ದೇಶದೆಲ್ಲೆಡೆ ಸದ್ದು ಮಾಡುತ್ತಿರುವ ಪೆಗಾಸಸ್ ಸ್ಪೈವೇರ್ ಹೇಗೆ ನಿಮ್ಮ ಪೋನಲ್ಲಿರುವ ಮಾಹಿತಿ ಕದಿಯುತ್ತೆ ಅಂತ ಗೊತ್ತಾ?
ಮೊಟ್ಟ ಮೊದಲು ಅರ್ಥಮಾಡಿಕೊಳ್ಳಬೇಕಾದ ಸಂಗತಿಯೇನೆಂದರೆ ಇದು ಬೇಹುಗಾರಿಕೆಗೆಂದೇ ಅಭಿವೃದ್ಧಿ ಪಡಿಸಲಾಗಿರುವ ಒಂದು ಸ್ಪೈ ವೇರ್ (ಸಾಫ್ಟ್ವೇರ್ ಅಂತಲೂ ಕರೆಯಬಹುದು) ಆಗಿದೆ. ಪೆಗಾಸಸ್ ಸ್ಪೈ ವೇರ್ ಅನ್ನು ಕ್ಯೂಸೆಟ್ ಮತ್ತು ಟ್ರೈಡೆಂಟ್ ಎಂಬ ಹೆಸರುಗಳಿಂದಲೂ ಗುರುತಿಸಲಾಗುತ್ತದೆ
ದೇಶದೆಲ್ಲೆಡೆ ಪೆಗಾಸಸ್ ಬಗ್ಗೆ ಚರ್ಚೆ ನಡೆದಿದೆ. ಕೆಲ ನಾಯಕರು ಮತ್ತು ಪತ್ರಕರ್ತರು ಸೇರಿದಂತೆ ಭಾರತದ 300 ಮತ್ತು ವಿಶ್ವದಾದ್ಯಂತ ಸುಮಾರು 50,000 ದಷ್ಟು ಜನರ ಮೇಲೆ ಪೆಗಾಸಸ್ ಮೂಲಕ ಕಣ್ಣಿಡಲಾಗಿದೆ ಎಂದು ಹೇಳಲಾಗುತ್ತಿದೆ. ಸೋಮವಾರದಂದು ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕರು ಆಡಳಿತಾರೂಢ ಬಿಜೆಪಿ ಸರ್ಕಾರ ತಮ್ಮ ಮೇಲೆ ಬೇಹುಗಾರಿಕೆ ನಡೆಸುತ್ತಿದೆ ಎಂದು ಆರೋಪಿಸಿ ಸಂಸತ್ತಿನ ಕಲಾಪ ನಡೆಯದ ಹಾಗೆ ಗಲಾಟೆ ಎಬ್ಬಿಸಿದ್ದರು. ಸರ್ಕಾರದದ ಮೂಲಕ ಬೇಹುಗಾರಿಕೆಗೆ ಒಳಗಾಗಿರುವರೆಂದು ಆರೋಪಿಸಲಾಗಿರುವ ಭಾರತೀಯರಲ್ಲಿ 40 ಪತ್ರಕರ್ತರು ಮತ್ತು ಒಬ್ಬ ಹಾಲಿ ನ್ಯಾಯಾಧೀಶ, ಹಲವಾರು ಸಾಮಾಜಿಕ ಕಾರ್ಯಕರ್ತರು ಮತ್ತು ಉದ್ಯಮಿಗಳು ಸೇರಿದ್ದಾರೆಂದು ತಿಳಿದಬಂದಿದೆ.
ಹಾಗಾದರೆ ಪೆಗಾಸಸ್ ಅಂದರೇನು? ಅದು ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿಯುವುದು ಅತ್ಯವಶ್ಯಕವಾಗಿದೆ.
ನಾವು ಮೊಟ್ಟ ಮೊದಲು ಅರ್ಥಮಾಡಿಕೊಳ್ಳಬೇಕಾದ ಸಂಗತಿಯೇನೆಂದರೆ ಇದು ಬೇಹುಗಾರಿಕೆಗೆಂದೇ ಅಭಿವೃದ್ಧಿ ಪಡಿಸಲಾಗಿರುವ ಒಂದು ಸ್ಪೈ ವೇರ್ (ಸಾಫ್ಟ್ವೇರ್ ಅಂತಲೂ ಕರೆಯಬಹುದು) ಆಗಿದೆ. ಪೆಗಾಸಸ್ ಸ್ಪೈ ವೇರ್ ಅನ್ನು ಕ್ಯೂಸೆಟ್ ಮತ್ತು ಟ್ರೈಡೆಂಟ್ ಎಂಬ ಹೆಸರುಗಳಿಂದಲೂ ಗುರುತಿಸಲಾಗುತ್ತದೆ. ಈ ಡಿವೈಸನ್ನು ಅಭಿವೃದ್ಧಿಪಡಿಸಿದ್ದು ಇಸ್ರೇಲಿನ ಎನ್ಎಸ್ಒ ಹೆಸರಿನ ಒಂದು ಸಂಸ್ಥೆ.
ಮೊದಲೆಲ್ಲ ಪೆಗಾಸಸ್ ಕೇವಲ ಐ-ಪೋನ್ ಬಳಸುವವರನ್ನಷ್ಟೇ ಟಾರ್ಗೆಟ್ ಮಾಡುತ್ತಿತ್ತು. ಇದು ಆಂಡ್ರಾಯ್ಡ್ ಮತ್ತು ಐಎಸ್ಒ ಸಾಧನಗಳ ಸೆಕ್ಯುರಿಟಿ ವ್ಯವಸ್ಥೆಯನ್ನು ಸುಲಭವಾಗಿ ಬೇಧಿಸಿ ಟಾರ್ಗೆಟ್ ವ್ಯಕ್ತಿಯ ಸೆಲ್ ಫೋನ್ನಲ್ಲಿರುವ ವಾಟ್ಸ್ಯಾಪ್ ಸಂದೇಶಗಳು ಸೇರಿದಂತರ ಎಲ್ಲ ಮಾಹಿತಿಯನ್ನು ಕದ್ದು ಅದನ್ನು ಮೂರನೇ ಪಾರ್ಟಿಗೆ ರವಾನಿಸುತ್ತದೆ. ಲಭ್ಯವಿರುವ ಮಾಹಿತಿ ಪ್ರಕಾರ 2019 ರಲ್ಲಿ ಇದು ಸುಮಾರು 1,400 ಜನರ ಮೇಲೆ ಗೂಢಚರ್ಯೆ ನಡೆಸಿತ್ತು.
ಜನಪ್ರಿಯ ಸಾಮಾಜಿಕ ಜಾಲತಾಣಗಳಲ್ಲಿ ಒಂದಾಗಿರುವ ಫೇಸ್ಬುಕ್ 2019 ರಲ್ಲಿ ಪೆಗಾಸಸ್ ವಿರುದ್ಧ ದೂರು ಸಲ್ಲಿಸಿತ್ತು. ಪೆಗಾಸಸ್ ಸ್ಪೈವೇರ್ ಖರೀದಿಸಬೇಕಾದರೆ ಅಥವಾ ಬಾಡಿಗೆ ಪಡೆಯಬೇಕಾದರೆ, ನೂರಾರು ಕೋಟಿ ರೂಪಾಯಿ ತೆರಬೇಕಾಗುತ್ತದೆ.
ಇದನ್ನೂ ಓದಿ: ಅಶ್ಲೀಲ ಸಿನಿಮಾ ದಂಧೆ: ಗಂಡನ ಅನಾಚಾರ ಬಹಿರಂಗ ಆಗೋಕೂ ಮುನ್ನ ಶಿಲ್ಪಾ ಶೆಟ್ಟಿ ಮಾಡಿದ ಪೋಸ್ಟ್ ವೈರಲ್