ನೆಲಮಂಗಲದಲ್ಲಿ ನಡೆದ ಘಟನೆ: ಕಾರಿನ ಬಾನೆಟ್ನಲ್ಲಿದ್ದ ನಾಗರಹಾವನ್ನು ಸುರಕ್ಷಿತವಾಗಿ ಹೊರತೆಗೆದು ಅರಣ್ಯ ಪ್ರದೇಶಕ್ಕೆ ಬಿಟ್ಟ ಉರಗ ತಜ್ಞ
ಮನೆಯಲ್ಲಿ, ವಾಹನದಲ್ಲಿ ಹಾವು ಕಂಡರೆ, ಒಬ್ಬ ಉರಗ ತಜ್ಞರಿಗೆ ಫೋನ್ ಮಾಡಿ. ಆವರು ಬಂದು ಅದನ್ನು ಹಿಡಿಯುತ್ತಾರೆ ಮತ್ತು ಅದನ್ನು ಸುರಕ್ಷಿತ ಸ್ಥಳಕ್ಕೆ ತೆಗೆದುಕೊಂಡು ಹೋಗಿ ಬಿಡುತ್ತಾರೆ. ಎಲ್ಲ ಊರುಗಳಲ್ಲೂ ಈಗ ಉರುಗ ತಜ್ಞರು ಸಿಗುತ್ತಾರೆ.
ಚಳಿ ಮತ್ತು ಮಳೆಗಾಲಗಳಲ್ಲಿ ಹಾವುಗಳು ಕೆಲವು ಸಲ ಬೆಚ್ಚನೆಯ ಜಾಗ ಅರಸಿಕೊಂಡು ಬಂದು ಮನೆಗಳನ್ನು ಇಲ್ಲವೆ ಮನೆ ಮುಂದು ನಿಲ್ಲಿಸಿರುವ ವಾಹನಗಳನ್ನು ಸೇರಿಕೊಳ್ಳುತ್ತವೆ. ನಿಮಗೂ ನಿಮ್ಮ ಕಾರಿನ ಬಾನೆಟ್ ಅಥವಾ ಸ್ಕೂಟರ್ನ ಡಿಕ್ಕಿಯಲ್ಲಿ ಹಾವು ಸುಪ್ತವಾಗಿ ಸುತ್ತಿಕೊಂಡು ಮಲಗಿರೋ ಹಾವು ಗಮನಕ್ಕೆ ಬಂದಿರಬಹುದು. ಅಂಥ ಪರಿಸ್ಥಿತಿ ಎದುರಾದರೆ, ಯಾವ ಕಾರಣಕ್ಕೂ ಅದನ್ನು ಕೊಲ್ಲುವ ಪ್ರಯತ್ನ ಮಾಡಬೇಡಿ. ನಮಗೆಲ್ಲ ಗೊತ್ತಿರದ ವಿಷಯವೆಂದರೆ ಹಾವು ಯಾವುದೇ ಆಗಿರಲಿ, ಅದು ನಿರುಪದ್ರವ ಜೀವಿ. ಯಾರಾದರೂ ತಡವಿದರೆ ಮಾತ್ರ ಅದಕ್ಕೆ ಸಿಟ್ಟು ಬರುತ್ತದೆ ಮತ್ತು ತನ್ನನ್ನು ರಕ್ಷಿಸಿಕೊಳ್ಳವುದಕ್ಕೋಸ್ಕರ ಹೊಡೆಯಲು ಬಂದವರನ್ನು ಕಚ್ಚುವ ಪ್ರಯತ್ನ ಮಾಡುತ್ತದೆ.
ಮನೆಯಲ್ಲಿ, ವಾಹನದಲ್ಲಿ ಹಾವು ಕಂಡರೆ, ಒಬ್ಬ ಉರಗ ತಜ್ಞರಿಗೆ ಫೋನ್ ಮಾಡಿ. ಆವರು ಬಂದು ಅದನ್ನು ಹಿಡಿಯುತ್ತಾರೆ ಮತ್ತು ಅದನ್ನು ಸುರಕ್ಷಿತ ಸ್ಥಳಕ್ಕೆ ತೆಗೆದುಕೊಂಡು ಹೋಗಿ ಬಿಡುತ್ತಾರೆ. ಎಲ್ಲ ಊರುಗಳಲ್ಲೂ ಈಗ ಉರುಗ ತಜ್ಞರು ಸಿಗುತ್ತಾರೆ.
ಈ ವಿಡಿಯೋ ನೋಡಿ. ಉರಗ ತಜ್ಞ ರಾಜು ಅವರು ಮಾಡಿದ್ದು ಅದನ್ನೇ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಮಹದೇವಪುರದ ಭೈರೇಗೌಡರಿಗೆ ಸೇರಿದ ಕಾರಿನ ಬಾನೆಟ್ನಲ್ಲಿ ಒಂದು ದೊಡ್ಡ ಗಾತ್ರದ ನಾಗರಹಾವು ಸೇರಿಕೊಂಡುಬಿಟ್ಟಿತ್ತು. ಭೈರೇಗೌಡರು ರಾಜು ಅವರಿಗೆ ವಿಷಯ ತಿಳಿಸಿದಾಕ್ಷಣ ಅಲ್ಲಿಗೆ ಬಂದ ಅವರು ಸರೀಸೃಪಕ್ಕೆ ಯಾವುದೇ ಗಾಯವಾಗದಂತೆ, ಅದರ ದೇಹಕ್ಕೆ ಬಾನೆಟ್ ಒಳಗಿನ ಯಾವುದೇ ಮೊನಚಿನ ಭಾಗ ತರುಚದಂತೆ ಹೊರತೆಗಿದಿದ್ದಾರೆ.
ಹಾವಿಗೇನಾದರೂ ಗಾಯವಾದರೆ, ಇರುವೆ ಮತ್ತಿತರ ಕ್ರಿಮಿಕೀಟಗಳು ಅದನ್ನು ಮುತ್ತಿಕೊಂಡು ಇಷ್ಟಿಷ್ಟಾಗಿ ತಿನ್ನುತ್ತಾ ಹೋಗುತ್ತವೆ ಮತ್ತು ಹಾವು ಸತ್ತುಬಿಡುತ್ತದೆ.
ಹಾಗಾಗೇ, ರಾಜು ಅವರು ಬಹಳ ಎಚ್ಚರಿಕೆಯಿಂದ ಹಾವನ್ನು ಹೊರತೆಗೆದು ಹತ್ತಿರದ ಸಾವನದುರ್ಗಾ ಅರಣ್ಯ ಪ್ರದೇಶದಲ್ಲಿ ಅದನ್ನು ಬಿಟ್ಟು ಬಂದಿದ್ದಾರೆ.
ಇದನ್ನೂ ಓದಿ: ಗರಿಬಿಚ್ಚಿ ಕುಣಿಯುತ್ತಿದ್ದ ನವಿಲಿನ ಮೇಲೆ ಹುಲಿ ದಾಳಿ; ರಾಷ್ಟ್ರಪಕ್ಷಿ ಹಾಗೂ ರಾಷ್ಟ್ರಪ್ರಾಣಿ ಮುಖಾಮುಖಿಯಾದ ವಿಡಿಯೋ ವೈರಲ್