ಹೀರೇಕಾಯಿ ದೋಸೆ; ತರಕಾರಿ ಇಷ್ಟಪಡದವರಿಗಾಗಿ ಈ ವಿಧಾನವನ್ನು ಒಮ್ಮೆ ಅನುಸರಿಸಿ

ಕೆಲವೊಂದು ಅಡುಗೆಗಳಲ್ಲಿ ಮಕ್ಕಳಿಗೆ ಗೊತ್ತಾದಂತೆ ಅಥವಾ ಗೊತ್ತಾದರೂ ಆ ತರಕಾರಿಗಳು ರುಚಿಕರವೆನಿಸುವಂತೆ ಮಾಡಬಹುದು. ಅಂತಹದ್ದೇ ಒಂದು ಅಡುಗೆ ಹೀರೇಕಾಯಿ ದೋಸೆ. ಹೀರೆಕಾಯಿ ತಿನ್ನಲು ಹಿಂದೇಟು ಹಾಕುವವರಿಗಾಗಿ ಈ ವಿನೂತನ ಶೈಲಿಯ ರೆಸಿಪಿಯನ್ನು ಮಾಡಿ.


 

ಮಕ್ಕಳು ಸಾಮಾನ್ಯವಾಗಿ ತರಕಾರಿಗಳನ್ನು ಇಷ್ಟಪಡುವುದಿಲ್ಲ. ಹಾಗಂತ ಮಕ್ಕಳು ತಿನ್ನದೆ ಇದ್ದರೆ ಬೇಡ ಎಂದು ಬಿಡುವುದು ಕೂಡ ಒಳ್ಳೆಯದಲ್ಲ. ಹೀಗಾಗಿ ತಾಯಂದಿರಿಗೆ ಪೌಷ್ಟಿಕಾಂಶ ಭರಿತ ಆಹಾರವನ್ನು ಮಕ್ಕಳಿಗೆ ತಿನ್ನಿಸುವುದು ಒಂದು ಸವಾಲಾಗಿರುತ್ತದೆ. ಆದರೆ ಕೆಲವೊಂದು ಅಡುಗೆಗಳಲ್ಲಿ ಮಕ್ಕಳಿಗೆ ಗೊತ್ತಾದಂತೆ ಅಥವಾ ಗೊತ್ತಾದರೂ ಆ ತರಕಾರಿಗಳು ರುಚಿಕರವೆನಿಸುವಂತೆ ಮಾಡಬಹುದು. ಅಂತಹದ್ದೇ ಒಂದು ಅಡುಗೆ ಹೀರೇಕಾಯಿ ದೋಸೆ. ಹೀರೇಕಾಯಿ ತಿನ್ನಲು ಹಿಂದೇಟು ಹಾಕುವವರಿಗಾಗಿ ಈ ವಿನೂತನ ಶೈಲಿಯ ರೆಸಿಪಿಯನ್ನು ಮಾಡಿ.

ಹೀರೇಕಾಯಿ ದೋಸೆ ಮಾಡಲು ಬೇಕಾದ ಸಾಮಾಗ್ರಿಗಳು ನೆನಸಿದ ಅಕ್ಕಿ, ಜೀರಿಗೆ, ಕೊತ್ತಂಬರಿ, ಉಪ್ಪು, ತೆಂಗಿನಕಾಯಿ ತುರಿ, ಒಣ ಮೆಣಸಿನಕಾಯಿ, ಹುಳಿ, ಬೆಲ್ಲ ಹಾಗೂ ಹೀರೇಕಾಯಿ.

ಹೀರೇಕಾಯಿ ದೋಸೆ ಮಾಡುವ ವಿಧಾನ
ಮೂರು ಗಂಟೆಗಳ ಕಾಲ ನೆನಸಿದ ಅಕ್ಕಿಯನ್ನು ಮಿಕ್ಸಿಗೆ ಹಾಕಿ. ನಂತರ ಅದಕ್ಕೆ ಕೊತ್ತೊಂಬರಿ ಕಾಳು, ಜೀರಿಗೆ, ಒಣ ಮೆಣಸಿನಕಾಯಿ, ಹುಣಸೆಹಣ್ಣು, ತೆಂಗಿನಕಾಯಿ ತುರಿ, ಬೆಲ್ಲ, ಉಪ್ಪು ಮತ್ತು ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ರುಬ್ಬಿಕೊಳ್ಳಬೇಕು. ರುಬ್ಬಿದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ, ಬಳಿಕ ಒಲೆ ಮೇಲೆ ಕಾವಲಿ ಇಟ್ಟು, ಕಾವಲಿಗೆ ಎಣ್ಣೆ ಹಾಕಿಕೊಳ್ಳಿ, ನಂತರ ಹೀರೇಕಾಯಿಯನ್ನು ಹಾಕಿಕೊಳ್ಳಬೇಕು. ಬಳಿಕ ಹೀರೇಕಾಯಿ ಮೇಲೆ ರುಬ್ಬಿದ ಹಿಟ್ಟನ್ನು ಹಾಕಿ ಮೇಲೆ ಎಣ್ಣೆ ಹಾಕಿ ಅದು ಬೆಂದ ಮೇಲೆ ದೋಸೆಯನ್ನು ತಿರುವಿ ಹಾಕಬೇಕು. ಆದು ಕಾದ ಮೇಲೆ ಬಿಸಿ ಬಿಸಿಯಾದ ಹೀರೇಕಾಯಿ ದೋಸೆ ಸವಿಯಲು ಸಿದ್ಧ.

ಇದನ್ನೂ ಓದಿ:

ಮಾವಿನ ಹಣ್ಣಿನ ಕೇಸರಿ ಬಾತ್; 20 ನಿಮಿಷಗಳಲ್ಲಿ ಸರಳ ವಿಧಾನದ ಮೂಲಕ ತಯಾರಿಸಿ

ಪಾವ್ ಬಾಜಿ; 15 ನಿಮಿಷದಲ್ಲಿ ನಿಮಗಿಷ್ಟವಾದ ಚಾಟ್ಸ್ ಮನೆಯಲ್ಲೇ ಮಾಡಿ ಸವಿಯಿರಿ