ಹುಬ್ಬಳ್ಳಿಯ ಪಂಚಾಕ್ಷರಿ ನಗರದಲ್ಲಿ ಗಣೇಶ ಪ್ರತಿಷ್ಠಾಪನೆ: ಪೂಜೆ ಸಲ್ಲಿಸಿ, ಆರತಿ ಬೆಳಗಿದ ಮುಸ್ಲಿಂ ಕುಟುಂಬ

| Updated By: ಸಾಧು ಶ್ರೀನಾಥ್​

Updated on: Sep 22, 2023 | 10:01 AM

ಹುಬ್ಬಳ್ಳಿಯ ನವನಗರದ ಪಂಚಾಕ್ಷರಿ ನಗರದಲ್ಲಿ ವಿನಾಯಕ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಈ ಗಣಪತಿಗೆ ನಿನ್ನೆ ಗುರುವಾರ ಮುಸ್ಲಿಂ ಕುಟುಂಬ ಪೂಜೆ ಸಲ್ಲಿಸಿ, ಆರತಿ ಬೆಳಗಿದರು. ಹಾಗಾಗಿ ಪಂಚಾಕ್ಷರಿ ನಗರದ ಗಣೇಶ ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಅಪರೂಪದ ಘಟನೆ ನಡೆದಿದೆ. 

ಹುಬ್ಬಳ್ಳಿಯ ನವನಗರದ ಪಂಚಾಕ್ಷರಿ ನಗರದಲ್ಲಿ ವಿನಾಯಕ ಮೂರ್ತಿಯನ್ನು ಪ್ರತಿಷ್ಠಾಪನೆ (Hubballi Ganesh Chaturthi) ಮಾಡಲಾಗಿದೆ. ಈ ಗಣಪತಿಗೆ ನಿನ್ನೆ ಗುರುವಾರ ಮುಸ್ಲಿಂ ಕುಟುಂಬ (Muslim Family) ಪೂಜೆ ಸಲ್ಲಿಸಿ, ಆರತಿ ಬೆಳಗಿದರು. ಹಾಗಾಗಿ ಪಂಚಾಕ್ಷರಿ ನಗರದ ಗಣೇಶ ಕೋಮು ಸೌಹಾರ್ದತೆಗೆ (Communal Harmony) ಸಾಕ್ಷಿಯಾದ ಅಪರೂಪದ ಘಟನೆ ನಡೆದಿದೆ. ಅಲಿಸಾಬ್ ನದಾಫ್​ ಗಣೇಶನ ಪೂಜೆಯಲ್ಲಿ ಭಾಗಿಯಾದ ಮುಸ್ಲಿಂ ಕುಟುಂಬ. ಮುಸ್ಲಲ್ಮಾನ ಬಾಂಧವರು ಪೂಜೆ ಸಲ್ಲಿಸಿ, ಆರತಿ (Puja, Aarti) ಬೆಳಗಿದರು. ಅಷ್ಟೇ ಅಲ್ಲ; ಅಲಿಸಾಬ್ ನಧಾಪ್ ವಿಶೇಷ ಪೂಜೆಯಲ್ಲಿ ಭಾಗಿಯಾಗಿ, ಪ್ರಸಾದ ವಿತರಣೆಯನ್ನೂ ಮಾಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ