ಹುಬ್ಬಳ್ಳಿ ಮರ್ಯಾದಾ ಹತ್ಯೆ: ಗರ್ಭಿಣಿಯನ್ನು ಕೊಚ್ಚಿಕೊಂದ 24 ಗಂಟೆಯಲ್ಲೇ ಹಂತಕರು ಅರೆಸ್ಟ್
ಹುಬ್ಬಳ್ಳಿ ಮರ್ಯಾದೆ ಹತ್ಯೆ ಪ್ರಕರಣದಲ್ಲಿ ಪೊಲೀಸರು 24 ಗಂಟೆಗಳಲ್ಲಿ ಮೃತ ಯುವತಿಯ ತಂದೆ ಸೇರಿದಂತೆ ಒಟ್ಟು ಆರು ಆರೋಪಿಗಳನ್ನು ಬಂಧಿಸಿದ್ದಾರೆ. ಮೃತ ಯುವತಿಯ ಪತಿ ವಿವೇಕಾನಂದ ನೀಡಿದ ದೂರು ಆಧರಿಸಿ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ವಿಡಿಯೋ ನೋಡಿ.
ಹುಬ್ಬಳ್ಳಿ, ಡಿಸೆಂಬರ್ 23: ಹುಬ್ಬಳ್ಳಿ ಮರ್ಯಾದೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಪೊಲೀಸರು 24 ಗಂಟೆಗಳ ಒಳಗಾಗಿ ಒಟ್ಟು ಆರು ಆರೋಪಿಗಳನ್ನು ಬಂಧಿಸಿದ್ದಾರೆ. ನಿನ್ನೆ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. ಇದೀಗ ಫಕೀರಗೌಡ ಪಾಟೀಲ್, ಬಸನಗೌಡ ಪಾಟೀಲ್ ಮತ್ತು ಗುರಸಿದ್ದಗೌಡ ಪಾಟೀಲ್ ಎಂಬ ಮೂವರು ಇನಾಂ ವೀರಪುರ ಗ್ರಾಮದವರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಮೃತ ಯುವತಿಯ ತಂದೆಯೂ ಒಬ್ಬರಾಗಿದ್ದಾರೆ. ಮೃತ ಯುವತಿಯ ಪತಿ ವಿವೇಕಾನಂದ ಅವರು ಸುಮಾರು 20 ಜನರ ವಿರುದ್ಧ ದೂರು ನೀಡಿದ್ದಾನೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Dec 23, 2025 04:38 PM
