ಸೊಂಟದ ಕೆಳಗಿನ ಮಾತು; ಮನೆಯಲ್ಲಿ ಸ್ಟ್ಯಾಂಡಪ್ ಕಾಮಿಡಿಯನ್ಸ್ ಎದುರಿಸೋ ಸಮಸ್ಯೆಗಳೇನು?

Updated on: Apr 16, 2025 | 10:31 AM

ಸ್ಟ್ಯಾಂಡಪ್ ಕಾಮಿಡಿಯನ್ಸ್​​ಗಳು ಸೊಂಟದ ಕೆಳಗಿನ ಮಾತನ್ನೇ ಆಡುತ್ತಾರೆ ಎನ್ನುವ ಆರೋಪ ಇದೆ. ಈ ಆರೋಪದ ಬಗ್ಗೆ ಹಾಸ್ಯ ಮಾಡೋ ನಿರೂಪ್ ಹಾಗೂ ಶ್ರವಣ್ ಮಾತನಾಡಿದ್ದಾರೆ. ತಾವು ಮನೆಯಲ್ಲಿ ಎದುರಿಸಿದ ಸಮಸ್ಯೆಗಳು ಏನು ಎಂಬುದನ್ನು ಅವರು ಇಲ್ಲಿ ವಿವರಿಸಿದ್ದಾರೆ. ಆ ಬಗ್ಗೆ ವಿಡಿಯೋ ನೋಡಿ.

ಸ್ಟ್ಯಾಂಡಪ್​ ಕಾಮಿಡಿಗಳಲ್ಲಿ ಅಶ್ಲೀಲ ಜೋಕ್​ಗಳನ್ನು ಮಾಡಲಾಗುತ್ತದೆ. ಸೊಂಟದ ಕೆಳಗಿನ ಮಾತುಗಳನ್ನು ಲೀಲಾಜಾಲವಾಗಿ ಬಳಕೆ ಮಾಡಲಾಗುತ್ತದೆ. ಹೊರಗಿನ ಸಮಾಜದಲ್ಲಿ ಇದ್ದ ಕೆಲವರಿಗೆ ಇದು ಇಷ್ಟ ಆಗುವುದಿಲ್ಲ. ಹೀಗಿರುವಾಗ ಮನೆಯವರು ಇದನ್ನು ಒಪ್ಪೋದು ಹೇಗೆ? ಈ ಬಗ್ಗೆ ಸ್ಟ್ಯಾಂಡಪ್​ ಕಾಮಿಡಿ ಮಾಡೋ ಶ್ರವಣ್ (Shravan) ಹಾಗೂ ನಿರೂಪ್ ಮಾತನಾಡಿದ್ದಾರೆ. ‘ಯೂಟ್ಯೂಬ್ ಕಮೆಂಟ್​ಗಳನ್ನು ನೋಡಿದಾಗ ಮನೆಯವರಿಗೆ ಭಯ ಆಯ್ತು. ನಮ್ಮ ಪ್ಯಾಷನ್ ನೋಡಿ ಅವರಿಗೆ ಖುಷಿ ಇದೆ. ನಮ್ಮನ್ನು ಅನೇಕರು ಹೊಗಳಿದ್ದೂ ಇದೆ. ಕೆಟ್ಟದ್ದು ಮಾಡಿ ಮನೆಗೆ ತರಬೇಡಿ ಎಂಬುದು ಪಾಲಕರ ಕೋರಿಕೆ. ಆ ವೇದಿಕೆ ಏರಿದಾಗ ಒಳ್ಳೆಯದು, ಕೆಟ್ಟದ್ದು ಎರಡೂ ಆಗುತ್ತದೆ’ ಎನ್ನುತ್ತಾರೆ ಇವರು. ಅವರು ಹೇಳಿದ ಸಂಪೂರ್ಣ ವಿವರ ವಿಡಿಯೋದಲ್ಲಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More