ಕಸಾಯಿಖಾನೆಗೆ ಒಯ್ಯುತ್ತಿದ್ದ ಕೋಣದ ಆರ್ಭಟಕ್ಕೆ ಮನೆ, ಗೇಟು, ಕಾರು ನಜ್ಜುಗುಜ್ಜು

Edited By:

Updated on: Jun 19, 2024 | 5:12 PM

ಕಸಾಯಿಖಾನೆಗೆ ಒಯ್ಯುತ್ತಿದ್ದ ಕೋಣದ ಆರ್ಭಟಕ್ಕೆ ಮನೆ, ಗೇಟು, ಕಾರು ನಜ್ಜುಗುಜ್ಜಾಗಿದೆ. ಆ ಮೂಲಕ ವಧೆ ಮಾಡಲು ಬಂದವರಿಗೆ ಕೋಣವೇ ಒದೆ ಕೊಟ್ಟಿದೆ. ಇದು ಕೇರಳದ ಕಾಸರಗೋಡಿನಲ್ಲಿ ನಡೆದಿದೆ ಎನ್ನಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಘಟನೆಯ ವಿಡಿಯೋ ವೈರಲ್ ಆಗಿದೆ. ಕೋಣದ ರೋಷಾವೇಶಕ್ಕೆ ಸ್ಥಳೀಯರು ಸುಸ್ತಾಗಿದ್ದಾರೆ.

ದಕ್ಷಿಣ ಕನ್ನಡ, ಜೂ.19: ಕಸಾಯಿಖಾನೆಗೆ ಒಯ್ಯುತ್ತಿದ್ದ ಕೋಣದ ಆರ್ಭಟಕ್ಕೆ ಮನೆ, ಗೇಟು, ಕಾರು ನಜ್ಜುಗುಜ್ಜಾಗಿದೆ. ಆ ಮೂಲಕ ವಧೆ ಮಾಡಲು ಬಂದವರಿಗೆ ಕೋಣವೇ ಒದೆ ಕೊಟ್ಟಿದೆ. ಇದು ಕೇರಳದ ಕಾಸರಗೋಡಿ(Kasaragod)ನಲ್ಲಿ ನಡೆದಿದೆ ಎನ್ನಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಘಟನೆಯ ವಿಡಿಯೋ ವೈರಲ್ ಆಗಿದೆ. ಇನ್ನು ಕೋಣದ ಆರ್ಭಟಕ್ಕೆ ಜನರು ಕಕ್ಕಾ ಬಿಕ್ಕಿಯಾಗಿ ಓಡಿದ್ದಾರೆ. ಕೋಣದ ರಂಪಾಟದಿಂದ ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದು, ವಧೆಗಾಗಿ ಖಾಸಾಯಿಖಾನೆಗೆ
ಕೊಂಡೋಯ್ಯಲಾಗುತ್ತಿದ್ದ ಕೋಣ ಎಂಬ ಮಾಹಿತಿ ದೊರೆತಿದೆ. ಈ ವೇಳೆ ಇದ್ದಕ್ಕಿಂದಂತೆ ರಂಪಾಟ ಆರಂಭಿಸಿ ಸುತ್ತಮುತ್ತ ಇದ್ದವರನ್ನ ಎತ್ತಿ ಬಿಸಾಕಿದೆ. ಕೋಣದ ರೋಷಾವೇಶಕ್ಕೆ ಸ್ಥಳೀಯರು ಸುಸ್ತಾಗಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ