ಹುಬ್ಬಳ್ಳಿಯಲ್ಲಿ ಜೆಸಿಬಿ ಘರ್ಜನೆ: 47 ಮನೆಗಳು ನೆಲಸಮ, ಬೀದಿಗೆ ಬಂದ ಜನರ ಬದುಕು

Edited By:

Updated on: Dec 04, 2025 | 3:22 PM

ಇಂದು ಹುಬ್ಬಳ್ಳಿಯಲ್ಲಿ ಜೆಸಿಬಿ ಘರ್ಜನೆ ಮಾಡಿದೆ. ಸುಪ್ರೀಂಕೋರ್ಟ್ ಆದೇಶ ಹಿನ್ನಲೆ ಅಕ್ರಮವಾಗಿ ಕಟ್ಟಿದ್ದ ಮನೆಗಳನ್ನು ತೆರವು ಮಾಡಲಾಗಿದೆ. ಹುಬ್ಬಳ್ಳಿಯ ಉದಯನಗರದಲ್ಲಿರುವ ಒಟ್ಟು 47 ಮನೆಗಳನ್ನು ತೆರವು ಮಾಡಲಾಗಿದೆ. ಇದೀಗ ದಾಖಲಾತಿ ನೋಡದೆ ಮನೆ ಕಟ್ಟಿಕೊಂಡವರ ಬದುಕು ಬೀದಿಗೆ ಬಂದಿದೆ. ವಿಡಿಯೋ ನೋಡಿ.

ಹುಬ್ಬಳ್ಳಿ, ಡಿಸೆಂಬರ್​ 04: ಹುಬ್ಬಳ್ಳಿಯಲ್ಲಿ ಇಂದು ಜೆಸಿಬಿ ಘರ್ಜನೆ ಮಾಡಿದೆ. ಅಕ್ರಮವಾಗಿ ಕಟ್ಟಿದ್ದ 47 ಮನೆಗಳನ್ನು ನೆಲಸಮ ಮಾಡಲಾಗಿದೆ. ಸುಪ್ರೀಂಕೋರ್ಟ್ ಆದೇಶ ಹಿನ್ನಲೆ, ಹುಬ್ಬಳ್ಳಿಯ ಉದಯನಗರದಲ್ಲಿರುವ ಮನೆಗಳ ತೆರವು ಮಾಡಲಾಗಿದೆ. ದಾಖಲಾತಿ ನೋಡದೆ ಮನೆ ಕಟ್ಟಿಕೊಂಡವರ ಬದುಕು ಇದೀಗ ಬೀದಿಗೆ ಬಂದಿದೆ. ಸಿಕಂದರ್​​ ಎಂಬ ವ್ಯಕ್ತಿ ತನ್ನದೇ ಭೂಮಿ ಎಂದು ಮಾರಾಟ ಮಾಡಿದ್ದ. ಜಾಗಕ್ಕಾಗಿ ನಿವಾಸಿಗಳು ಸಾವಿರಾರು ರೂ. ಹಣ ನೀಡಿದ್ದರು. ಆದರೆ ಅದು ರಾಮರಾವ್ ಸಬನಿಸ್ ಎನ್ನುವವರಿಗೆ ಸೇರಿದ‌ ಜಾಗವಾಗಿದ್ದು, ಮೂಲ ದಾಖಲಾತಿ ಪರಿಶೀಲಿಸದೆ ಜನರು ಮೋಸ ಹೋಗಿದ್ದಾರೆ. ಇತ್ತ ಸುಪ್ರೀಂ ಕೋರ್ಟ್​ ರಾಮರಾವ್ ಪರ ತೀರ್ಪು ನೀಡಿದೆ. ಈ ಹಿನ್ನಲೆ ಪೊಲೀಸ್ ಬಂದೋಬಸ್ತ್​​ನಲ್ಲಿ ಮನೆಗಳ ತೆರವು ಮಾಡಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.