Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಚ್ ಡಿ ರೇವಣ್ಣ ಹೊಳೆನರಸೀಪುರ ಮನೆ ಬಾಗಿಲಿಗೆ ಪೊಲೀಸರು, ಹೆಚ್ಚಿದ ಭವಾನಿ ರೇವಣ್ಣ ಆತಂಕ

ಹೆಚ್ ಡಿ ರೇವಣ್ಣ ಹೊಳೆನರಸೀಪುರ ಮನೆ ಬಾಗಿಲಿಗೆ ಪೊಲೀಸರು, ಹೆಚ್ಚಿದ ಭವಾನಿ ರೇವಣ್ಣ ಆತಂಕ

ಅರುಣ್​ ಕುಮಾರ್​ ಬೆಳ್ಳಿ
|

Updated on: May 03, 2024 | 1:45 PM

ಆದರೆ ಪೊಲೀಸರು ಮನೆ ಬಾಗಿಲಿಗೆ ಬಂದಿದ್ದು ರೇವಣ್ಣ ದಂಪತಿಯಲ್ಲಿ ಆತಂಕವನ್ನ ಮತ್ತಷ್ಟು ಹೆಚ್ಚಿಸಿರುತ್ತದೆ. ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಟೇಪುಗಳು ಸಾರ್ವಜನಿಕಗೊಂಡು ಅವರು ನಾಪತ್ತೆಯಾದಾಗಿನಿಂದ ರೇವಣ್ಣ ಮತ್ತು ಭವಾನಿ ಏನೂ ಮಾಡಲು ತೋಚದ ಸ್ಥಿತಿಯಲ್ಲಿದ್ದಾರೆ.

ಹಾಸನ: ಕಳೆದ ಐದಾರು ದಿನಗಳಿಂದ ಹೊಳೆನರಸೀಪುರ ಶಾಸಕ ಹೆಚ್ ಡಿ ರೇವಣ್ಣ (HD Revanna) ಮತ್ತು ಅವರ ಪತ್ನಿ ಭವಾನಿ ರೇವಣ್ಣ (Bhavani Revanna) ಸರಿಯಾಗಿ ನಿದ್ರೆ ಮಾಡಿಲಾರರು. ಇಂದು ಬೆಳಗ್ಗೆ ಹೊಳೆನರಪುರದಲ್ಲಿರುವ ರೇವಣ್ಣ ಮನೆಗೆ ಪೊಲೀಸರು ಭೇಟಿ ನೀಡಿದ್ದರು. ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್, ಒಬ್ಬ ಲೇಡಿ ಕಾನ್ಸ್ ಸ್ಟೇಬಲ್ ಹಾಗೂ ಒಬ್ಬ ಪಿಸಿಯೊಂದಿಗೆ ಮುಖ್ಯರಸ್ತೆಯಲ್ಲಿರುವ ರೇವಣ್ಣ ಮನೆ ಗೇಟ್ ಓಪನ್ ಮಾಡಿಕೊಂಡು ಒಳಗಡೆ ಹೋಗುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಈ ಸಂದರ್ಭದಲ್ಲಿ ದಂಪತಿ ಮನೆಯಲ್ಲೇ ಇದ್ದರೆಂಬ ಮಾಹಿತಿ ಲಭ್ಯವಾಗಿದೆ. ಯಾವ ಕಾರಣಕ್ಕಾಗಿ ಬಂದಿದ್ದರು ಮತ್ತು ಏನು ವಿಚಾರಣೆ ನಡೆಸಿದರು ಅನ್ನೋದು ಗೊತ್ತಾಗಿಲ್ಲ. ಆದರೆ ಪೊಲೀಸರು ಮನೆ ಬಾಗಿಲಿಗೆ ಬಂದಿದ್ದು ರೇವಣ್ಣ ದಂಪತಿಯಲ್ಲಿ ಆತಂಕವನ್ನ ಮತ್ತಷ್ಟು ಹೆಚ್ಚಿಸಿರುತ್ತದೆ. ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಟೇಪುಗಳು ಸಾರ್ವಜನಿಕಗೊಂಡು ಅವರು ನಾಪತ್ತೆಯಾದಾಗಿನಿಂದ ರೇವಣ್ಣ ಮತ್ತು ಭವಾನಿ ಏನೂ ಮಾಡಲು ತೋಚದ ಸ್ಥಿತಿಯಲ್ಲಿದ್ದಾರೆ. ರೇವಣ್ಣ ನಾಳೆ ಎಸ್ಐಟಿ ತಂಡದ ಮುಂದೆ ವಿಚಾರಣೆಗೆ ಹಾಜರಾಗದಿದ್ದರೆ ಅರೆಸ್ಟ್ ಆಗುವ ಸಾಧ್ಯತೆ ಇದೆ. ಯಾಕೆಂದರೆ, ಮೊದಲಿಬ್ಬರು ಸಂತ್ರಸ್ತೆಯರು ದಾಖಲಿಸಿರುವ ದೂರಿನಲ್ಲಿ ರೇವಣ್ಣನೇ ಅರೋಪಿ ನಂಬರ್ ವನ್ ಅಗಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ಓದಿ:   ಪ್ರಜ್ವಲ್ ಎಲ್ಲೇ ಇದ್ದರೂ ಎಸ್ಐಟಿ ಅಧಿಕಾರಿಗಳು ವಿಚಾರಣೆಗೆ ಕರೆದರೆ ಬರುತ್ತಾನೆ: ಹೆಚ್ ಡಿ ರೇವಣ್ಣ