ವಿಹೆಚ್ಪಿ ಕಲಬುರಗಿ ಘಟಕದ ಗೌರವಾಧ್ಯಕ್ಷ್ಯ ಗಾಳಿಯಲ್ಲಿ ಗುಂಡು ಹಾರಿಸಿ ಬನ್ನಿ ಮುಡಿಯುವ ಕಾರ್ಯಕ್ರಮ ಆರಂಭಿಸಿದರು!
ಕಲಬುರಗಿ ವಿಹೆಚ್ ಪಿ ಘಟಕದ ಗೌರವಾಧ್ಯಕ್ಷರಾಗಿರುವ ಲಿಂಗರಾಜಪ್ಪ ಪರವಾನಗಿ ಹೊಂದಿರುವ ಬಂದೂಕು ಹಾಗೂ ಪಿಸ್ಟಲ್ ನಿಂದ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಸಂಪ್ರದಾಯಕ್ಕೆ ಚಾಲನೆ ನೀಡಿದರು.
ಕಲಬುರಗಿ: ವಿಜಯದಶಮಿಯಂದು (Vijayadashami) ಬನ್ನಿ ಮುಡಿಯುವ, ಹಂಚುವ ಸಂಪ್ರದಾಯ ಶತಮಾನಗಳಿಂದ ನಡೆದುಕೊಂಡು ಬಂದಿದೆ. ಕಲಬುರಗಿ ನಗರದಲ್ಲಿ ವಿಹೆಚ್ ಪಿ ಮುಖಂಡರೊಬ್ಬರು ಸದರಿ ಸಂಪ್ರದಾಯವನ್ನು ಭಿನ್ನವಾದ ರೀತಿಯಲ್ಲಿ ಪ್ರಾರಂಭಿಸಿದರು. ನಗರದ ಗೋದುತಾಯಿ ಕಾಲೊನಿಯಲ್ಲಿರುವ ತಮ್ಮ ಫಾರ್ಮ್ ಹೌಸ್ ನಲ್ಲಿ ಕಲಬುರಗಿ ವಿಹೆಚ್ ಪಿ (VHP) ಘಟಕದ ಗೌರವಾಧ್ಯಕ್ಷರಾಗಿರುವ ಲಿಂಗರಾಜಪ್ಪ (Lingarajappa) ಪರವಾನಗಿ ಹೊಂದಿರುವ ಬಂದೂಕು ಹಾಗೂ ಪಿಸ್ಟಲ್ ನಿಂದ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಸಂಪ್ರದಾಯಕ್ಕೆ ಚಾಲನೆ ನೀಡಿದರು.
Latest Videos