ಭರತನಾಟ್ಯ ಮಾಡುತ್ತಾ ಅಂಜನಾದ್ರಿ ಬೆಟ್ಟವೇರಿದ ಯುವತಿ: ಇಲ್ಲಿದೆ ಮನಮೋಹಕ ನೃತ್ಯ ವಿಡಿಯೋ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಚಿಕ್ಕರಾಂಪುರ ಗ್ರಾಮದ ಬಳಿಯಿರುವ ಅಂಜನಾದ್ರಿ ಬೆಟ್ಟವನ್ನು ಓರ್ವ ಯುವತಿ ಭರತನಾಟ್ಯ ಮಾಡುತ್ತಾ ಏರಿದ್ದಾರೆ. 575 ಮೆಟ್ಟಿಲುಗಳನ್ನು 8 ನಿಮಿಷ 54 ಸೆಕೆಂಡ್ನಲ್ಲಿ ಭರತನಾಟ್ಯ ಮಾಡುತ್ತಾ ಏರುವ ಮೂಲಕ ಸಾಧನೆ ಮಾಡಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಕೊಪ್ಪಳ, ಡಿಸೆಂಬರ್ 04: ಇತ್ತೀಚೆಗೆ ಯುವಕನೋರ್ವ 101 ಕೆಜಿ ತೂಕದ ಜೋಳದ ಚೀಲ ಹೊತ್ತು ಅಂಜನಾದ್ರಿ ಬೆಟ್ಟವನ್ನು ಏರಿದ್ದ. ಇದೀಗ ಯುವತಿಯೋರ್ವಳು ಭರತನಾಟ್ಯ ಮಾಡುತ್ತಾ 575 ಮೆಟ್ಟಿಲುಗಳನ್ನು ಏರಿದ್ದಾಳೆ. ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ನಿವಾಸಿ ಹರ್ಷಿತಾ, 8 ನಿಮಿಷ 54 ಸೆಕೆಂಡ್ನಲ್ಲಿ ನೃತ್ಯ ಮಾಡುತ್ತಾ ಅಂಜನಾದ್ರಿ ಬೆಟ್ಟವನ್ನು ಏರಿದ್ದಾಳೆ. ಸದ್ಯ ಹರ್ಷಿತಾಳ ಭರತನಾಟ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Dec 04, 2025 03:56 PM
Latest Videos
ಚಿನ್ನದಂಗಡಿ ದೋಚಿ ಬಸ್ ಸ್ಟ್ಯಾಂಡ್ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
