ದೇವರಾಜೇಗೌಡ 2 ವರ್ಷಗಳಿಂದ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರೂ ರೇವಣ್ಣ ಕುಟುಂಬ ಕತ್ತೆ ಕಾಯ್ತಿತ್ತಾ? ಶಿವರಾಮೇಗೌಡ

|

Updated on: May 04, 2024 | 10:42 AM

ಕುಮಾರಸ್ವಾಮಿ ಹಾಸನಕ್ಕೆ ಹೋಗಿ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಬೇಕು ಅದು ಅವರ ಜವಾಬ್ದಾರಿಯಾಗಿದೆ ಎಂದು ಶಿವರಾಮೇಗೌಡ ಹೇಳಿದರು. ಈ ಇಳಿ ವಯಸ್ಸಲ್ಲಿ ಹಿರಿಯ ನಾಯಕ ಹೆಚ್ ಡಿ ದೇವೇಗೌಡರಿಗೆ ಇದನ್ನೆಲ್ಲ ನೋಡುವ ಕೇಳುವ ಸ್ಥಿತಿ ಬಂತಲ್ಲ ಅಂತ ವ್ಯಥೆಯಾಗುತ್ತದೆ ಮತ್ತು ಸಂತ್ರಸ್ತರ ಬಗ್ಗೆ ಅತೀವ ದುಃಖವಾಗುತ್ತದೆ ಎಂದು ಶಿವರಾಮೇಗೌಡ ಹೇಳಿದರು.

ಮಂಡ್ಯ: ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಮಾಜಿ ಶಾಸಕ ಮತ್ತು ಬಿಜೆಪಿ ನಾಯಕ ಎಲ್ ಆರ್ ಶಿವರಾಮೇಗೌಡ (LR Shivaramegowda) ಹೆಚ್ ಡಿ ರೇವಣ್ಣ (HD Revanna) ಮತ್ತು ಹೆಚ್ ಡಿ ಕುಮಾರಸ್ವಾಮಿ (HD Kumaraswamy) ವಿರುದ್ಧ ಕೆಂಡಕಾರಿದರು. ಪ್ರಜ್ವಲ್ ರೇವಣ್ಣನ ಹೇಯ ಕೃತ್ಯಗಳ ಬಗ್ಗೆ ರೇವಣ್ಣ ದಂಪತಿ ಮತ್ತು ಕುಮಾರಸ್ವಾಮಿಗೆ ಗೊತ್ತಿತ್ತು, ವಕೀಲ ದೇವರಾಜೇಗೌಡ ಎರಡು ವರ್ಷಗಳಿಂದ ರೇವಣ್ಣನ ಕುಟುಂಬವನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ, ಆಗಲೇ ಪ್ರಜ್ವಲ್ ನನ್ನು ಕರೆದು ಬುದ್ಧಿ ಹೇಳುವ ಬದಲು ಅವರೇನು ಕತ್ತೆ ಕಾಯ್ತಾ ಇದ್ರಾ? ಎಂದು ಶಿವರಾಮೇಗೌಡ ಹೇಳಿದರು. ಕುಮಾರಸ್ವಾಮಿ ಯಾಕೆ ದೇವರಾಜೇಗೌಡ ಮತ್ತು ರೇವಣ್ಣನ ಕುಟುಂಬದ ಜೊತೆ ಮಾತುಕತೆ ನಡೆಸಿ ಪ್ರಕರಣವನ್ನು ಇತ್ಯರ್ಥಗೊಳಿಸಲಿಲ್ಲ? ಇದೆಲ್ಲ ಅಗೋದು ಅವರಿಗೆ ಬೇಕಿತ್ತು ಅನಿಸುತ್ತೆ. ಸಂತ್ರಸ್ತೆಯರ ಪಾಡೇನು? ಕುಮಾರಸ್ವಾಮಿ ಹಾಸನಕ್ಕೆ ಹೋಗಿ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಬೇಕು ಅದು ಅವರ ಜವಾಬ್ದಾರಿಯಾಗಿದೆ ಎಂದು ಶಿವರಾಮೇಗೌಡ ಹೇಳಿದರು. ಈ ಇಳಿ ವಯಸ್ಸಲ್ಲಿ ಹಿರಿಯ ನಾಯಕ ಹೆಚ್ ಡಿ ದೇವೇಗೌಡರಿಗೆ ಇದನ್ನೆಲ್ಲ ನೋಡುವ ಕೇಳುವ ಸ್ಥಿತಿ ಬಂತಲ್ಲ ಅಂತ ವ್ಯಥೆಯಾಗುತ್ತದೆ ಮತ್ತು ಸಂತ್ರಸ್ತರ ಬಗ್ಗೆ ಅತೀವ ದುಃಖವಾಗುತ್ತದೆ ಎಂದು ಶಿವರಾಮೇಗೌಡ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ನನ್ನ ಕುಟುಂಬವೇ ಬೇರೆ, ಹೆಚ್ ಡಿ ರೇವಣ್ಣ ಕುಟುಂಬವೇ ಬೇರೆ, ನಮ್ಮ ವ್ಯವಹಾರಗಳೂ ಬೇರೆ ಬೇರೆ: ಹೆಚ್ ಡಿ ಕುಮಾರಸ್ವಾಮಿ