ಮಲೆನಾಡಿನ ಸ್ಪೆಷಲ್ ಬಾದಾಮಿ ಪಾಯಸ; ಇಂದೇ ಮಾಡಿ ಸವಿಯಿರಿ

ಮಲೆನಾಡಿನ ಸ್ಪೆಷಲ್ ಬಾದಾಮಿ ಪಾಯಸ; ಇಂದೇ ಮಾಡಿ ಸವಿಯಿರಿ

TV9 Web
| Updated By: preethi shettigar

Updated on: Aug 10, 2021 | 10:51 AM

ರುಚಿಕರವಾದ ಅಡುಗೆಯನ್ನು ಮಾಡುವುದರ ಜೊತೆಗೆ ಹೊಸತೆನೋ ಒಂದನ್ನು ಪ್ರತಿದಿನವು ಪ್ರಯೋಗ ಮಾಡುವುದು ಭೋಜನ ಪ್ರೀಯರಿಗೆ ಹೆಚ್ಚು ಖುಷಿಯನ್ನು ಕೊಡುವ ವಿಚಾರ.

ಕಾಲಕ್ಕೆ ವಿಶೇಷವಾದ ಒಂದಷ್ಟು ರೆಸಿಪಿಗಳನ್ನು ತಿಳಿದುಕೊಳ್ಳುವುದು ಮುಖ್ಯ ಎನಿಸಿಕೊಳ್ಳುತ್ತದೆ. ಏಕೆಂದರೆ ರುಚಿಕರವಾದ ಅಡುಗೆಯನ್ನು ಮಾಡುವುದರ ಜೊತೆಗೆ ಹೊಸತೆನೋ ಒಂದನ್ನು ಪ್ರತಿದಿನವು ಪ್ರಯೋಗ ಮಾಡುವುದು ಭೋಜನ ಪ್ರೀಯರಿಗೆ ಹೆಚ್ಚು ಖುಷಿಯನ್ನು ಕೊಡುವ ವಿಚಾರ. ಹಾಗೆಯೇ ಸಿಹಿಯಾದ ಅಡುಗೆಯನ್ನು ಇಷ್ಟಪಡುವವರು ಇರುತ್ತಾರೆ. ಅಂತೆಯೇ ಕಾರ ಇಷ್ಟಪಡುವವರು ಇರುತ್ತಾರೆ. ಸಿಹಿ ಅಡುಗೆಯನ್ನು ಇಷ್ಟಪಡುವವರಿಗಾಗಿ ಇಂದಿನ ಅಡುಗೆ ಅದುವೆ ಮಲೆನಾಡಿನ ಸ್ಪೆಷಲ್​ ಬಾದಾಮಿ ಪಾಯಸ.

ಮಲೆನಾಡಿನ ಸ್ಪೆಷಲ್​ ಬಾದಾಮಿ ಪಾಯಸ ಮಾಡಲು ಬೇಕಾಗುವ ಸಾಮಾಗ್ರಿಗಳು ಬಾದಾಮಿ, ಹೆಸರು ಬೇಳೆ, ಅಕ್ಕಿ, ದ್ರಾಕ್ಷಿ- ಗೋಡಂಬಿ, ಏಲಕ್ಕಿ ಪುಡಿ, ತುಪ್ಪ, ಸಕ್ಕರೆ, ಹಾಲು.

ಮಲೆನಾಡಿನ ಸ್ಪೆಷಲ್​ ಬಾದಾಮಿ ಪಾಯಸ ಮಾಡುವ ವಿಧಾನ
ಮೊದಲು ಒಂದು ಪಾತ್ರೆಗೆ ತುಪ್ಪ ಹಾಕಿ ಅದು ಕಾದ ಮೇಲೆ ಹೆಸರು ಬೇಳೆ, ಅಕ್ಕಿ ಹಾಕಿ ಹುರಿದುಕೊಳ್ಳಿ. ಬಳಿಕ ಒಂದು ಪಾತ್ರೆಗೆ ತುಪ್ಪು ಹಾಕಿ, ಗೋಡಂಬಿ, ದ್ರಾಕ್ಷಿ, ಬಾದಾಮಿ ಹಾಕಿ ಹುರಿದಿಟ್ಟುಕೊಳ್ಳಿ. ನಂತರ ಒಂದು ಪಾತ್ರೆಗೆ ಹಾಲು ಹಾಕಿ, ಅದು ಕುದಿ ಬಂದ ಮೇಲೆ ಹುರಿದ ಹೆಸರು ಬೇಳೆ, ಅಕ್ಕಿ, ಸಕ್ಕರೆ, ಏಲಕ್ಕಿ ಪುಡಿ, ಹುರಿದ ಗೋಡಂಬಿ, ದ್ರಾಕ್ಷಿ, ಬಾದಾಮಿ, ತುಪ್ಪ ಹಾಕಿದರೆ. ರುಚಿಕರವಾದ ಮಲೆನಾಡಿನ ಸ್ಪೆಷಲ್​ ಬಾದಾಮಿ ಪಾಯಸ ಸವಿಯಲು ಸಿದ್ಧ.

ಇದನ್ನೂ ಓದಿ:
ಶಾವಿಗೆಯಲ್ಲೂ ಚಿಕನ್ ಬಿರಿಯಾನಿ ಮಾಡಬಹುದು; ಸುಲಭವಾಗಿ ಮನೆಯಲ್ಲಿ ತಯಾರಿಸಿ

ಮಾವಿನ ಹಣ್ಣಿನ ಕೇಸರಿ ಬಾತ್; 20 ನಿಮಿಷಗಳಲ್ಲಿ ಸರಳ ವಿಧಾನದ ಮೂಲಕ ತಯಾರಿಸಿ