Gruha Jyothi: ಗೃಹಜ್ಯೋತಿ ಯೋಜನೆ ಯಾರಿಗೆಲ್ಲಾ ಅನ್ವಯಿಸಲಿದೆ, ಇದರ ಲೆಕ್ಕಾಚಾರ ಹೇಗೆ?
12 ತಿಂಗಳ ಬಿಲ್ ಸರಾಸರಿ ಆಧಾರದಲ್ಲಿ ವಿದ್ಯುತ್ ಉಚಿತ ನೀಡಲಾಗುತ್ತೆ. 12 ತಿಂಗಳ ಜತೆ ಶೇ.10ರಷ್ಟು ಹೆಚ್ಚುವರಿ ಯುನಿಟ್ ಫ್ರೀ ನೀಡಲಾಗುತ್ತೆ. ಸರಾಸರಿ+ಶೇ.10ಕ್ಕೂ ಮೀರಿದ್ರೆ ಬಿಲ್ ಪಾವತಿಸಬೇಕು.
ಕಾಂಗ್ರೆಸ್(Congress) ಸರ್ಕಾರದ ಮಹತ್ವದ ಸ್ಕೀಮ್ಗಳಲ್ಲಿ ಒಂದಾದ ಗೃಹಜ್ಯೋತಿ ಸ್ಕೀಮ್(Gruha Jyothi) ಜೂನ್ 30ರ ತಡರಾತ್ರಿಯಿಂದಲೇ ಅಧಿಕೃತವಾಗಿ ಆರಂಭವಾಗಿದೆ. 12 ತಿಂಗಳ ಬಿಲ್ ಸರಾಸರಿ ಆಧಾರದಲ್ಲಿ ವಿದ್ಯುತ್ ಉಚಿತ ನೀಡಲಾಗುತ್ತೆ. 12 ತಿಂಗಳ ಜತೆ ಶೇ.10ರಷ್ಟು ಹೆಚ್ಚುವರಿ ಯುನಿಟ್ ಫ್ರೀ ನೀಡಲಾಗುತ್ತೆ. ಸರಾಸರಿ+ಶೇ.10ಕ್ಕೂ ಮೀರಿದ್ರೆ ಬಿಲ್ ಪಾವತಿಸಬೇಕು. ಹೆಚ್ಚುವರಿ ಬಳಸಿದ ವಿದ್ಯುತ್ ಗೆ ಬಿಲ್ ಪಾವತಿಸಬೇಕು. ಜುಲೈ ತಿಂಗಳ ಕರೆಂಟ್ ಬಿಲ್ ಆಗಸ್ಟ್ ತಿಂಗಳಿನಲ್ಲಿ ಬರಲಿದೆ. ಅದರಲ್ಲಿ ಗೃಹಜ್ಯೋತಿಯ ಉಚಿತ ಬಿಲ್ ಎಂದು ನಮೂದಾಗಿರಲಿದೆ.