ಬೆಂಗಳೂರು: ಪ್ರಿಯತಮೆಯ ಮೊಬೈಲ್ ಕಸಿದುಕೊಂಡು ಓಡುತ್ತಿದ್ದ ಪ್ರಿಯತಮ, ಚೇಸ್ ಮಾಡಿ ಹಿಡಿದ ಟ್ರಾಫಿಕ್ ಕಾನ್ಸ್ಟೇಬಲ್
ಸಂಚಾರಿ ಮಹಿಳಾ ಕಾನ್ಸ್ಟೇಬಲ್ ಅವರ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇವರ ದಕ್ಷತೆ, ಪ್ರಾಮಾಣಿಕತೆಗೆ ಸಾರ್ವಜನಿಕರು ಸೆಲ್ಯುಟ್ ಮಾಡುತ್ತಿದ್ದಾರೆ. ಅಂದಹಾಗೆ ಈ ಸಂಚಾರಿ ಮಹಿಳಾ ಕಾನ್ಸ್ಟೇಬಲ್ ಯಾರು? ಇವರು ಮಾಡಿದ ಕಾರ್ಯವಾದರು ಏನು? ಅಂತಿರಾ ಈ ಸ್ಟೋರಿ ಓದಿ...
ಬೆಂಗಳೂರು, ಫೆ.15: ಸಂಚಾರಿ ಮಹಿಳಾ ಕಾನ್ಸ್ಟೇಬಲ್ ಅವರ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇವರ ದಕ್ಷತೆ, ಪ್ರಾಮಾಣಿಕತೆಗೆ ಸಾರ್ವಜನಿಕರು ಸೆಲ್ಯುಟ್ ಮಾಡುತ್ತಿದ್ದಾರೆ. ಅಂದಹಾಗೆ ಈ ಸಂಚಾರಿ ಮಹಿಳಾ ಕಾನ್ಸ್ಟೇಬಲ್ ಯಾರು? ಇವರು ಮಾಡಿದ ಕಾರ್ಯವಾದರು ಏನು? ಅಂತಿರಾ ಈ ಸ್ಟೋರಿ ಓದಿ… ತನ್ನ ಪ್ರಿಯತಮೆಗೆ ಸರ್ಪ್ರೈಸ್ ನೀಡಲು ಬೆಂಗಳೂರಿಗೆ ಬಂದಿದ್ದಾನೆ. ಈತನ ಪ್ರಿಯತಮೆ ಬೆಂಗಳೂರಿನ ಅಶೋಕ್ ನಗರದ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದಾಳೆ. ತನ್ನ ಪ್ರೇಯಸಿಯೊಂದಿಗೆ ಪ್ರೇಮಿಗಳ ದಿನಾಚರಣೆ ಆಚರಿಸಲು ಒಂದು ದಿನ ಮುಂಚಿತವಾಗಿಯೇ ಅಂದರೆ ಫೆ.13 ರಂದು ರಾಜಧಾನಿ ಬೆಂಗಳೂರಿಗೆ ಬಂದಿದ್ದಾನೆ. ಬಳಿಕ ನೇರವಾಗಿ ಪ್ರಿಯತಮೆಯ ಕಾಲೇಜು ಬಳಿ ಹೋಗಿದ್ದಾನೆ. ಅಲ್ಲಿ ತನ್ನ ಪ್ರಿಯತಮೆ ಮತ್ತೊಬ್ಬ ಯುವಕನೊಂದಿಗೆ ಆತ್ಮೀಯವಾಗಿ ಇದ್ದಿದ್ದು ಕಂಡು ಪ್ರಿಯತಮ ರೊಚ್ಚಿಗೆದ್ದಿದ್ದಾನೆ. ಬಳಿಕ ಪ್ರೇಯಸಿಯನ್ನು ಪ್ರಶ್ನಿಸಿ ಜಗಳ ಮಾಡಿದ್ದಾನೆ.
ಆಗ ಯುವತಿ ನನ್ನೊಂದಿಗೆ ಇರುವನು ನನ್ನ ಗೆಳೆಯ, ಪ್ರಿಯಕರನಲ್ಲ ಎಂದು ಪ್ರಿಯತಮನಿಗೆ ಹೇಳಿದ್ದಾಳೆ. ಹಾಗಾದ್ದರೆ ನಿನ್ನ ಮೊಬೈಲ್ ಕೊಡು ಚೆಕ್ ಮಾಡುತ್ತೇನೆ ಎಂದು ಪ್ರಿಯಕರ, ಪ್ರೇಯಸಿಗೆ ಹೇಳಿದ್ದಾನೆ. ಇದಕ್ಕೆ ಯುವತಿ ಒಪ್ಪದಿದ್ದಾಗ ಮೊಬೈಲ್ ಕಸಿದು ಚೆಕ್ ಮಾಡಲು ಮುಂದಾಗಿದ್ದಾನೆ. ಈ ವೇಳೆ ಮೊಬೈಲ್ ವಾಪಸ್ ಕೊಡುವಂತೆ ಯುವತಿ ಜೋರಾಗಿ ಚೀರಿದ್ದಾಳೆ.
ಯುವತಿ ಚೀರುತ್ತಿದ್ದಂತೆ ಮೊಬೈಲ್ನೊಂದಿಗೆ ಯುವಕ ಅಲ್ಲಿಂದ ಓಡಿದ್ದಾನೆ. ಯುವಕನ ಹಿಂದೆ ಯುವತಿಯ ಮತ್ತೊಬ್ಬ ಗೆಳೆಯನು ಓಡಿದ್ದಾನೆ. ಈ ವೇಳೆ ಅಲ್ಲೇ ಇದ್ದ ಅಶೋಕ್ ನಗರ ಸಂಚಾರಿ ಮಹಿಳಾ ಕಾನ್ಸ್ ಟೇಬಲ್ ಷಾಜಿಯಾ ತಬಸುಂ ಅವರು ಯುವಕನನ್ನ ಕಳ್ಳ ಎಂದು ತಿಳಿದು ಚೇಸ್ ಮಾಡಿಕೊಂಡು ಹೋಗಿ ಹಿಡಿದಿದ್ದಾರೆ. ಬಳಿಕ ಯುವಕನನ್ನು ಅಶೋಕ್ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಯುವಕನನ್ನ ವಿಚಾರಣೆ ಮಾಡಿದ ಬಳಿಕ ಅಸಲಿ ವಿಚಾರ ಬಯಲಿಗೆ ಬಂದಿದೆ. ನಂತರ ಯುವತಿ ಹಾಗೂ ಯುವಕನಿಗೆ ಬುದ್ದಿ ಹೇಳಿ ಅಶೋಕ್ ನಗರ ಪೊಲೀಸರು ಕಳುಹಿಸಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ