ಕಾರು ಡಿಕ್ಕಿ ಹೊಡೆದ ರಭಸಕ್ಕೆ ಗಿರಕಿ ಹೊಡೆದ ಆಟೋ: ಎದೆ ಝಲ್​ ಎನ್ನುವ ದೃಶ್ಯ

Updated By: ಗಂಗಾಧರ​ ಬ. ಸಾಬೋಜಿ

Updated on: Nov 12, 2025 | 10:08 PM

ದಾವಣಗೆರೆಯ ಪಿ.ಬಿ. ರಸ್ತೆಯಲ್ಲಿ ಕಾರು ಮತ್ತು ಆಟೋ ಮಧ್ಯೆ ಭೀಕರ ಅಪಘಾತ ಸಂಭವಿಸಿರುವಂತಹ ಘಟನೆ ನ.08ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ವೇಗವಾಗಿ ಬಂದ ಕಾರು ಆಟೋಗೆ ಡಿಕ್ಕಿ ಹೊಡೆದು, ಆಟೋ ಪಲ್ಟಿಯಾಗಿ ಅದರಿಂದ ಮಗು ರಸ್ತೆಗೆ ಹಾರಿ ಬಿದ್ದಿದೆ. ಚಾಲಕರ ಅಜಾಗರೂಕತೆಯೇ ಈ ಘಟನೆಗೆ ಕಾರಣವಾಗಿದೆ.

ದಾವಣಗೆರೆ, ನವೆಂಬರ್​ 12: ನಗರದ ಪಿಬಿ ರಸ್ತೆಯಲ್ಲಿ ಭಯಾನಕ ಅಪಘಾತವೊಂದು ನಡೆದಿದೆ. ವೇಗವಾಗಿ ಬಂದ ಕಾರು ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ಕು ಸುತ್ತು ತಿರುಗಿ ಪಲ್ಟಿಯಾಗಿದೆ. ನವೆಂಬರ್ 8ರಂದು ನಡೆದ ಅಪಘಾತ ತಡವಾಗಿ ಬೆಳಕಿಗೆ ಬಂದಿದೆ. ಡಿಕ್ಕಿ ರಭಸಕ್ಕೆ ಆಟೋದಲ್ಲಿದ್ದ ಮಗು ಮತ್ತೊಂದು ಬದಿಯ ರಸ್ತೆಗೆ ಹಾರಿ ಬಿದ್ದಿದೆ. ಅಪಘಾತದ ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಎದೆ ಝಲ್​ ಎನ್ನುವಂತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.