Horoscope Today: ಇಂದು ಈ ರಾಶಿಯವರು ಅನಾವಶ್ಯಕ ಚರ್ಚೆಗಳಿಂದ ದೂರವಿರಿ

Updated on: Sep 07, 2026 | 6:40 AM

ಸೆಪ್ಟೆಂಬರ್ 7, ಸೋಮವಾರದ ದಿನ ಭವಿಷ್ಯದಲ್ಲಿ ಡಾ. ಬಸವರಾಜ ಗುರೂಜಿ ಅವರು ದ್ವಾದಶ ರಾಶಿಗಳ ಫಲಾಫಲವನ್ನು ವಿವರಿಸಿದ್ದಾರೆ. ಆರ್ಥಿಕ ಸ್ಥಿತಿ, ಆರೋಗ್ಯ, ವೃತ್ತಿಜೀವನ, ಕೌಟುಂಬಿಕ ಸಂಬಂಧಗಳು, ಪ್ರಯಾಣ ಮತ್ತು ಇತರ ಪ್ರಮುಖ ಅಂಶಗಳ ಕುರಿತು ಜ್ಯೋತಿಷ್ಯ ಸಲಹೆಗಳನ್ನು ನೀಡಲಾಗಿದೆ. ಪ್ರತಿಯೊಂದು ರಾಶಿಗೂ ಅದೃಷ್ಟ ಸಂಖ್ಯೆ, ಬಣ್ಣ ಮತ್ತು ಮಂತ್ರಗಳ ಕುರಿತು ಮಾಹಿತಿ ಲಭ್ಯವಿದೆ.

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಸೆಪ್ಟೆಂಬರ್ 7, ಸೋಮವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನ. ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಶ್ರಾವಣ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ ಮತ್ತು ಪುನರ್ವಸು ನಕ್ಷತ್ರಗಳ ವಿಶೇಷತೆಯನ್ನು ಈ ದಿನವು ಹೊಂದಿದೆ.

ಈ ದಿನ ಅಜಾ ಏಕಾದಶಿ ಎಂದು ಕರೆಯಲ್ಪಟ್ಟಿದ್ದು, ಉಪವಾಸದಿಂದ ಹೆಚ್ಚು ಫಲವನ್ನು ನೀಡುತ್ತದೆ ಎಂದು ಗುರೂಜಿ ತಿಳಿಸಿದ್ದಾರೆ. ರವಿ ಸಿಂಹ ರಾಶಿಯಲ್ಲಿ, ಚಂದ್ರ ಮಿಥುನ ರಾಶಿಯ ಪುನರ್ವಸು ನಕ್ಷತ್ರದಲ್ಲಿ ಸಂಚರಿಸಲಿದ್ದಾನೆ. ಈ ಗ್ರಹಗಳ ಸಂಚಾರವು ಪ್ರತಿಯೊಂದು ರಾಶಿಯವರ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರಲಿದೆ ಎಂದು ಗುರೂಜಿ ಹೇಳಿದ್ದಾರೆ.

 

 

Loading...
Unable to load recommendations.
Follow Us