ನೇರಳೆ ಹಣ್ಣಿನ ಜ್ಯೂಸ್; ಆರೋಗ್ಯಯುತವಾದ ಈ ವಿಧಾನವನ್ನೊಮ್ಮೆ ಅನುಸರಿಸಿ ನೋಡಿ
ನೇರಳೆ ಹಣ್ಣು ಮಧುಮೇಹ ರೋಗಿಗಳಿಗೆ ಒಳ್ಳೆಯದು ಮತ್ತು ರಕ್ತ ಶುದ್ಧೀಕರಿಸುವುದು ಹಾಗೂ ರಕ್ತಹೀನತೆಯನ್ನು ನಿವಾರಣೆ ಮಾಡುತ್ತದೆ. ಜತೆಗೆ ರಕ್ತದೊತ್ತಡವನ್ನು ತಗ್ಗಿಸುತ್ತದೆ. ಇನ್ನು ಹೊಟ್ಟೆ ಸಂಬಂಧಿ ಕಾಯಿಲೆಯನ್ನು ಕೂಡ ಇದು ದೂರ ಮಾಡುತ್ತದೆ.
ನೇರಳೆ ಹಣ್ಣು ಎಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇದು ರುಚಿಗಷ್ಟೇ ಅಲ್ಲ ಆರೋಗ್ಯದ ದೃಷ್ಟಿಯಿಂದಲೂ ಕೂಡ ತುಂಬಾ ಒಳ್ಳೆಯದು. ನೇರಳೆ ಹಣ್ಣು ಮಧುಮೇಹ ರೋಗಿಗಳಿಗೆ ಒಳ್ಳೆಯದು ಮತ್ತು ರಕ್ತ ಶುದ್ಧೀಕರಿಸುವುದು ಹಾಗೂ ರಕ್ತಹೀನತೆಯನ್ನು ನಿವಾರಣೆ ಮಾಡುತ್ತದೆ. ಜತೆಗೆ ರಕ್ತದೊತ್ತಡವನ್ನು ತಗ್ಗಿಸುತ್ತದೆ. ಇನ್ನು ಹೊಟ್ಟೆ ಸಂಬಂಧಿ ಕಾಯಿಲೆಯನ್ನು ಕೂಡ ಇದು ದೂರ ಮಾಡುತ್ತದೆ. ಇಷ್ಟೋಂದು ಆರೋಗ್ಯಯುತ ಲಕ್ಷಣಗಳಿರುವ ಈ ಹಣ್ಣನ್ನು ಹಾಗೇ ಸೇವಿಸುವುದಕ್ಕಿಂತ ಜ್ಯೂಸ್ ಮಾಡಿ ಕುಡಿಯುವುದು ಉತ್ತಮ. ಹಾಗಿದ್ದರೆ ನೇರಳೆ ಹಣ್ಣಿನ ಜ್ಯೂಸ್ ಮಾಡುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳುವುದು ಸೂಕ್ತ.
ನೇರಳೆ ಹಣ್ಣಿನ ಜ್ಯೂಸ್ ಮಾಡುವುದಕ್ಕೆ ಬೇಕಾಗುವ ಸಾಮಾಗ್ರಿಗಳು ನೇರಳೆ ಹಣ್ಣು ಒಂದು ಕಪ್, ಸಕ್ಕರೆ, ಬ್ಲಾಕ್ ಸಾಲ್ಟ್, ಉಪ್ಪು, ನಿಂಬೆ ಹಣ್ಣು, ಐಸ್ ಕ್ಯೂಬ್ಸ್, ಚಾಟ್ ಮಸಾಲಾ.
ನೇರಳೆ ಹಣ್ಣಿನ ಜ್ಯೂಸ್ ಮಾಡುವ ವಿಧಾನ:
ಮಿಕ್ಸಿ ಜಾರ್ಗೆ ಮೊದಲು ಜೀಜ ತೆಗೆದಿಟ್ಟುಕೊಂಡ ನೇರಳೆಹಣ್ಣನ್ನು ಹಾಕಿ, ಬಳಿಕ ಸಕ್ಕರೆ, ನಂತರ ಬ್ಲಾಕ್ ಸಾಲ್ಟ್, ಚಾಟ್ ಮಸಾಲಾ ಪುಡಿ ಮತ್ತು ಐಸ್ ಕ್ಯೂಬ್ಸ್ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ಬಳಿಕ ಒಂದು ಗ್ಲಾಸ್ಗೆ ನಿಂಬೆಹಣ್ಣಿನ ರಸ ಮತ್ತು ಉಪ್ಪು ಸವರಿ ಇಟ್ಟುಕೊಳ್ಳಬೇಕು. ನಂತರ ಅದಕ್ಕೆ ರುಬ್ಬಿದ ನೇರಳೆ ಹಣ್ಣಿನ ಮಿಶ್ರಣ ಹಾಕಬೇಕು. ಈಗ ರುಚಿಕರವಾದ ಮತ್ತು ಆರೋಗ್ಯಯುತವಾದ ನೇರಳೆ ಹಣ್ಣಿನ ಜ್ಯೂಸ್ ಸವಿಯಲು ಸಿದ್ಧ.
ಇದನ್ನೂ ಓದಿ:
ಮಾವಿನ ಹಣ್ಣಿನ ಕೇಸರಿ ಬಾತ್; 20 ನಿಮಿಷಗಳಲ್ಲಿ ಸರಳ ವಿಧಾನದ ಮೂಲಕ ತಯಾರಿಸಿ
ಮಾವಿನ ಹಣ್ಣಿನ ಓಟ್ಸ್ ಲಡ್ಡು; ಸರಳ ವಿಧಾನದೊಂದಿಗೆ ಮಾಡಿ ಸವಿಯಿರಿ