ಉತ್ತರ ಕರ್ನಾಟಕ ಸ್ಪೆಷಲ್ ಎಣ್ಣೆ ಬದನೆಕಾಯಿ; ಸರಳ ವಿಧಾನದಲ್ಲಿ ಇಂದೇ ಮಾಡಿ ಸವಿಯಿರಿ
ಬದಲನೆಕಾಯಿಯಿಂದ ಯಾವೇಲ್ಲ ಅಡುಗೆಯನ್ನು ಮಾಡಬಹುದು ಎಂದರೆ ಒಬ್ಬೊಬ್ಬರದ್ದು, ಒಂದೊಂದು ರೆಸಿಪಿ ಇರುತ್ತದೆ. ಹಾಗಿದ್ದರೆ ಇಂದು ಎಣ್ಣೆ ಬದನೆಕಾಯಿ ತಯಾರಿಸುವುದು ಹೇಗೆ ಎಂದು ತಿಳಿಯೋಣ.
ರುಚಿಕರವಾದ ಅಡುಗೆಯನ್ನು ಮಾಡುವುದರ ಜತೆಗೆ ಹೊಸತೆನೋ ಒಂದನ್ನು ಪ್ರತಿದಿನವು ಪ್ರಯೋಗ ಮಾಡುವುದು ಭೋಜನ ಪ್ರಿಯರಿಗೆ ಹೆಚ್ಚು ಖುಷಿಯನ್ನು ಕೊಡುವ ವಿಚಾರ. ಬದಲನೆಕಾಯಿಯಿಂದ ಯಾವೇಲ್ಲ ಅಡುಗೆಯನ್ನು ಮಾಡಬಹುದು ಎಂದರೆ ಒಬ್ಬೊಬ್ಬರದ್ದು, ಒಂದೊಂದು ರೆಸಿಪಿ ಇರುತ್ತದೆ. ಹಾಗಿದ್ದರೆ ಇಂದು ಎಣ್ಣೆ ಬದನೆಕಾಯಿ ತಯಾರಿಸುವುದು ಹೇಗೆ ಎಂದು ತಿಳಿಯೋಣ.
ಎಣ್ಣೆ ಬದನೆಕಾಯಿ ಮಾಡಲು ಬೇಕಾಗುವ ಸಾಮಾಗ್ರಿಗಳು ಬದನೆಕಾಯಿ, ಟೊಮೆಟೋ, ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಜೀರಿಗೆ, ಇಂಗು, ಪುದೀನಾ ಸೊಪ್ಪು, ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ, ಶುಂಠಿ, ಕಡಲೆಕಾಯಿ, ಕರಿಬೇವು, ಉಪ್ಪು, ಸಾಸಿವೆ, ಚಕ್ಕೆ ಲವಂಗ, ಏಲಕ್ಕಿ, ಕರಿ ಮೆಣಸು, ಖಾರದ ಪುಡಿ, ಅಡುಗೆ ಎಣ್ಣೆ.
ಎಣ್ಣೆ ಬದನೆಕಾಯಿ ಮಾಡುವ ವಿಧಾನ
ಜೀರಿಗೆ, ಬೆಳ್ಳುಳ್ಳಿ, ಶುಂಠಿ, ಅರಿಶಿಣ, ಸಾಸಿವೆ, ಚಕ್ಕೆ ಲವಂಗ, ಏಲಕ್ಕಿ, ಕರಿ ಮೆಣಸು, ಕಡಲೆಕಾಯಿ, ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಖಾರದ ಪುಡಿ, ಉಪ್ಪು ಹಾಕಿ ರುಬ್ಬಿಕೊಳ್ಳಿ. ಬಳಿಕ ಬದನೆಕಾಯಿ ಕಟ್ ಮಾಡಿ ಅದರ ಮಧ್ಯದಲ್ಲಿ ರುಬ್ಬಿದ ಮಿಶ್ರಣ ಹಾಕಿ. ಒಂದು ಪಾತ್ರೆಗೆ ಎಣ್ಣೆ ಹಾಕಿ ಅದು ಕಾದ ಮೇಲೆ, ಸಾಸಿವೆ, ಜೀರಿಗೆ, ಕರಿಬೇವು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಇಂಗು, ಈರುಳ್ಳಿ, ಟೊಮೆಟೋ, ಅರಿಶಿಣ, ಖಾರದ ಪುಡಿ, ಬದನೆಕಾಯಿ ಹಾಕಿ ಬೇಯಿಸಿದರೆ, ರುಚಿಕರವಾದ ಎಣ್ಣೆ ಬದನೆಕಾಯಿ ಸವಿಯಲು ಸಿದ್ಧ.
ಇದನ್ನೂ ಓದಿ:
ಕರಾವಳಿ ಸ್ಪೇಷಲ್ ಮಾವಿನಕಾಯಿ ಚಟ್ನಿ; ಸರಳ ವಿಧಾನದ ಜತೆ ಮಾಡಿ ಸವಿಯಿರಿ