Siddaramaiah Reacts: ಕ್ಷೇತ್ರ ಹುಡುಕಿಕೊಂಡು ಅಲೆಯುತ್ತಿರುವ ಅಲೆಮಾರಿ ಅಂತ ಟೀಕಿಸುತ್ತಿರುವವರಿಗೆ ಬಾದಾಮಿ ಶಾಸಕನ ಉತ್ತರ!
ಈ ಬಾರಿ ಬೆಂಗಳೂರಿಗೆ ಹತ್ತಿರದ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದು, ಕೋಲಾರದ ಜನತೆ ಪ್ರೀತಿಯಿಂದ ಆಹ್ವಾನಿಸುತ್ತಿದ್ದಾರೆ ಹೈಕಮಾಂಡ್ ಒಪ್ಪಿದರೆ ಅಲ್ಲಿಂದ ಸ್ಪರ್ಧಿಸುವುದಾಗಿ ವಿರೋಧ ಪಕ್ಷದ ನಾಯಕ ಹೇಳಿದರು.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ತಮ್ಮನ್ನು ಕ್ಷೇತ್ರ ಹುಡುಕಿಕೊಂಡು ಅಲೆದಾಡುತ್ತಿರುವ ಅಲೆಮಾರಿ (nomad) ಟೀಕಿಸುತ್ತಿರುವವರಿಗೆ ಉತ್ತರ ನೀಡಿದ್ದಾರೆ. ಚಾಮುಂಡೇಶ್ವರಿ (Chamundeshwari) ಕ್ಷೇತ್ರದಿಂದ 8 ಬಾರಿ ಸ್ಪರ್ಧಿಸಿರುವ ತಾನು ಅಲೆಮಾರಿಯೇ? ಡಿಲಿಮಿಟೇಶನ್ ಆದಾಗ ತಮ್ಮ ಹುಟ್ಟೂರು ಮತ್ತು ತಾನು ಪ್ರತಿನಿಧಿಸುವ ಹೋಬಳಿ ವರುಣಾ ಕ್ಷೇತ್ರಕ್ಕೆ ಹೋಗಿದ್ದರಿಂದ ಚಾಮುಂಡೇಶ್ವರಿಯಿಂದ ಹೊರಬಂದು ವರುಣಾದಿಂದ ಸ್ಪರ್ಧಿಸಬೇಕಾಯಿತು ಎಂದು ಸಿದ್ದರಾಮಯ್ಯ ಹೇಳಿದರು. ಬಾದಾಮಿ ಕ್ಷೇತ್ರ ಬೆಂಗಳೂರಿನಿಂದ ಬಹಳ ದೂರ ಇರೋದ್ರಿಂದ ಈ ಬಾರಿ ಬೆಂಗಳೂರಿಗೆ ಹತ್ತಿರದ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದು, ಕೋಲಾರದ ಜನತೆ ಪ್ರೀತಿಯಿಂದ ಆಹ್ವಾನಿಸುತ್ತಿದ್ದಾರೆ ಹೈಕಮಾಂಡ್ ಒಪ್ಪಿದರೆ ಅಲ್ಲಿಂದ ಸ್ಪರ್ಧಿಸುವುದಾಗಿ ವಿರೋಧ ಪಕ್ಷದ ನಾಯಕ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.