ಮಟನ್ ದೊನ್ನೆ ಬಿರಿಯಾನಿ; ಮನೆಯಲ್ಲೇ ಸರಳ ವಿಧಾನದ ಜತೆ ಮಾಡಿ ಸವಿಯಿರಿ
ಮಟನ್ ಕಬಾಬ್, ಸುಕ್ಕ, ಬಿರಿಯಾನಿ, ಹೀಗೆ ಹಲವು ಬಗೆ ಇದೆ. ಹೀಗಾಗಿ ಮಟನ್ ದೊನ್ನೆ ಬಿರಿಯಾನಿ ಮಾಡುವುದು ಹೇಗೆ ಎಂದು ಯೋಚಿಸುತ್ತಿದ್ದರೆ, ಅದಕ್ಕೆ ಉತ್ತರ ಇಲ್ಲಿದೆ. ಸರಳ ವಿಧಾನದ ಜತೆ ಮಟನ್ ದೊನ್ನೆ ಬಿರಿಯಾನಿ ಮಾಡಿ ಸವಿಯಿರಿ.
ನಾನ್ ವೆಜ್ ಪ್ರಿಯರಿಗೆ ದಿನಕ್ಕೆ ಒಂದಿಲ್ಲಾ ಒಂದು ಹೊಸ ತರಹದ ಅಡುಗೆಯನ್ನು ಸವಿಯುವ ಬಯಕೆ ಇರುತ್ತದೆ. ಅದರಲ್ಲೂ ಮಟನ್ ಇಷ್ಟಪಡುವವರು ಹೆಚ್ಚು ವೈವಿಧ್ಯತೆಯನ್ನು ಇಷ್ಟಪಡುತ್ತಾರೆ. ಮಟನ್ ಕಬಾಬ್, ಸುಕ್ಕ, ಬಿರಿಯಾನಿ, ಹೀಗೆ ಹಲವು ಬಗೆ ಇದೆ. ಹೀಗಾಗಿ ಇಂದು ಮಟನ್ ದೊನ್ನೆ ಬಿರಿಯಾನಿ ಮಾಡುವುದು ಹೇಗೆ ಎಂದು ಯೋಚಿಸುತ್ತಿದ್ದರೆ, ಅದಕ್ಕೆ ಉತ್ತರ ಇಲ್ಲಿದೆ. ಸರಳ ವಿಧಾನದ ಜತೆ ಮಟನ್ ದೊನ್ನೆ ಬಿರಿಯಾನಿ ಮಾಡಿ ಸವಿಯಿರಿ.
ಮಟನ್, ಮೊಸರು, ಖಾರದ ಪುಡಿ, ಅರಿಶಿಣ, ಉಪ್ಪು, ಪಲಾವ್ ಎಲೆ, ಏಲಕ್ಕಿ, ಅನಾನಸ್ ಹೂವು, ಲವಂಗ, ಚಕ್ಕೆ, ಜಾವಿತ್ರಿ, ಮರಾಠಿ ಮೊಗ್ಗು, ಶುಂಠಿ- ಬೆಳ್ಳುಳ್ಳಿ ಪೇಸ್ಟ್, ಲಿಂಬೆ ಹಣ್ಣು, ಹಸಿ ಮೆಣಸಿನಕಾಯಿ, ಕರಿ ಮೆಣಸು, ಕಸೂರಿ ಮೇಥಿ, ನೆನೆಸಿದ ಜೀರಾ ಅಕ್ಕಿ, ಸೋಂಪು, ಈರುಳ್ಳಿ, ಪುದೀನಾ ಸೊಪ್ಪು, ಕೊತ್ತುಂಬರಿ ಸೊಪ್ಪು, ಮೆಂತೆ ಸೊಪ್ಪು,
ಮೊದಲು ಒಂದು ಬೌಲ್ ಅಲ್ಲಿ ಮಟನ್, ಮೊಸರು, ಖಾರದ ಪುಡಿ, ಅರಿಶಿಣ, ಉಪ್ಪು, ಶುಂಠಿ- ಬೆಳ್ಳುಳ್ಳಿ ಪೇಸ್ಟ್ ಹಾಕಿ ಅದನ್ನು ಚೆನ್ನಾಗಿ ಕಲಸಿ ತೆಗೆದಿಟ್ಟುಕೊಳ್ಳಿ. ಬಳಿಕ ಒಂದು ಪಾತ್ರೆಗೆ ಸ್ವಲ್ಪ ಅಡುಗೆ ಎಣ್ಣೆ ಹಾಕಿ ಪಲಾವ್ ಎಲೆ, ಏಲಕ್ಕಿ, ಅನಾನಸ್ ಹೂವು, ಲವಂಗ, ಚಕ್ಕೆ, ಜಾವಿತ್ರಿ, ಕರಿ ಮೆಣಸು, ಕಸೂರಿ ಮೇಥಿ, ಮರಾಠಿ ಮೊಗ್ಗು, ಈರುಳ್ಳಿ. ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಮೆಂತೆ ಸೊಪ್ಪು, ಅರಿಶಿಣ, ಉಪ್ಪು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಇದನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಿ.
ಕುಕ್ಕರ್ಗೆ ಅಡುಗೆ ಎಣ್ಣೆ ಹಾಕಿ, ಕಲಸಿಟ್ಟುಕೊಂಡ ಮಟನ್ ಮತ್ತು ರುಬ್ಬಿದ ಮಿಶ್ರಣ ಹಾಕಿ ಫ್ರೈ ಮಾಡಿಕೊಳ್ಳಬೇಕು. ನಂತರ ಇದಕ್ಕೆ ಒಂದು ಗ್ಲಾಸ್ ಬಿಸಿ ನೀರು ಹಾಕಿ. ನಂತರ ಕುಕ್ಕರ್ ಮುಚ್ಚಳ ಮುಚ್ಚಿ 4 ವಿಜಿಲ್ ಬರಿಸಿ. ನಂತರ ಒಂದು ಪಾತ್ರೆಗೆ ಎಣ್ಣೆ ಹಾಕಿ ಅದು ಕಾದ ಮೇಲೆ ನೆನೆಸಿದ ಅಕ್ಕಿ ರುಬ್ಬಿದ ಮಿಶ್ರಣ ಹಾಕಿ ಕಲಸಿ, ಬಳಿಕ ಬೇಯಿಸಿದ ಮಟನ್ ಹಾಕಿ. ನಂತರ ಒಂದು ಗ್ಲಾಸ್ ಬಿಸಿ ನೀರು ಹಾಕಿ ಕಲಸಿ. ಬಳಿಕ ಉಪ್ಪು, ನಿಂಬೆ ಹಣ್ಣಿನ ರಸ, ತುಪ್ಪ ಹಾಕಿ 10 ನಿಮಿಷ ಬೇಯಲು ಬಿಡಿ. ಈಗ ರುಚಿಕರವಾದ ಮಟನ್ ದೊನ್ನೆ ಬಿರಿಯಾನಿ ಸವಿಯಲು ಸಿದ್ಧ.
ಇದನ್ನೂ ಓದಿ: