ನಾಳೆ ಸಾಯ್ತೀನಿ ಎಂದರೆ ಹಿಂದಿನ ದಿನವೂ ಬಣ್ಣ ಹಚ್ಚುತ್ತೀನಿ; ಜಗ್ಗೇಶ್
‘ಮಠ’, ‘ಎದ್ದೇಳು ಮಂಜುನಾಥ’ದಂಥ ಹಿಟ್ ಸಿನಿಮಾಗಳನ್ನು ನೀಡಿದ ಖ್ಯಾತಿ ಗುರುಪ್ರಸಾದ್ ಅವರಿಗೆ ಸಲ್ಲುತ್ತದೆ. ಜಗ್ಗೇಶ್ ಹಾಗೂ ಅವರ ಕಾಂಬಿನೇಷನ್ನಲ್ಲಿ ಬಂದ ಈ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದವು.
ನಟ ಜಗ್ಗೇಶ್ ಅವರು ತುಂಬಾನೇ ಕಷ್ಟದಿಂದ ಬಂದವರು. ಈಗ ಅವರ ಕೈಯಲ್ಲಿ ಈಗ ಸಾಕಷ್ಟು ಸಿನಿಮಾಗಳಿವೆ. ಮಠ ಗುರುಪ್ರಸಾದ್ ಹಾಗೂ ಜಗ್ಗೇಶ್ ಕಾಂಬಿನೇಷನ್ನಲ್ಲಿ ಈಗ ‘ರಂಗನಾಯಕ’ ಸಿನಿಮಾ ಮೂಡಿ ಬರುತ್ತಿದೆ. ಈ ಚಿತ್ರದ ಬಗ್ಗೆ ಮಾತನಾಡೋಕೆ ಇಂದು ಸುದ್ದಿಗೋಷ್ಠಿ ಕರೆಯಲಾಗಿತ್ತು.
‘ಮಠ’, ‘ಎದ್ದೇಳು ಮಂಜುನಾಥ’ದಂಥ ಹಿಟ್ ಸಿನಿಮಾಗಳನ್ನು ನೀಡಿದ ಖ್ಯಾತಿ ಗುರುಪ್ರಸಾದ್ ಅವರಿಗೆ ಸಲ್ಲುತ್ತದೆ. ಜಗ್ಗೇಶ್ ಹಾಗೂ ಅವರ ಕಾಂಬಿನೇಷನ್ನಲ್ಲಿ ಬಂದ ಈ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದವು. ಈಗ ಈ ಕಾಂಬಿನೇಷನ್ನಲ್ಲಿ ‘ರಂಗನಾಯಕ’ ಸಿನಿಮಾ ಮೂಡಿ ಬರುತ್ತಿದೆ. ‘ಟ್ವಿಟರ್ನಲ್ಲಿ ಕೆಲವರು ಕೆಟ್ಟದಾಗಿ ಕಮೆಂಟ್ ಮಾಡುತ್ತಾರೆ. ಯಾರು ಏನೇ ಹೇಳಲಿ. ನಾನೋರ್ವ ಕಲಾವಿದ. ಸಾಯುವ ಹಿಂದಿನ ದಿನವೂ ನಾನು ಬಣ್ಣ ಹಚ್ಚುತ್ತೇನೆ’ ಎಂದರು.
ಇದನ್ನೂ ಓದಿ: ದುಡ್ಡಿಲ್ಲದಾಗ ರವಿಚಂದ್ರನ್ ಬಳಿ 200 ರೂಪಾಯಿ ಕೇಳಿದ್ದ ಜಗ್ಗೇಶ್; ಕ್ರೇಜಿಸ್ಟಾರ್ ಉತ್ತರ ಹೇಗಿತ್ತು?
Latest Videos