ಮಶ್ರೂಮ್​ ಬಿರಿಯಾನಿ; ಸರಳ ವಿಧಾನದಲ್ಲಿ ಮಾಡಿ ಸವಿಯಿರಿ

| Updated By: preethi shettigar

Updated on: Aug 14, 2021 | 2:25 PM

ಪ್ರತಿದಿನವು ಪ್ರಯೋಗ ಮಾಡುವುದು ಭೋಜನ ಪ್ರೀಯರಿಗೆ ಹೆಚ್ಚು ಖುಷಿಯನ್ನು ಕೊಡುವ ವಿಚಾರ. ಹೀಗಾಗಿ ನಾವು ಇಂದು ಮಶ್ರೂಮ್​ ಬಿರಿಯಾನಿ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.

ಕಾಲಕ್ಕೆ ವಿಶೇಷವಾದ ಒಂದಷ್ಟು ರೆಸಿಪಿಗಳನ್ನು ತಿಳಿದುಕೊಳ್ಳುವುದು ಮುಖ್ಯ ಎನಿಸಿಕೊಳ್ಳುತ್ತದೆ. ಏಕೆಂದರೆ ರುಚಿಕರವಾದ ಅಡುಗೆಯನ್ನು( Cooking) ಮಾಡುವುದರ ಜೊತೆಗೆ ಹೊಸತೆನೋ ಒಂದನ್ನು ಪ್ರತಿದಿನವು ಪ್ರಯೋಗ ಮಾಡುವುದು ಭೋಜನ ಪ್ರೀಯರಿಗೆ ಹೆಚ್ಚು ಖುಷಿಯನ್ನು ಕೊಡುವ ವಿಚಾರ. ಹೀಗಾಗಿ ನಾವು ಇಂದು ಮಶ್ರೂಮ್​ ಬಿರಿಯಾನಿ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.

ಮಶ್ರೂಮ್​ ಬಿರಿಯಾನಿ ಮಾಡಲು ಬೇಕಾಗುವ ಸಾಮಾಗ್ರಿಗಳು ಅಕ್ಕಿ, ಮಶ್ರೂಮ್, ಬಟಾಣಿ, ಪುದೀನಾ ಸೊಪ್ಪು, ಕೊತ್ತಂಬರಿ ಸೊಪ್ಪು, ಈರುಳ್ಳಿ, ಟೊಮೆಟೋ, ಅಡುಗೆ ಎಣ್ಣೆ, ತುಪ್ಪ, ನಿಂಬೆ ಹಣ್ಣು, ಮೊಸರು, ಹಸಿ ಮೆಣಸಿನಕಾಯಿ, ಚಕ್ಕೆ, ಲವಂಗ, ಏಲಕ್ಕಿ, ಕಸೂರಿ ಮೇಥಿ, ಖಾರದ ಪುಡಿ, ಗರಂ ಮಸಾಲೆ, ಉಪ್ಪು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ದನಿಯಾ ಪುಡಿ.

ಮಶ್ರೂಮ್​ ಬಿರಿಯಾನಿ ಮಾಡುವ ವಿಧಾನ
ಮೊದಲು ಒಂದು ಕುಕ್ಕರ್​ಗೆ ಅಡುಗೆ ಎಣ್ಣೆ ಹಾಕಿ ಅದು ಕಾದ ಮೇಲೆ, ತುಪ್ಪ, ಚಕ್ಕೆ, ಲವಂಗ, ಏಲಕ್ಕಿ, ಕಸೂರಿ ಮೇಥಿ, ಈರುಳ್ಳಿ, ಹಸಿ ಮೆಣಸಿನಕಾಯಿ ಹಾಕಿ ಫ್ರೈ ಮಾಡಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಪುದೀನಾ ಸೊಪ್ಪು, ಟೊಮೆಟೋ, ಕೊತ್ತಂಬರಿ ಸೊಪ್ಪು, ಖಾರದ ಪುಡಿ, ಗರಂ ಮಸಾಲೆ, ದನಿಯಾ ಪುಡಿ, ಮಶ್ರೂಮ್, ಬಟಾಣಿ ಹಾಕಿ ಫ್ರೈ ಮಾಡಿ. ನಂತರ ಉಪ್ಪು, ಮೊಸರು, ನೆನೆಸಿದ ಅಕ್ಕಿ, ನೀರು, ಲಿಂಬೆ ಹಣ್ಣಿನ ರಸ ಹಾಕಿ ಚೆನ್ನಾಗಿ ಮಿಕ್ಸ್​ ಮಾಡಿ, ಕುಕ್ಕರ್​ ಮುಚ್ಚಳ ಮುಚ್ಚಿ 1 ವಿಜಿಲ್​ ಬರಬೇಕು. ಈಗ ರುಚಿಕರವಾದ ಮಶ್ರೂಮ್​ ಬಿರಿಯಾನಿ ಸವಿಯಲು ಸಿದ್ಧ.

ಇದನ್ನೂ ಓದಿ:
ಮಲೆನಾಡು ಸ್ಪೆಷಲ್ ಎಡಿಮಿ; ಸರಳ ವಿಧಾನದಲ್ಲಿ ಮಾಡಿ ಸವಿಯಿರಿ

ಉತ್ತರ ಕರ್ನಾಟಕ ಸ್ಪೆಷಲ್ ಮೆಂತೆ ಸೊಪ್ಪು ಕಡಬು; ಸರಳ ವಿಧಾನದಲ್ಲಿ ಮಾಡಿ ಸವಿಯಿರಿ

Published on: Jul 26, 2021 08:16 AM