ದರ್ಶನ್ ಅಂಧಾಭಿಮಾನಿ ಜೊತೆಗಿನ ಫೋನ್ ಮಾತುಕತೆ ಬಿಚ್ಚಿಟ್ಟ ಪ್ರಥಮ್
ದರ್ಶನ್ ಅಭಿಮಾನಿಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದ ಒಳ್ಳೆ ಹುಡುಗ ಪ್ರಥಮ್ ಗೆ ದರ್ಶನ್ ಅಭಿಮಾನಿಗಳು ಬೆದರಿಕೆ ಹಾಕಿದ್ದು, ಈ ಸಂಬಂಧ ಪ್ರಥಮ್ ಪೊಲೀಸರಿಗೆ ದೂರು ನೀಡಿದ್ದಾರೆ. ದರ್ಶನ್ ಅಭಿಮಾನಿಯೊಬ್ಬ ತಮಗೆ ಕರೆ ಮಾಡಿ ಮಾತನಾಡಿದ ರೀತಿ ಬಗ್ಗೆ ಪ್ರಥಮ್ ವಿವರಿಸಿದ್ದಾರೆ.
ರೇಣುಕಾ ಸ್ವಾಮಿ (Renuka Swamy) ಕೊಲೆ ಆರೋಪಿ ದರ್ಶನ್ರ ಅಭಿಮಾನಿಗಳು ನಟ, ಮಾಜಿ ಬಿಗ್ಬಾಸ್ ವಿಜೇತ ಒಳ್ಳೆ ಹುಡುಗ ಪ್ರಥಮ್ (Olle Hudga Pratham) ಮೇಲೆ ಸಿಟ್ಟಾಗಿದ್ದಾರೆ. ದರ್ಶನ್ ವಿಚಾರಣೆಗೆ ಒಳಪಡಿಸಲಾಗಿರುವ ಠಾಣೆ ಮುಂದೆ ನಿಂತು ಸಮಸ್ಯೆ ಮಾಡುತ್ತಿರುವ ದರ್ಶನ್ ಅಭಿಮಾನಿಗಳನ್ನು ಹೊಡೆಯಬೇಕು ಎಂದು ಪ್ರಥಮ್ ಹೇಳಿದ್ದರು. ದರ್ಶನ್ರ ಈಗಿನ ಪರಿಸ್ಥಿತಿ ಬಗ್ಗೆಯೂ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಆದರೆ ಇದರಿಂದ ಸಿಟ್ಟಾದ ಅಭಿಮಾನಿಗಳು ಪ್ರಥಮ್ಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಪ್ರಥಮ್ ದೂರು ಸಹ ನೀಡಿದ್ದಾರೆ. ಇಂದು ಅದೇ ವಿಷಯವಾಗಿ ಟಿವಿ9 ಕನ್ನಡದ ಜೊತೆಗೆ ಮಾತನಾಡಿರುವ ಒಳ್ಳೆ ಹುಡ್ಗ ಪ್ರಥಮ್, ದರ್ಶನ್ ಅಭಿಮಾನಿಯೊಬ್ಬ ತಮಗೆ ಕರೆ ಮಾಡಿ ಮಾತನಾಡಿದ ರೀತಿಯನ್ನು ತಮ್ಮದೇ ಶೈಲಿಯಲ್ಲಿ ವಿವರಿಸಿದ್ದಾರೆ. ಇಲ್ಲಿದೆ ವಿಡಿಯೋ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕೆಆರ್ಎಸ್ನಿಂದ ಕದ್ದು ಮುಚ್ಚಿ ತಮಿಳುನಾಡಿಗೆ ನೀರು ಹರಿಸ್ತಿದ್ಯಾ ಸರ್ಕಾರ?
ಎನ್ಕೌಂಟರ್ನಲ್ಲಿ ಮೃತಪಟ್ಟ ಕುಮಾರ್ ಪುತ್ರಿಯ ಕಣ್ಣೀರಿನ ವಿಡಿಯೋ ವೈರಲ್
ಚಿಕ್ಕಬಳ್ಳಾಪುರ: 2 ವರ್ಷದಲ್ಲಿ 30 ಮಂದಿಯನ್ನು ಬಲಿ ಪಡೆದ ಸಾವಿನ ಹೆದ್ದಾರಿ
ಬಿಗ್ ಬಾಸ್ ಅಗ್ನಿಪರೀಕ್ಷೆಯಿಂದ ಆಯ್ಕೆ ಆಗೋರು ಎಷ್ಟು? ಇಲ್ಲಿದೆ ವಿವರ

