ಕಡಿಮೆ ಸಮಯದಲ್ಲಿ ರುಚಿ ರುಚಿಯಾದ ಮಜ್ಜಿಗೆ ಸಾಂಬಾರ್ ಮಾಡಿ
ಮಜ್ಜಿಗೆ ಸಾಂಬಾರ್

ಕಡಿಮೆ ಸಮಯದಲ್ಲಿ ರುಚಿ ರುಚಿಯಾದ ಮಜ್ಜಿಗೆ ಸಾಂಬಾರ್ ಮಾಡಿ

| Updated By: sandhya thejappa

Updated on: Jul 22, 2021 | 10:34 AM

ಮಜ್ಜಿಗೆ ಸಾಂಬಾರ್ ಮಾಡಲು ಕೇವಲ 10 ರಿಂದ 15 ನಿಮಿಷ ಸಾಕು. ಮನೆಯಲ್ಲೇ ಇರುವ ಸಾಮಾಗ್ರಿಗಳನ್ನು ಬಳಸಿ ಈ ಸಾಂಬಾರನ್ನು ಮಾಡಬಹುದು. ಧಿಡೀರನೆ ಸಾಂಬಾರ್ ಮಾಡಬೇಕಾದರೆ ಮಜ್ಜಿಗೆ ಸಾಂಬಾರನ್ನು ಮಾಡಬಹುದು.

ದಣಿದು ಬಂದವರಿಗೆ ಮಜ್ಜಿಗೆ ಕೊಡುವ ಸಂಪ್ರದಾಯವಿದೆ. ಮಜ್ಜಿಗೆ (Butter Milk) ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಕಾಯಿಲೆಗಳನ್ನು ಉಪಶಮನ ಮಾಡುತ್ತದೆ. ಬೇಸಿಗೆಯಲ್ಲಿ ಬಾಯಾರಿಕೆ ಆದಾಗೆಲ್ಲ ಹೆಚ್ಚು ಮಜ್ಜಿಗೆ ಕುಡಿಯುತ್ತಾರೆ. ಮಜ್ಜಿಗೆಯಿಂದ ಸಾಂಬಾರ್ ಮಾಡಬಹುದು. ಆರೋಗ್ಯಕ್ಕೂ ಒಳ್ಳೆಯದು, ನಾಲಿಗೆಗೂ ಹೆಚ್ಚು ರುಚಿ ಕೊಡುವ ಮಜ್ಜಿಗೆ ಸಾಂಬಾರಿನ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ಉತ್ತರ ಕನ್ನಡದಲ್ಲಿ ಮಜ್ಜಿಗೆ ಸಾಂಬಾರ್ ತುಂಬಾ ಸ್ಪೆಷಲ್.

ಮಜ್ಜಿಗೆ ಸಾಂಬಾರ್ ಮಾಡಲು ಕೇವಲ 10 ರಿಂದ 15 ನಿಮಿಷ ಸಾಕು. ಮನೆಯಲ್ಲೇ ಇರುವ ಸಾಮಾಗ್ರಿಗಳನ್ನು ಬಳಸಿ ಈ ಸಾಂಬಾರನ್ನು ಮಾಡಬಹುದು. ಧಿಡೀರನೆ ಸಾಂಬಾರ್ ಮಾಡಬೇಕಾದರೆ ಮಜ್ಜಿಗೆ ಸಾಂಬಾರನ್ನು ಮಾಡಬಹುದು. ಕಡಿಮೆ ಸಮಯದಲ್ಲಿ ಸುಲಭವಾಗಿ ಮಜ್ಜಿಗೆ ಸಾಂಬಾರನ್ನು ಮಾಡುವುದು ಹೇಗೆ ಅಂತ ವಿಡಿಯೋದಲ್ಲಿ ತಿಳಿಸಲಾಗಿದೆ.

ರುಚಿ ರುಚಿಯಾದ ಮಜ್ಜಿಗೆ ಸಾಂಬಾರ್ ಮಾಡಲು ಬೇಕಾಗುವ ಸಾಮಾಗ್ರಿಗಳು:
ಮಜ್ಜಿಗೆ
ಉಪ್ಪು
ಸಾಸಿವೆ
ಜೀರಿಗೆ
ಕರಿಬೇವು
ಕೊತ್ತಂಬರಿ ಸೊಪ್ಪು
ಅರಿಶಿನ ಪುಡಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಕಡ್ಲೆ ಹಿಟ್ಟು
ಹಸಿ ಮೆಣಸಿನಕಾಯಿ
ಅಡುಗೆ ಎಣ್ಣೆ

ಇದನ್ನೂ ನೋಡಿ

ಭಾನುವಾರದ ಸ್ಪೆಷಲ್​ ಚಿಕನ್​ ಚಿಲ್ಲಿ ಪೆಪ್ಪರ್: ಸರಳ ವಿಧಾನದಲ್ಲಿ ಇಂದೇ ಮಾಡಿ ಸವಿಯಿರಿ

ಮಲ್ನಾಡ್ ಸ್ಟೈಲ್​ನಲ್ಲಿ ಖಾರ ಖಾರ ಚಿಕನ್ ಪೆಪ್ಪರ್ ಡ್ರೈ ಮಾಡುವ ವಿಧಾನ ಇಲ್ಲಿದೆ

(How to make Butter Milk Sambar in home with very tasty)