ಬಂಗಾಳದಲ್ಲಿ ಮೋದಿಗೆ ಜಪಮಾಲೆ ಗಿಫ್ಟ್ ಕೊಟ್ಟ ಸಾಧು; ವೇದಿಕೆಯಿಂದಲೇ ಪ್ರಧಾನಿ ಪ್ರಣಾಮ
Narendra Modi pranam to a sadhu at Bardhaman: ಪಶ್ಚಿಮ ಬರ್ಧಮಾನ್ನಲ್ಲಿ ಚುನಾವಣಾ ಸಮಾವೇಶದಲ್ಲಿ ನರೇಂದ್ರ ಮೋದಿ ಅವರಿಗೆ ಸಾಧುವೊಬ್ಬರು ಜಪಮಾಲೆ ಉಡುಗೊರೆ ನೀಡಿದರು. ಪ್ರಧಾನಿಗಳು ಸಾಧುವಿಗೆ ಕೈ ಮುಗಿದು ಪ್ರಣಾಮ ಮಾಡಿದರು. ಬಂಗಾಳದ ಈ ಕ್ಷೇತ್ರದಲ್ಲಿ ಮೇ 3ರಂದು ಚುನಾವಣಾ ಪ್ರಚಾರ ಮಾಡಿದ ಮೋದಿ, ಆಡಳಿತಾರಾಢ ಟಿಎಂಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಬರ್ಧಮಾನ್, ಪ. ಬಂಗಾಳ, ಮೇ 3: ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ಶುಕ್ರವಾರ ಪಶ್ಚಿಮ ಬಂಗಾಳದ ಪಶ್ಚಿಮ ಬರ್ಧಮಾನ್ನಲ್ಲಿ (Bardhaman) ಚುನಾವಣಾ ರ‍್ಯಾಲಿ ನಡೆಸಿದರು. ಈ ವೇಳೆ ಸಾಧುವೊಬ್ಬರು ನರೇಂದ್ರ ಮೋದಿ ಅವರಿಗೆ ಜಪಮಾಲೆ ನೀಡಲು ತಂದಿದ್ದರು. ಪ್ರೇಕ್ಷಕರ ಸಮ್ಮುಖದಲ್ಲಿ ಕೈ ಮೇಲೆ ಎತ್ತಿ ಮಾಲೆ ಹಿಡಿದು ನಿಂತಿದ್ದ ಸಾಧುವನ್ನು ಕಂಡು ನರೇಂದ್ರ ಮೋದಿ ವೇದಿಕೆಯಿಂದಲೇ ಮಾತನಾಡಿಸಿದರು. ‘ಮಹಾತ್ಮರೆ, ನನ್ನನ್ನು ಆಶೀರ್ವದಿಸುತ್ತಿರುವ ನಿಮಗೆ ನನ್ನ ಪ್ರಣಾಮಗಳು’ ಎಂದು ನರೇಂದ್ರ ಮೋದಿ ಕೈಮುಗಿದ ದೃಶ್ಯ ಎದ್ದು ಕಂಡಿತು.
ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ರಾಜ್ಯ ಟಿಎಂಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಬಂಗಾಳದಲ್ಲಿ ಹಿಂದೂಗಳು ಎರಡನೇ ದರ್ಜೆ ನಾಗರಿಕರನ್ನಾಗಿ ಮಾಡಲಾಗಿದೆ ಎಂದು ಮಮತಾ ಬ್ಯಾನರ್ಜಿ ಆಡಳಿತವನ್ನು ದೂಷಿಸಿದರು. ಟಿಎಂಸಿ ಸರ್ಕಾರಕ್ಕೆ ಮತಕ್ಕಾಗಿ ಸಮಾಜವನ್ನು ಒಡೆಯಲು ಬರುತ್ತದೆಯೇ ಹೊರತು ಅಭಿವೃದ್ಧಿ ಸಾಧನೆ ಆಗಲ್ಲ ಎಂದು ಕುಟುಕಿದರು.
ಇದನ್ನೂ ಓದಿ: ರಾಮನ ಮೇಲೆ ಒಂದು ಪಕ್ಷದ ಮಾಲೀಕತ್ವ ನಡೆಯಲು ಸಾಧ್ಯವೇ?: ಮೋದಿ
‘ಎರಡೇ ಗಂಟೆಯಲ್ಲಿ ಹಿಂದೂಗಳನ್ನು ಭಾಗೀರಥಿಯಲ್ಲಿ ಮುಳುಗಿಸಿಬಿಡುವುದಾಗಿ ಟಿಎಂಸಿ ಶಾಸಕರೊಬ್ಬರು ಬಹಿರಂಗವಾಗಿ ಧಮಕಿ ಹಾಕುತ್ತಾರೆ. ಇದ್ಯಾವ ರಾಜಕೀಯ ಸಂಸ್ಕೃತಿ? ಬಂಗಾಳದಲ್ಲಿ ಹಿಂದೂಗಳನ್ನು ಹೇಗೆ ನಡೆಸಿಕೊಳ್ಳಲಾಗುತ್ತಿದೆ ನೋಡಿ,’ ಎಂದು ನರೇಂದ್ರ ಮೋದಿ ಆರ್ಭಟಿಸಿದರು.
ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ