ಹಣ ಪಡೆದು ಡಿಡಿಪಿಐ, ಬಿಇಓ ಗಳಿಂದ ಶಿಕ್ಷಕರ ವರ್ಗ: ರಾಯಚೂರಿನಲ್ಲಿ ಮಕ್ಕಳ ಪರದಾಟ -ಎಸ್ಎಫ್ಐ ಗಂಭೀರ ಆರೋಪ
ಶಿಕ್ಷಕರು ಇಲ್ಲದೆ ಮಕ್ಕಳು ಶಾಲೆಗೆ ಗೈರು, ಕೆಲ ಮಕ್ಕಳು ಕೆಲಸಕ್ಕೆ ಹಾಜರ್ ಆಗುತ್ತಿರುವುದು ಹೊರಗಿನ ಪ್ರಪಂಚಕ್ಕೆ ಗೋಚರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ವರ್ಗಾವಣೆಗೊಂಡ ಶಿಕ್ಷಕರನ್ನು ಬಿಡುಗಡೆಗೊಳಿಸದೆ, ತಡೆಹಿಡಿಯಲಾಗಿದೆ. ಆದ್ರೆ ಬಿಇಓಗಳು ಮತ್ತು ಡಿಡಿಪಿಐ ಹಣ ಪಡೆದು ಶಿಕ್ಷಕರ ವರ್ಗಾವಣೆ ಮಾಡುತ್ತಿರುವುದಾಗಿ ಎಸ್ಎಫ್ಐ ಸಂಘಟನೆ ಗಂಭೀರ ಆರೋಪ ಮಾಡಿದೆ.
ರಾಯಚೂರು: ಶಿಕ್ಷಕರ ವರ್ಗಾವಣೆ ಹಿನ್ನೆಲೆ ರಾಯಚೂರಿನಲ್ಲಿ ಶಿಕ್ಷಕರಿಲ್ಲದೇ ಮಕ್ಕಳು ವ್ಯಾಸಂಗಕ್ಕಾಗಿ ಪರದಾಡುವಂತಾಗಿದೆ. ಜಿಲ್ಲೆಯಲ್ಲಿ ಒಟ್ಟು 1675 ಶಾಲೆಗಳಿಗಿದ್ದು, 4000 ಕ್ಕು ಹೆಚ್ಚು ಶಿಕ್ಷಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ದಾಖಲಾತಿಯಲ್ಲಿ ಮಕ್ಕಳ ಹಾಜರಾತಿ ಮಾತ್ರ ಫುಲ್ ಎಂದು ನಮೂದಿಸಲಾಗುತ್ತಿದೆ. ಶಿಕ್ಷಕರು ಇಲ್ಲದೆ ಮಕ್ಕಳು ಶಾಲೆಗೆ ಗೈರು, ಕೆಲ ಮಕ್ಕಳು ಕೆಲಸಕ್ಕೆ ಹಾಜರ್ ಆಗುತ್ತಿರುವುದು ಹೊರಗಿನ ಪ್ರಪಂಚಕ್ಕೆ ಗೋಚರವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ವರ್ಗಾವಣೆಗೊಂಡ ಶಿಕ್ಷಕರನ್ನು ಬಿಡುಗಡೆಗೊಳಿಸದೆ, ತಡೆಹಿಡಿಯಲಾಗಿದೆ. ಆದ್ರೆ ಬಿಇಓಗಳು ಮತ್ತು ಡಿಡಿಪಿಐ ಹಣ ಪಡೆದು ಶಿಕ್ಷಕರ ವರ್ಗಾವಣೆ ಮಾಡುತ್ತಿರುವುದಾಗಿ ಎಸ್ಎಫ್ಐ ಸಂಘಟನೆ ಗಂಭೀರ ಆರೋಪ ಮಾಡಿದೆ. ಆದೇಶ ತಡೆ ಹಿಡಿದಿರೋ ಕಾರಣಕ್ಕೆ ಹಳೆಯ ದಿನಾಂಕಗಳನ್ನು ನಮೂದಿಸಿ ಶಿಕ್ಷಕರನ್ನು ಬಿಡುಗಡೆಗೊಳಿಸುತ್ತಿರುವ ಆರೋಪವೂ ಕೇಳಿಬಂದಿದೆ.
ಅತಿಥಿ ಶಿಕ್ಷಕರೂ ಅಬ್ಸೆಂಟ್ ಆದ್ರೆ ಆ ದಿನ ಇಡೀ ಶಾಲೆಗೆ ರಜೆ!
ಜಿಲ್ಲೆಯ 1675 ಶಾಲೆಯಲ್ಲಿ 3,90,659 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕರೇ ಮಕ್ಕಳಿಗೆ ಬೋಧನೆ ಮಾಡುತ್ತಿದ್ದಾರೆ. ಖಾಯಂ ಶಿಕ್ಷಕರು ಇಲ್ಲದೆ ಮಕ್ಕಳಿಗೆ ಪಾಠ ಇಲ್ಲವಾಗಿದೆ. 100 ಕ್ಕು ಹೆಚ್ಚು ಶಾಲೆಯಲ್ಲಿ ಒಬ್ಬರೇ ಒಬ್ಬರು ಖಾಯಂ ಶಿಕ್ಷಕರು ಇಲ್ಲ. ದೇವದುರ್ಗ-82, ಮಾನ್ವಿ-26, ಲಿಂಗಸೂಗೂರು-29, ರಾಯಚೂರು-09, ಸಿಂಧನೂರಿನ 14 ಶಾಲೆಯಲ್ಲಿ ಖಾಯಂ ಶಿಕ್ಷಕರೇ ಇಲ್ಲವಾಗಿದ್ದಾರೆ.
ಅತಿಥಿ ಶಿಕ್ಷಕರು ಶಾಲೆಗೆ ಬಂದ್ರೆ ಮಾತ್ರ ಮಕ್ಕಳಿಗೆ ಪಾಠ ನಡೆಯುತ್ತದೆ. ಅತಿಥಿ ಶಿಕ್ಷಕರು ಕೈಕೊಟ್ಟರೇ ಆ ದಿನ ಇಡೀ ಶಾಲೆಗೆ ರಜೆ. 1675 ಶಾಲೆಗಳ ಪೈಕಿ 10896 ಶಿಕ್ಷಕರ ಅವಶ್ಯಕತೆಯಿದೆ. ಆ ಪೈಕಿ 6935 ಶಿಕ್ಷಕರಿಂದ ಕಾರ್ಯನಿರ್ವಹಣೆ ನಡೆಯುತ್ತದೆ. ಈ ಮಧ್ಯೆ 6935 ಪೈಕಿ 2000 ಕ್ಕು ಹಚ್ಚು ಶಿಕ್ಷಕರ ವರ್ಗಾವಣೆಗೊಂಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ