ಹುಬ್ಬಳ್ಳಿ ಮರ್ಯಾದೆ ಹತ್ಯೆ: ಕೊನೆ ಸಲ ಮಗಳ ಮುಖ ನೋಡಲು ಬಾರದ ಪೋಷಕರು, ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ
ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲೇ ಇನಾಮ್ ವೀರಾಪುರ ಗ್ರಾಮದ ಹಳ್ಳದಲ್ಲಿ ಮಾನ್ಯಾಳ ಅಂತ್ಯಕ್ರಿಯೆ ಆಗಿದ್ದು, ಹುಟ್ಟಿಸಿ ಬೆಳೆಸಿದ್ದ ಮಗಳ ಅಂತಿಮದರ್ಶನಕ್ಕೂ ಮಾನ್ಯಾ ಪೋಷಕರು ಬಂದಿಲ್ಲ. ಹೀಗಾಗಿ ಹತ್ಯೆಯಾದ ವಿವೇಕಾನಂದ ಕುಟುಂಬಸ್ಥರೇ ಮಾನ್ಯಾಳ ಶವಸಂಸ್ಕಾರ ನೆರವೇರಿಸಿದ್ದಾರೆ. ಪತಿ ವಿವೇಕಾನಂದ ದೊಡ್ಮನಿ ಮಾನ್ಯಾಳ ಚಿತೆಗೆ ಅಗ್ನಿ ಸ್ಪರ್ಶ ಮಾಡಿ ಗೋಳಾಡಿದ್ದು, ಪತಿ ವಿವೇಕಾನಂದ ಮಾನ್ಯಾಳನ್ನು ಪ್ರೀತಿಸಿ ಕೊನೆಯವರೆಗೂ ಕೈಬಿಟ್ಟಿಲ್ಲ. ಈ ಸನ್ನಿವೇಶ ನೆರೆದವರ ಕಣ್ಣಲ್ಲಿ ನೀರು ತರಿಸಿದೆ.
ಹುಬ್ಬಳ್ಳಿ, (ಡಿಸೆಂಬರ್ 22): ಹುಬ್ಬಳ್ಳಿಯ (Hubballi) ಮಾನ್ಯ ಹಾಗೂ ವಿವೇಕಾನಂದ ಇವರಿಬ್ಬರು ಜಾತಿ ಗಡಿ ಮೀರಿ ಪ್ರೀತಿ ಮಾಡಿದ್ರು.. ಹೆತ್ತವರನ್ನ ಎದುರುಹಾಕಿಕೊಂಡು ಮದುವೆಯನ್ನೂ ಮಾಡಿಕೊಂಡಿದ್ರು. ಮದುವೆಯಾಗಿ 7 ತಿಂಗಳು ಕಳೆದಿತ್ತು. ಯುವತಿ ಸಹ 6 ತಿಂಗಳ ಗರ್ಭಿಣಿಯಾಗಿದ್ಳು. ಆದ್ರೆ ಜಾತಿ ಅಮಲು ತಲೆಗೇರಿಸಿಕೊಂಡಿದ್ದ ಯುವತಿ ತಂದೆ, ಗರ್ಭಿಣಿ ಮಗಳನ್ನೇ ಬಡಿದುಕೊಂದಿದ್ದಾನೆ. ಈ ಮರ್ಯಾದೆಗೇಡು ಹತ್ಯೆಗೆ ಹುಬ್ಬಳ್ಳಿ( Hubballi Honor Killing) ಬೆಚ್ಚಿಬಿದ್ದಿದೆ.