ಚಿಕನ್ ಹರಿಯಾಲಿ ಟಿಕ್ಕ; ಸರಳ ವಿಧಾನದ ಜತೆ ಮಾಡಿ ಸವಿಯಿರಿ
ಲೀವರ್ ಫ್ರೈ, ಬೊನ್ ಲೆಸ್ ಚಿಕನ್, ಲೆಗ್ ಪೀಸ್ ಹೀಗೆ ಬೇರೆ ಬೇರೆ ಪೀಸ್ಗಳನ್ನು ಇಷ್ಟಪಡುತ್ತಾರೆ. ಹೀಗೆ ಲೆಗ್ ಪೀಸ್ ಜೊತೆಗಿನ ಅಡುಗೆ ಇಷ್ಟ ಪಡುವವರಿಗಾಗಿ ಇಂದಿನ ಅಡುಗೆ ಅದುವೆ ಚಿಕನ್ ಹರಿಯಾಲಿ ಟಿಕ್ಕ ಸುಲಭ ವಿಧಾನದ ಜತೆ ಹೇಗೆ ಮಾಡುವುದು ತಿಳಿದುಕೊಳ್ಳೊಣ.
ನಾನ್ ವೆಜ್ ಪ್ರಿಯರಿಗೆ ಒಂದಿಲ್ಲಾ ಒಂದು ಹೊಸ ತರಹದ ಅಡುಗೆ ಮಾಡುವುದು ಹೆಚ್ಚು ಖುಷಿ ನೀಡುತ್ತದೆ. ಅದರಲ್ಲೂ ಚಿಕನ್ ಇಷ್ಟ ಪಡುವವರು ಹೆಚ್ಚು ವೈವಿದ್ಯತೆಯನ್ನು ಅಡುಗೆಯಲ್ಲಿ ಬಯಸುತ್ತಾರೆ. ಲೀವರ್ ಫ್ರೈ, ಬೊನ್ ಲೆಸ್ ಚಿಕನ್, ಲೆಗ್ ಪೀಸ್ ಹೀಗೆ ಬೇರೆ ಬೇರೆ ಪೀಸ್ಗಳನ್ನು ಇಷ್ಟಪಡುತ್ತಾರೆ. ಹೀಗೆ ಲೆಗ್ ಪೀಸ್ ಜೊತೆಗಿನ ಅಡುಗೆ ಇಷ್ಟ ಪಡುವವರಿಗಾಗಿ ಇಂದಿನ ಅಡುಗೆ ಅದುವೆ ಚಿಕನ್ ಹರಿಯಾಲಿ ಟಿಕ್ಕ ಸುಲಭ ವಿಧಾನದ ಜತೆ ಹೇಗೆ ಮಾಡುವುದು ತಿಳಿದುಕೊಳ್ಳೊಣ.
ಚಿಕನ್ ಹರಿಯಾಲಿ ಟಿಕ್ಕ ಮಾಡಲು ಬೇಕಾದ ಸಾಮಾಗ್ರಿಗಳು ಚಿಕನ್, ಒಂದು ಕಪ್ ಪುದೀನಾ ಸೊಪ್ಪು, ಒಂದು ಕಪ್ ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ, ಗೋಡಂಬಿ, ಮೊಸರು, ಲಿಂಬೆ ಹಣ್ಣು, ಈರುಳ್ಳಿ, ದನಿಯಾ ಪುಡಿ, ಕರಿ ಮೆಣಸಿನ ಪುಡಿ, ಅರಿಶಿಣ, ಜೀರಿಗೆ ಪುಡಿ, ಗರಂ ಮಸಾಲ, ಉಪ್ಪು.
ಚಿಕನ್ ಹರಿಯಾಲಿ ಟಿಕ್ಕ ಮಾಡುವ ವಿಧಾನ
ಮೊದಲು ಒಂದು ಮಿಕ್ಸಿ ಜಾರಿಗೆ ಪುದೀನಾ ಸೊಪ್ಪು, ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ, ಗೋಡಂಬಿ, ಈರುಳ್ಳಿ, ದನಿಯಾ ಪುಡಿ, ಕರಿ ಮೆಣಸಿನ ಪುಡಿ, ಅರಿಶಿಣ, ಜೀರಿಗೆ ಪುಡಿ, ಗರಂ ಮಸಾಲ, ಉಪ್ಪು ಹಾಕಿ ರುಬ್ಬಿಕೊಳ್ಳಬೇಕು. ನಂತರ ಅದಕ್ಕೆ ಮೊಸರು ಹಾಕಿ ಮತ್ತೆ ರುಬ್ಬಿಕೊಳ್ಳಬೇಕು. ಬಳಿಕ ತೊಳೆದ ಚಿಕನ್ ತುಂಡುಗಳಿಗೆ ರುಬ್ಬಿದ ಮಸಾಲೆ ಹಚ್ಚಿ 2ಗಂಟೆಗಳ ಕಾಲ ಫ್ರಿಡ್ಜ್ನಲ್ಲಿ ಇಡಬೇಕು. ಬಳಿಕ ಗ್ರಿಲ್ ಪ್ಯಾನ್ಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಚಿಕನ್ ಹಾಕಿ ಎರಡು ಕಡೆ ಬೇಯಿಸಿಕೊಳ್ಳಬೇಕು. ಈಗ ಬಿಸಿಯಾದ ಚಿಕನ್ ಹರಿಯಾಲಿ ಟಿಕ್ಕ ಸವಿಯಲು ಸಿದ್ಧ.
ಇದನ್ನೂ ಓದಿ:
ಮಲ್ನಾಡ್ ಸ್ಟೈಲ್ನಲ್ಲಿ ಖಾರ ಖಾರ ಚಿಕನ್ ಪೆಪ್ಪರ್ ಡ್ರೈ ಮಾಡುವ ವಿಧಾನ ಇಲ್ಲಿದೆ
ಸೀಗಡಿ ಪೆಪ್ಪರ್ ಸ್ಪೈಸಿ; ಸರಳವಾದ ವಿಧಾನದ ಜೊತೆ 20 ನಿಮಿಷಗಳಲ್ಲಿ ತಯಾರಿಸಿ