Baby Shower: ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಂಪಿ ರೇಣುಕಾಚಾರ್ಯ 9 ಗರ್ಭಿಣಿಯರ ಸೀಮಂತ ಕಾರ್ಯ ನೆರವೇರಿಸಿದರು

Baby Shower: ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಂಪಿ ರೇಣುಕಾಚಾರ್ಯ 9 ಗರ್ಭಿಣಿಯರ ಸೀಮಂತ ಕಾರ್ಯ ನೆರವೇರಿಸಿದರು

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 21, 2023 | 7:00 PM

ಗ್ರಾಮದ ಒಂಭತ್ತು ಗರ್ಭವತಿ ಮಹಿಳೆಯರಿಗೆ ಒಬ್ಬ ಹಿರಿಯಣ್ಣನ ಹಾಗೆ ಸೀಮಂತ ಕಾರ್ಯ ನೆರವೇರಿಸಿದರು. ಮಹಿಳೆಯರಲ್ಲಿ ಮುಸಲ್ಮಾನ ಸಮುದಾಯಕ್ಕೆ ಸೇರಿದ ಮಹಿಳೆಯರೂ ಇದ್ದರೆನ್ನುವುದು ವಿಶೇಷ.

ದಾವಣಗೆರೆ: ಹೊನ್ನಾಳಿ ಶಾಸಕ ಎಮ್ ಪಿ ರೇಣುಕಾಚಾರ್ಯ (MP Renukacharya) ಅವರು ಕ್ಷೇತ್ರದಲ್ಲಿ ಬರುವ ಸಾಸ್ವಿಹಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ ಕಾರ್ಯಕ್ರಮದಲ್ಲಿ ಭಾಗಿಯಾದರು. ಇದೇ ಸಂದರ್ಭದಲ್ಲಿ ಅವರು ಗ್ರಾಮದ ಒಂಭತ್ತು ಗರ್ಭವತಿ ಮಹಿಳೆಯರಿಗೆ ಒಬ್ಬ ಹಿರಿಯಣ್ಣನ ಹಾಗೆ ಸೀಮಂತ ಕಾರ್ಯ (Baby Shower) ನೆರವೇರಿಸಿದರು. ಮಹಿಳೆಯರಲ್ಲಿ ಮುಸಲ್ಮಾನ ಸಮುದಾಯಕ್ಕೆ (Muslim community) ಸೇರಿದ ಮಹಿಳೆಯರೂ ಇದ್ದರೆನ್ನುವುದು ವಿಶೇಷ. ಎಲ್ಲರ ಉಡಿ ತುಂಬಿದ ರೇಣುಕಾಚಾರ್ಯ ಉಡಗೊರೆಗಳ ಜೊತೆಗೆ ಒಂದಷ್ಟು ಹಣ ಸಹ ನೀಡಿದರು. ಅಂತಿಮವಾಗಿ ಶಾಸಕರು ಮಹಿಳೆಯರ ಆರತಿ ಬೆಳಗಿದರು. ಇದೊಂದು ಅರ್ಥಪೂರ್ಣ ಕಾರ್ಯಕ್ರಮ ಅನ್ನೋದರಲ್ಲಿ ಎರಡು ಮಾತಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ