ಮೊಟೊ ಜಿ31 ಜೊತೆ ಸ್ಫರ್ಧೆಗೆ ಬೀಳಲು ಹಾಂಗ್ ಕಾಂಗ್ನ ಇನ್ಫಿನಿಕ್ಸ್ ನೋಟ್ 11 ಸ್ಮಾರ್ಟ್ಫೋನ್ ಭಾರತಕ್ಕೆ ಬರುತ್ತಿದೆ
ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಇನ್ಫಿನಿಕ್ಸ್ ಕಂಪನಿಯು ನೇರವಾಗಿ ಮೊನ್ನೆಯಷ್ಟೇ ಭಾರತದಲ್ಲಿ ಲಾಂಚ್ ಆಗಿರುವ ಮೊಟೋ ಜಿ31 ಫೋನಿನ ಜೊತೆ ನೇರ ಸ್ಪರ್ಧೆಗಿಳಿದಿದೆ
ನೀವು ಇನ್ಫಿನಿಕ್ಸ್ ಕಂಪನಿ ಅಥವಾ ಆ ಬ್ರ್ಯಾಂಡಿನ ಸ್ಪಾರ್ಟ್ಫೋನ್ಗಳ ಹೆಸರು ಕೇಳಿರಬಹುದು. ಕೇಳಿಲ್ಲಂದ್ರ ಒಂದೆರಡು ದಿನ ತಡೀರಲ್ಲ, ಡಿಸೆಂಬರ್ 13ಕ್ಕ ಆ ಪೋನು ಇಂಡಿಯಾದಗ ಲಾಂಚ್ ಆಗ್ಲತ್ತದ್ರೀ ಯಪ್ಪಾ. ಖರೇವು ರೀ, ಮತ್ತ ಈ ಕಂಪನಿ ಹಾಂಗ್ ಕಾಂಗ್ ದೇಶದ್ದಂತ್ರೀ, ಅಲ್ಲಿ ಈ ಕಂಪನಿ ಫೋನ್ಗಳು ಭಾಳಾ ಫೇಮಸ್ ಅಂತ್ರೀ. ನಮ್ ದೇಶಕ್ಕ ಬರಾರ ಬರ್ಲೀ, ನೋಡೇ ಬಿಡೋಣು ಅದು ಎಷ್ಟು ಫೇಮಸ್ ಅಂತ್ ಅನ್ಲತ್ತಿರೇನು? ನೀವ್ ನೋಡ್ರಲಾ, ನಮ್ಗ ಅದುರ್ ಬಗ್ಗೆ ಹೇಳ್ಬೇಕಾಗ್ಯದ ಹೇಳ್ಲತ್ತಿದ್ದೇವು.
ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಇನ್ಫಿನಿಕ್ಸ್ ಕಂಪನಿಯು ನೇರವಾಗಿ ಮೊನ್ನೆಯಷ್ಟೇ ಭಾರತದಲ್ಲಿ ಲಾಂಚ್ ಆಗಿರುವ ಮೊಟೋ ಜಿ31 ಫೋನಿನ ಜೊತೆ ನೇರ ಸ್ಪರ್ಧೆಗಿಳಿದಿದೆ. ಸಾಮಾಜಿಕ ಜಾಲತಾಣದಲ್ಲಿ ಇನ್ಫಿನಿಕ್ಸ್ ನೋಟ್ 11 ಮತ್ತು ಇನ್ಫಿನಿಕ್ಸ್ ನೋಟ್ 11ಎಸ್ ಫೋನ್ಗಳನ್ನು ಭಾರತದಲ್ಲಿ ಲಾಂಚ್ ಮಾಡುತ್ತಿರುವ ಮಾಹಿತಿಯನ್ನು ಹಂಚಿಕೊಳ್ಳುವುದರ ಜೊತೆಗೆ ಮೊಟೊರೊಲ ಉತ್ಪಾದನೆಯನ್ನು ಲೇವಡಿ ಮಾಡುವ ಪ್ರಯತ್ನವನ್ನೂ ಮಾಡಿದೆ.
ತನ್ನ ಟ್ವೀಟ್ನಲ್ಲಿ ಅದು ಹೀಗೆ ಬರೆದುಕೊಂಡಿದೆ: “Baad mein motorona! ಹೆಲಿಯೊ ಜಿ88, 33ಡಬ್ಲ್ಯೂ ಫಾಸ್ಟ್ ಚಾರ್ಜ್ ಮತ್ತು 6.7 ಎಫ್ ಎಚ್ ಡಿ + ಅಮೋಲೆಡ್ ಡಿಸ್ಪ್ಲೇ ಸೆಗ್ಮೆಂಟ್ನಲ್ಲಿ ಉಳಿದೆಲ್ಲ ಪೋನಿಗಳಿಗಿಂತ ಹೆಚ್ಚು ಹೊಳೆಯುವ ಇನ್ಫಿನಿಕ್ಸ್ ನೋಟ್ 11 ಭಾರತದಲ್ಲಿ ಇಷ್ಟರಲ್ಲೇ ಲಾಂಚ್ ಅಗುತ್ತಿದೆ ಅನ್ನೋದು ನಿಮಗೆ ಗೊತ್ತಿರಬಹುದು.’
ಭಾರತದಲ್ಲಿ ಇನ್ಫಿನಿಕ್ಸ್ ನೋಟ್ 11 ಫೋನ್ ಯಾವ ದಿನಾಂಕದಂದು ಲಾಂಚ್ ಅಗಲಿದೆ ಅನ್ನುವುದನ್ನು ಕಂಪನಿ ಸ್ಪಷ್ಟಪಡಿಸಿಲ್ಲವಾದರೂ ನಂಬಲರ್ಹ ಮೂಲಗಳಿಂದ ಪ್ರಾಪ್ತವಾಗಿರುವ ಮಾಹಿತಿಯ ಪ್ರಕಾರ ಡಿಸೆಂಬರ್ 13 ಅದರ ಲಾಂಚ್ ದಿನವಾಗಿದೆ. ಭಾರತೀಯ ಮಾರ್ಕೆಟ್ನಲ್ಲಿ ಅದು ನಿಸ್ಸಂದೇಹವಾಗಿ ಮೊಟೊ ಜಿ41 ಫೋನಿನ ಜೊತೆ ಪೈಪೋಟಿಗಿಳಿಯಲಿದೆ. ಮಾರ್ಕೆಟ್ ತಜ್ಞರ ಅಭಿಪ್ರಾಯದ ಪ್ರಕಾರ ಇನ್ಫಿನಿಕ್ಸ್ ನೋಟ್ 11 ಫೋನಿನ ಬೆಲೆ ಮೊಟೊ ಜಿ31 ಫೋನಿನ ಬೆಲೆಯಷ್ಟೇ ಆಗಿರಲಿದೆ.
ಒಂದು ನಿರೀಕ್ಷೆಯ ಪ್ರಕಾರ ಭಾರತದಲ್ಲಿ ಇನ್ಫಿನಿಕ್ಸ್ ನೋಟ್ 11 4ಜಿಬಿ ವೇರಿಯಂಟ್ ಫೋನಿನ ಬೆಲೆ ಸುಮಾರು ರೂ. 13,000 ಆಗಿರಲಿದೆ. ಆದರೆ, ಇನ್ಫಿನಿಕ್ಸ್ ನೋಟ್ 11 ಎಸ್ ಬೆಲೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಎರಡೂ ಫೋನ್ಗಳು ಡಿಸೆಂಬರ್ 13ರಿಂದ ಫ್ಲಿಪ್ಕಾರ್ಟ್ನಲ್ಲಿ ಲಭ್ಯವಾಗಲಿವೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸಲು ಆಣೆ ಪ್ರಮಾಣ, ಹಣದ ಆಮಿಷ; ವಿಡಿಯೋ ವೈರಲ್