Chicken ghee roast: ಚಿಕನ್ ಘೀ ರೋಸ್ಟ್; ನಾನ್​ ವೆಜ್​ ಪ್ರಿಯರು ಒಮ್ಮೆ ಮಾಡಿ ಸವಿಯಿರಿ

| Updated By: preethi shettigar

Updated on: Aug 09, 2021 | 9:56 AM

ಲೀವರ್ ಫ್ರೈ, ಬೊನ್ ಲೆಸ್ ಚಿಕನ್, ಲೆಗ್ ಪೀಸ್ ಹೀಗೆ ಬೇರೆ ಬೇರೆ ಅಡುಗೆಗಳನ್ನು ಇಷ್ಟಪಡುತ್ತಾರೆ. ಹೀಗೆ ಚಿಕನ್ ಅಡುಗೆ ಇಷ್ಟ ಪಡುವವರಿಗಾಗಿ ಇಂದಿನ ಅಡುಗೆ. ಅದುವೇ ಚಿಕನ್​ ಘೀ ರೋಸ್ಟ್.​ ಸುಲಭ ವಿಧಾನದ ಜತೆ ಹೇಗೆ ಇದನ್ನು ಮಾಡುವುದು ಎಂದು ತಿಳಿದುಕೊಳ್ಳೊಣ.

ನಾನ್​ ವೆಜ್​ ಪ್ರಿಯರಿಗೆ ಒಂದಿಲ್ಲಾ ಒಂದು ಹೊಸ ತರಹದ ಅಡುಗೆ ಮಾಡುವುದು ಹೆಚ್ಚು ಖುಷಿ ನೀಡುತ್ತದೆ. ಅದರಲ್ಲೂ ಚಿಕನ್ ಇಷ್ಟ ಪಡುವವರು ಹೆಚ್ಚು ವೈವಿದ್ಯತೆಯನ್ನು ಅಡುಗೆಯಲ್ಲಿ ಬಯಸುತ್ತಾರೆ. ಲೀವರ್ ಫ್ರೈ, ಬೊನ್ ಲೆಸ್ ಚಿಕನ್, ಲೆಗ್ ಪೀಸ್ ಹೀಗೆ ಬೇರೆ ಬೇರೆ ಅಡುಗೆಗಳನ್ನು ಇಷ್ಟಪಡುತ್ತಾರೆ. ಹೀಗೆ ಚಿಕನ್ ಅಡುಗೆ ಇಷ್ಟ ಪಡುವವರಿಗಾಗಿ ಇಂದಿನ ಅಡುಗೆ. ಅದುವೇ ಚಿಕನ್​ ಘೀ ರೋಸ್ಟ್.​ ಸುಲಭ ವಿಧಾನದ ಜತೆ ಹೇಗೆ ಇದನ್ನು ಮಾಡುವುದು ಎಂದು ತಿಳಿದುಕೊಳ್ಳೊಣ.

ಚಿಕನ್ ಘೀ ರೋಸ್ಟ್ ಮಾಡಲು ಬೇಕಾಗುವ ಸಾಮಾಗ್ರಿಗಳು ಒಣ ಮೆಣಸಿನಕಾಯಿ, ಕೊತ್ತಂಬರಿ ಕಾಳು, ಕರಿ ಮೆಣಸು, ಜೀರಿಗೆ, ಅರಿಶಿಣ ಪುಡಿ, ಗೋಡಂಬಿ, ಚಕ್ಕೆ, ಚಿಕನ್, ಉಪ್ಪು, ಶುಂಠಿ- ಬೆಳ್ಳುಳ್ಳಿ ಪೇಸ್ಟ್, ನಿಂಬೆ ಹಣ್ಣು, ಬೆಣ್ಣೆ, ತುಪ್ಪ, ಕೊತ್ತಂಬರಿ ಸೊಪ್ಪು, ಕರಿಬೇವು.

ಚಿಕನ್ ಘೀ ರೋಸ್ಟ್ ಮಾಡು ವಿಧಾನ
ಮೊದಲು ಒಂದು ಮಿಕ್ಸಿ ಜಾರಿಗೆ ಒಣ ಮೆಣಸಿನಕಾಯಿ, ಕೊತ್ತಂಬರಿ ಕಾಳು, ಕರಿ ಮೆಣಸು, ಜೀರಿಗೆ, ಅರಿಶಿಣ ಪುಡಿ, ಗೋಡಂಬಿ, ಚಕ್ಕೆ ಹಾಕಿ ಪುಡಿ ಮಾಡಿಕೊಳ್ಳಿ. ಬಳಿಕ ಒಂದು ಬೌಲ್​ಗೆ ಚಿಕನ್ ಹಾಕಿ ಅದಕ್ಕೆ ಉಪ್ಪು, ನಿಂಬೆ ಹಣ್ಣಿನ ರಸ, ಶುಂಠಿ- ಬೆಳ್ಳುಳ್ಳಿ ಪೇಸ್ಟ್, ರುಬ್ಬಿದ ಮಸಾಲಾ ಪುಡಿ ಹಾಕಿ ಚೆನ್ನಾಗಿ ಕಲಸಿ 1 ಗಂಟೆ ಬಿಡಿ. ನಂತರ ಒಂದು ಪಾತ್ರೆಗೆ ತುಪ್ಪ ಹಾಕಿ ಅದು ಕಾದ ಮೇಲೆ ಕರಿಬೇವಿನ ಸೊಪ್ಪು, ಚಿಕನ್ ಹಾಕಿ ಬೇಯಲು ಬಿಡಿ. ನಂತರ ಬೆಣ್ಣೆ, ಕೊತ್ತಂಬರಿ ಸೊಪ್ಪು ಹಾಕಿದರೆ ಬಿಸಿ ಬಿಸಿ ಚಿಕನ್ ಘೀ ರೋಸ್ಟ್ ಸವಿಯಲು ಸಿದ್ಧ.

ಇದನ್ನೂ ಓದಿ:
Chicken Gravy: ಕರಾವಳಿ ಸ್ಪೆಷಲ್ ಚಿಕನ್ ಗ್ರೇವಿ; ಸರಳ ವಿಧಾನದಲ್ಲಿ ಮಾಡಿ ಸವಿಯಿರಿ

ಮಲೆನಾಡಿನ ಸ್ಪೆಷಲ್ ಚಿಕನ್ ಕೀಮಾ ಬಾಲ್ಸ್; ಸರಳ ವಿಧಾನದಲ್ಲಿ ಮಾಡಿ ಸವಿಯಿರಿ

Published on: Aug 09, 2021 09:54 AM