ಚೀನಾದ ಹೆನನ್ ಪ್ರಾಂತ್ಯದಲ್ಲಿ ದಶಕಗಳಲ್ಲೇ ಕಂಡರಿಯದ ಮಳೆ, ಜೆಂಗ್ಝಾ ನಗರ ಜಲಾವೃತ, ಕನಿಷ್ಟ16 ಸಾವು
ಜೆಂಗ್ಝಾ ನಗರದಲ್ಲಿ ರಕ್ಷಣಾ ಕಾರ್ಯಕ್ಕೆ ಸೇನೆಯನ್ನು ಕರೆಸಲಾಗಿದ್ದು ಸುಮಾರು 2 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಈ ನಗರದ ಜನಸಂಖ್ಯೆ ಒಂದು ಕೋಟಿಗಿಂತಲೂ ಹೆಚ್ಚು.
ಚೀನಾ ದೇಶದ ಕೇಂದ್ರೀಯ ಪ್ರಾಂತ್ಯವಾಗಿರುವ ಹೆನನ್ನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪ್ರವಾಹ ಮತ್ತು ಭೂಕುಸಿತಗಳು ಉಂಟಾಗುತ್ತಿವೆ. ಜೆಂಗ್ಝಾ ಅಂಡರ್ಗ್ರೌಂಡ್ ರೇಲ್ವೇ ವ್ಯವಸ್ಥೆಯು ಸುಂಪೂರ್ಣವಾಗಿ ನೀರಿನಿಂದ ಆವೃತ್ತವಾಗಿದೆ. ಮಳೆ ಸೃಷ್ಟಿಸಿರುವ ಅವಾಂತರಗಳಿಂದಾಗಿ ಕನಿಷ್ಟ 16 ಜನ ಮೃತಪಟ್ಟಿದ್ದಾರೆಂದು ಚೀನಾದ ಅಧಿಕೃತ ಮೂಲಗಳು ತಿಳಿಸಿವೆ.
ಜೆಂಗ್ಝಾ ನಗರದಲ್ಲಿ ರಕ್ಷಣಾ ಕಾರ್ಯಕ್ಕೆ ಸೇನೆಯನ್ನು ಕರೆಸಲಾಗಿದ್ದು ಸುಮಾರು 2 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಈ ನಗರದ ಜನಸಂಖ್ಯೆ ಒಂದು ಕೋಟಿಗಿಂತಲೂ ಹೆಚ್ಚು. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ರಸ್ತೆಗಳೆಲೆಲ್ಲ ಕುತ್ತಿಗೆ ಮಟ್ಟ ನೀರು ಹರಿಯುತ್ತಿದೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಗರದ ಸಬ್ವೇಗಳಲ್ಲಿ ಜನರು ಹ್ಯಾಂಡ್ರೇಲ್ಗಳನ್ನು ಹಿಡಿದುಕೊಂಡು ಜೀವದೊಂದಿಗೆ ಸೆಣಸುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಮಂಗಳವಾರದಂದು ಅಪ್ಲೋಡ್ ಆಗಿವೆ. ಸುರಕ್ಷಿತ ಪ್ರದೇಶಗಳಲ್ಲಿ ನಿಂತ ಜನ ಈ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ದಶಕಗಳಲ್ಲೇ ಕಾಣದಂಥ ಮಳೆ ಹೆನನ್ ಪ್ರಾಂತ್ಯದಲ್ಲಿ ಸುರಿಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.