ಕರ್ನಾಟಕದಲ್ಲಿ ಕಾಂಗ್ರೆಸ್ ಸೋತರೆ ತೆಲಂಗಾಣದ ಕೆ ಚಂದ್ರಶೇಖರ್ ರಾವ್ ಅವರಿಗಾಗುವ ಲಾಭವೇನು? ಹೆಚ್ ಡಿ ಕುಮಾರಸ್ವಾಮಿ

| Updated By: Digi Tech Desk

Updated on: Jan 20, 2023 | 5:36 PM

ಜಮೀರ್ ಯಾಕೆ ಹೈದರಾಬಾದ್ ಗೆ ಹೋಗಿದ್ದರೆನ್ನುವುದು ತಮಗೆ ಗೊತ್ತಿಲ್ಲ, ಅವರನ್ನೇ ಕೇಳಿ ತಿಳಿದುಕೊಳ್ಳಿ ಅಂತ ಕುಮಾರಸ್ವಾಮಿ ಹೇಳಿದರು.

ವಿಜಯಪುರ:  ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ತೆಲಂಗಾಣದ ಮುಖ್ಯಮಂತ್ರಿ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ ಕೆ ಚಂದ್ರಶೇಖರ್ ರಾವ್ (K Chandrashekar Rao) ಅವರು 500 ಕೋಟಿ ರೂ. ಗಳನ್ನು ನೀಡಿದ್ದಾರೆ ಮತ್ತು ಅದೇ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ (Zameer Ahmed) ಅವರು ಹೈದರಾಬಾದ್ ಗೆ ಹೋಗಿ ಚಂದ್ರಶೇಖರ್ ಅವರನ್ನು ಭೇಟಿಯಾಗಿರುವ ವದಂತಿಗಳ ಬಗ್ಗೆ ಜೆಡಿ(ಎಸ್) ನಾಯಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಗೊಂದಲ, ಸಂದೇಹಗಳನ್ನು ವ್ಯಕ್ತಪಡಿಸಿದರು. ಕೆಸಿಆರ್ ಯಾರಿಗೆ ಹಣ ಕೊಟ್ಟಿದ್ದಾರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಸೋತರೆ ಅವರಿಗೆ ಆಗುವ ಲಾಭವೇನು? ಅವರ ಹೋರಾಟ ಬಿಜೆಪಿಯೊಂದಿಗಿದೆ ಕಾಂಗ್ರೆಸ್ ನೊಂದಿಗೆ ಅಲ್ಲ, ಎಂದು ಕುಮಾರಸ್ವಾಮಿ ಹೇಳಿದರು. ಜಮೀರ್ ಯಾಕೆ ಹೈದರಾಬಾದ್ ಗೆ ಹೋಗಿದ್ದರೆನ್ನುವುದು ತಮಗೆ ಗೊತ್ತಿಲ್ಲ, ಅವರನ್ನೇ ಕೇಳಿ ತಿಳಿದುಕೊಳ್ಳಿ ಅಂತ ಕುಮಾರಸ್ವಾಮಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published on: Jan 20, 2023 05:03 PM