ರಾಜ್ಯಕ್ಕೆ ಅನ್ಯಾಯವಾಗಿದ್ದರೆ ಸರಿಪಡಿಸುವ ಪ್ರಯತ್ನ ಮಾಡುತ್ತೇನೆ ಅಂತ ಕುಮಾರಸ್ವಾಮಿ ಹೇಳಿದಾಗ ಸಚಿವರು ಮುಗಿಬಿದ್ದರು

ಸರ್ಕಾರ ಬರ ಪರಿಹಾರ ನಿಧಿಗಾಗಿ ಮನವಿ ಸಲ್ಲಿಸಿ 5 ತಿಂಗಳಾಗಿದೆ, ಕುಮಾರಸ್ವಾಮಿಯವರೇ ಹೇಳಿದಂತೆ ನರೇಗಾ ಯೋಜನೆಗೆ ಸಂಬಂಧಿಸಿದಂತೆ ಕೇವಲ 15 ದಿನಗಳಲ್ಲಿ 100 ದಿನಗಳ ನರೇಗಾ ಕೆಲಸದ ದಿನಗಳನ್ನು 150 ದಿನಗಳಲ್ಲಿ ವಿಸ್ತರಿಸಿಕೊಂಡು ಬಂದಿದ್ದಾರೆ. ತಮ್ಮ ಸರ್ಕಾರ ಪರಿಹಾರ ನಿಧಿಗಾಗಿ ಯಾವಾಗ ಮನವಿ ಸಲ್ಲಿಸಿದೆ ಎಂದು ಕುಮಾರಸ್ವಾಮಿಯವರಿಗೆ ಗೊತ್ತಿಲ್ಲವೇ ಅಂತ ಚಲುವರಾಯಸ್ವಾಮಿ ಪ್ರಶ್ನಿಸುತ್ತಾರೆ.

ರಾಜ್ಯಕ್ಕೆ ಅನ್ಯಾಯವಾಗಿದ್ದರೆ ಸರಿಪಡಿಸುವ ಪ್ರಯತ್ನ ಮಾಡುತ್ತೇನೆ ಅಂತ ಕುಮಾರಸ್ವಾಮಿ ಹೇಳಿದಾಗ ಸಚಿವರು ಮುಗಿಬಿದ್ದರು
|

Updated on: Feb 15, 2024 | 6:20 PM

ಬೆಂಗಳೂರು: ವಿಧಾನ ಸಭಾ ಬಜೆಟ್ ಅಧಿವೇಶನದಲ್ಲಿ ಇಂದು ಸುದೀರ್ಘವಾಗಿ ಮಾತಾಡಿದ ಜೆಡಿಎಸ್ ಶಾಸಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ವಿಷಯವನ್ನು ಮಂಡಿಸುವಾಗ ಹಳಿ ತಪ್ಪಿದ ಪ್ರಸಂಗ ಒಂದೆರಡು ಬಾರಿ ನಡೆಯಿತು. ತಾವು ಹೇಳಿದ ಮಾತಿಗೆ ಪುಷ್ಠಿ ನೀಡಲು ಮತ್ತೊಂದು ವಿಷಯವನ್ನು ಪ್ರಸ್ತಾಪಿಸಿಬಿಡುತ್ತಾರೆ. ರಾಜ್ಯದಲ್ಲಿ ಈಗ 7ಕೋಟಿ ಜನ ಆಯ್ಕೆ ಮಾಡಿರುವ ಸಿದ್ದರಾಮಯ್ಯ ಸರ್ಕಾರ (Siddaramaiah government) ಅಧಿಕಾರದಲ್ಲಿರೋದು ನಿಜ ಅದರೆ ತಮಗೂ ಕೆಲ ಜವಾಬ್ದಾರಿಗಳಿವೆ ಎಂದು ಹೇಳಿದ ಕುಮಾರಸ್ವಾಮಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ (PM Narendra Modi) ತಮ್ಮ ಮೇಲೆ ಗೌರವ ಇರೋದ್ರಿಂದ ಅದನ್ನು ಸದುಪಯೋಗ ಮಾಡಿಕೊಂಡು ರಾಜ್ಯಕ್ಕೆ ಅನ್ಯಾಯವಾಗಿದ್ದರೆ, ರಾಜ್ಯ ಸರಕಾರದ ಜೊತೆ ಕೈ ಜೋಡಿಸಿ ಅದನ್ನು ಸರಿಪಡಿಸುವ ವಿಶ್ವಾಸ ತನಗಿದೆ ಎಂದು ಹೇಳಿದಾಗ ಸಚಿವರಾದ ಎನ್ ಚಲುವರಾಯಸ್ವಾಮಿ ಮತ್ತು ಪ್ರಿಯಾಂಕ್ ಖರ್ಗೆ ಅವರು ಕುಮಾರಸ್ವಾಮಿ ಮೇಲೆ ಮುಗಿ ಬೀಳುತ್ತಾರೆ. ಸರ್ಕಾರ ಬರ ಪರಿಹಾರ ನಿಧಿಗಾಗಿ ಮನವಿ ಸಲ್ಲಿಸಿ 5 ತಿಂಗಳಾಗಿದೆ, ಕುಮಾರಸ್ವಾಮಿಯವರೇ ಹೇಳಿದಂತೆ ನರೇಗಾ ಯೋಜನೆಗೆ ಸಂಬಂಧಿಸಿದಂತೆ ಕೇವಲ 15 ದಿನಗಳಲ್ಲಿ 100 ದಿನಗಳ ನರೇಗಾ ಕೆಲಸದ ದಿನಗಳನ್ನು 150 ದಿನಗಳಲ್ಲಿ ವಿಸ್ತರಿಸಿಕೊಂಡು ಬಂದಿದ್ದಾರೆ. ತಮ್ಮ ಸರ್ಕಾರ ಪರಿಹಾರ ನಿಧಿಗಾಗಿ ಯಾವಾಗ ಮನವಿ ಸಲ್ಲಿಸಿದೆ ಎಂದು ಕುಮಾರಸ್ವಾಮಿಯವರಿಗೆ ಗೊತ್ತಿಲ್ಲವೇ ಅಂತ ಚಲುವರಾಯಸ್ವಾಮಿ ಪ್ರಶ್ನಿಸುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us