Pizza: ಮನೆಯಲ್ಲೇ ಸರಳ ವಿಧಾನದ ಜತೆ ಪಿಜ್ಜಾ ಮಾಡಿ ಸವಿಯಿರಿ
ಸರಳ ವಿಧಾನದ ಜತೆಗೆ ಇವುಗಳನ್ನು ಮನೆಯಲ್ಲಿಯೇ ಮಾಡಬಹುದು. ಅದರಲ್ಲೂ ಪಿಜ್ಜಾವನ್ನು 20 ನಿಮಿಷಗಳಲ್ಲಿ ಮನೆಯಲ್ಲಿಯೇ ತಯಾರಿಸಬಹುದು. ಹಾಗಿದ್ದರೆ ಪಿಜ್ಜಾ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.
ಲಾಕ್ಡೌನ್ ಕಾಲಘಟ್ಟದಲ್ಲಿ ಹೊರಗಿನ ತಿಂಡಿಗಳನ್ನು ತಿನ್ನುವುದು ಅಷ್ಟು ಸಮಂಜಸವಲ್ಲ. ಹಾಗಂತ ರುಚಿಕರವಾದ ಪಿಜ್ಜಾ, ಬರ್ಗರ್ ಇವುಗಳನ್ನು ಬಿಟ್ಟು ಇರುವುದು ಹಲವರಿಗೆ ಕಷ್ಟ ಎನಿಸಬಹುದು. ಆದರೆ ಯೋಚಿಸುವ ಅಗತ್ಯ ಇಲ್ಲ. ಸರಳ ವಿಧಾನದ ಜತೆಗೆ ಇವುಗಳನ್ನು ಮನೆಯಲ್ಲಿಯೇ ಮಾಡಬಹುದು. ಅದರಲ್ಲೂ ಪಿಜ್ಜಾವನ್ನು 20 ನಿಮಿಷಗಳಲ್ಲಿ ಮನೆಯಲ್ಲಿಯೇ ತಯಾರಿಸಬಹುದು. ಹಾಗಿದ್ದರೆ ಪಿಜ್ಜಾ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.
ಪಿಜ್ಜಾ ಮಾಡಲು ಬೇಕಾಗುವ ಸಾಮಾಗ್ರಿಗಳು
ಮಿಯೋನೈಸ್, ಟೊಮೊಟೋ ಸಾಸ್, ಸ್ವಿಟ್ ಕಾರ್ನ್, ಪನ್ನೀರ್, ಚೀಸ್, ಈರುಳ್ಳಿ, ಟೊಮೆಟೋ, ಕ್ಯಾಪ್ಸಿಕಮ್, ಸೋಡಾ ಪುಡಿ, ಪಾಸ್ತಾ ಮಸಾಲಾ, ಖಾರದ ಪುಡಿ, ಉಪ್ಪು, ಚಿಲ್ಲಿ ಫ್ಲೆಕ್ಸ್, ಮೈದಾ ಹಿಟ್ಟು, ಮೊಸರು.
ಪಿಜ್ಜಾ ಮಾಡುವ ವಿಧಾನ
ಮೊದಲು ಒಂದು ಪಾತ್ರೆಗೆ ಮೈದಾಹಿಟ್ಟು, ಸೋಡಾ ಪುಡಿ ಮತ್ತು ಮೊಸರು ಹಾಕಿ ಚೆನ್ನಾಗಿ ಕಲಸಿಕೊಳ್ಳಿ, ನಂತರ ಒಂದು ಪಾತ್ರೆಗೆ ಈರುಳ್ಳಿ, ಟೊಮೆಟೋ, ಕ್ಯಾಪ್ಸಿಕಮ್, ಪಾಸ್ತಾ ಮಸಾಲಾ, ಖಾರದ ಪುಡಿ, ಉಪ್ಪು, ಮಿಯೋನೈಸ್ ಹಾಕಿ ಕಲಸಿಟ್ಟುಕೊಳ್ಳಿ. ನಂತರ ಕಲಸಿದ ಹಿಟ್ಟನ್ನು ಚಪಾತಿ ಆಕಾರಕ್ಕೆ ತಟ್ಟಿ ಅದನ್ನು ಪ್ಯಾನ್ನಲ್ಲಿ ಬೇಯಿಸಿ, ಬಳಿಕ ಅದರ ಮೇಲೆ ಮಿಯೋನೈಸ್, ಟೊಮೊಟೋ ಸಾಸ್, ಕಲಸಿಟ್ಟುಕೊಂಡ ಮಿಶ್ರಣ ಹಾಕಿ, ನಂತರ ಪನ್ನೀರ್, ಚೀಸ್, ಚಿಲ್ಲಿ ಫ್ಲೆಕ್ಸ್ ಹಾಕಿ, ಮತ್ತೆ ಪುನಃ ಪ್ಯಾನ್ನಲ್ಲಿ ಕಾಯಲು ಬಿಡಿ. ಈಗ ರುಚಿಕರವಾದ ಪಿಜ್ಜಾ ಸವಿಯಲು ಸಿದ್ಧ.
ಇದನ್ನೂ ಓದಿ:
ಶಾವಿಗೆಯಲ್ಲೂ ಚಿಕನ್ ಬಿರಿಯಾನಿ ಮಾಡಬಹುದು; ಸುಲಭವಾಗಿ ಮನೆಯಲ್ಲಿ ತಯಾರಿಸಿ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
