾರು ಫೀಚರ್​ಗಳೊಂದಿಗೆ ರೂ. 5,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ. ವಿನ್ಯಾಸ, ಬ್ಯಾಟರಿ ಬ್ಯಾಕಪ್, ಹೆಲ್ತ್ ಫೀಚರ್ಸ್ ಮೊದಲಾದವುಗಳನ್ನೊಳಗೊಂಡ ಟ್ರೆಂಡಿ ವಾಚ್​ಗಳಿಗೆ ನೀವಿನ್ನು ಹೆಚ್ಚು ಹಣ ತೆರಬೇಕಿಲ್ಲ.

ನಿಮಗೆ ಗೊತ್ತಾ? ನೀವು ಧರಿಸುವ ವಾಚು ನಿಮ್ಮ ವ್ಯಕ್ತಿತ್ವದ ವಿವರಣೆ ನೀಡುವ ಹಲವು ಆಯಾಮಗಳಲ್ಲಿ ಒಂದು. ಒಂದು ಸೊಗಸಾದ ವಾಚ್ ಧರಿಸುವುದು ಶ್ರೀಮಂತಿಕೆ ಅಥವಾ ಪ್ರತಿಷ್ಠೆಯ ದ್ಯೋತಕ ಎಂದು ಯಾವತ್ತೂ ಭಾವಿಸಬೇಡಿ. ಪ್ರತಿಷ್ಠಿತರ ಕೈಗಳಲ್ಲಿ ರಾರಾಜಿಸುವ ಗಡಿಯಾರ ಪ್ರತಿಬಾರಿ ದುಬಾರಿ ಅಥವಾ ಜನಪ್ರಿಯ ಬ್ರ್ಯಾಂಡ್ ಆಗಿರುತ್ತದೆ ಅಂತೇನಿಲ್ಲ. ಹಾಗೆಯೇ, ಶ್ರೀಮಂತರಲ್ಲದವರು ಅಂದರೆ ದುಬಾರಿ ಬೆಲೆಯ ಗಡಿಯಾರವನ್ನು ಅಫೋರ್ಡ್ ಮಾಡದವರು ತಮ್ಮ ವ್ಯಕ್ತಿತ್ವಕ್ಕೆ ಮೆರಗು ನೀಡಲು ಹೆಚ್ಚು ಬೆಲೆ ಬಾಳುವ ವಾಚ್ ಧರಿಸಬೇಕಿಲ್ಲ.

ಇದು ಸ್ಮಾರ್ಟ್​ವಾಚ್​ಗಲ ಜಮಾನಾ ಅಂತ ನಿಮಗೆ ಗೊತ್ತಿದೆ. ರಿಸ್ಟ್​​​ವಾಚ್​ಗಳ ಶೋರೂಮಿಗೆ  ಹೋದರೆ ಮೊದಲು ಕಣ್ಣಿಗೆ ಬೀಳೋದೇ ಸ್ಮಾರ್ಟ್​ವಾಚ್​​ಗಳು. ಈಗ ಹಲವಾರು ಬಗೆಯ ಸ್ಮಾರ್ಟ್ವಾಚ್ ಮಾಡೆಲಲ್​​ಗಳು ಮಾರ್ಕೆಟ್ನಲ್ಲಿ ಸಿಗುತ್ತಿವೆ ಮತ್ತು ಹೊಸ ಹೊಸ ಬ್ರ್ಯಾಂಡ್ಗಳು ಲಾಂಚ್ ಆಗುತ್ತಲೇ ಇವೆ. ವಾಚ್ ತಯಾರಿಸುವ ಕಂಪನಿಗಳ ನಡುವೆ ವಿಪರೀತ ಸ್ಫರ್ಧೆ ಏರ್ಪಟ್ಟಿರುವದರಿಂದ ಕಡಿಮೆ ದರದಲ್ಲಿ ನವೀನ ಬಗೆಯ ಸ್ಮಾರ್ಟ್ವಾಚ್ಗಳು ಗ್ರಾಹಕರಿಗೆ ಸಿಗುತ್ತಿವೆ. ಆಫ್ಕೋರ್ಸ್, ಸ್ಮಾರ್ಟ್​ವಾಚ್​​ ಮಾರುಕಟ್ಟೆ ಪ್ರವೇಶಿಸಿದಾಗ ಅವುಗಳ ಬೆಲೆ ಜನಸಾಮಾನ್ಯರಿಗೆ ಕೈಗೆಟುಕದಂತಿತ್ತು.

ಆದರೆ ಈಗ ಪರಿಸ್ಥಿತಿ ಮೊದಲಿನಂತಿಲ್ಲ. ಅಂದದ ಸ್ಮಾರ್ಟ್​ಗಳು ಹತ್ತಾರು ಫೀಚರ್​ಗಳೊಂದಿಗೆ ರೂ. 5,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ. ವಿನ್ಯಾಸ, ಬ್ಯಾಟರಿ ಬ್ಯಾಕಪ್, ಹೆಲ್ತ್ ಫೀಚರ್ಸ್ ಮೊದಲಾದವುಗಳನ್ನೊಳಗೊಂಡ ಟ್ರೆಂಡಿ ವಾಚ್​ಗಳಿಗೆ ನೀವಿನ್ನು ಹೆಚ್ಚು ಹಣ ತೆರಬೇಕಿಲ್ಲ.

ಈ ವಿಡಿಯೋನಲ್ಲಿ ಕಾಣುತ್ತಿರುವ ಸ್ಮಾರ್ಟ್​ವಾಚ್​ಗಳೆಲ್ಲ ರೂ. 5,000 ಕ್ಕಿಂತ ಕಡಿಮೆ ಬೆಲೆಯವು. ನಿಮಗೆ ಬೆಕಾದುದನ್ನು ಆಯ್ಕೆ ಮಾಡಿಕೊಳ್ಳಿ. ಕೆಲವು ಬ್ರ್ಯಾಂಡಿನ ವಾಚ್ಗಳಿಂದ ನೀವು ವಾಯ್ಸ್ ಕಾಲ್ ಕೂಡ ಮಾಡಬಹುದು.

ಇದನ್ನೂ ಓದಿ:  ಜೈಲಿನಿಂದ ಬಿಡುಗಡೆ ಆದವನಿಗೆ ಯುದ್ದ ಗೆದ್ದು ಬಂದವರ ರೀತಿ ಅದ್ಧೂರಿ ಸ್ವಾಗತ, ಸನ್ಮಾನ; ವಿಡಿಯೋ ವೈರಲ್