ಲವ್ ಜಿಹಾದ್ ಆರೋಪ: ಯೂಟ್ಯೂಬರ್ ಕ್ವಾಜಾ ಅಲಿಯಾಸ್ ಮುಕಳೆಪ್ಪಗೆ ಸಂಕಷ್ಟ
ನಕಲಿ ದಾಖಲೆ ತೋರಿಸಿ ಹಿಂದೂ ಯುವತಿಯನ್ನು ಅಪಹರಿಸಿ ಮದ್ವೆಯಾಗಿದ್ದಾರೆ ಎಂದು ಕನ್ನಡದ ಖ್ಯಾತ ಯೂಟ್ಯೂಬರ್ ಕ್ವಾಜಾ ಶಿರಹಟ್ಟಿ ಅಲಿಯಾಸ್ ಮುಕಳೆಪ್ಪ (Youtuber Mukaleppa) ವಿರುದ್ ಗಂಭೀರ ಆರೋಪ ಕೇಳಿಬಂದಿದ್ದು, ಈ ಸಂಬಂಧ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಯುವತಿಯ(ಗಾಯತ್ರಿ) ಹೆತ್ತವರು ಹಿಂದೂಪರ ಸಂಘಟನೆಗಳ ಜೊತೆಗೆ ಠಾಣೆಗೆ ಆಗಮಿಸಿ ಮುಕಳೆಪ್ಪ ವಿರುದ್ಧ ಜೀವ ಬೆದರಿಕೆ ಮತ್ತು ಅಪಹರಣ ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ಈಗಾಗಲೇ ಗಾಯತ್ರಿ ಸಹ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ಮುಖುಳೆಪ್ಪ ವಿರುದ್ಧ ಲವ್ ಜಿಹಾದ್ ಆರೋಪನ್ನು ತಳ್ಳಿಹಾಕಿದ್ದಾರೆ.
ಹುಬ್ಬಳ್ಳಿ, (ಸೆಪ್ಟೆಂಬರ್ 22): ನಕಲಿ ದಾಖಲೆ ತೋರಿಸಿ ಹಿಂದೂ ಯುವತಿಯನ್ನು ಅಪಹರಿಸಿ ಮದ್ವೆಯಾಗಿದ್ದಾರೆ ಎಂದು ಕನ್ನಡದ ಖ್ಯಾತ ಯೂಟ್ಯೂಬರ್ ಕ್ವಾಜಾ ಶಿರಹಟ್ಟಿ ಅಲಿಯಾಸ್ ಮುಕಳೆಪ್ಪ (Youtuber Mukaleppa) ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ಈ ಸಂಬಂಧ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಯುವತಿಯ(ಗಾಯತ್ರಿ) ಹೆತ್ತವರು ಹಿಂದೂಪರ ಸಂಘಟನೆಗಳ ಜೊತೆಗೆ ಠಾಣೆಗೆ ಆಗಮಿಸಿ ಮುಕಳೆಪ್ಪ ವಿರುದ್ಧ ಜೀವ ಬೆದರಿಕೆ ಮತ್ತು ಅಪಹರಣ ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ಈಗಾಗಲೇ ಗಾಯತ್ರಿ ಸಹ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ಮುಖುಳೆಪ್ಪ ವಿರುದ್ಧ ಲವ್ ಜಿಹಾದ್ ಆರೋಪನ್ನು ತಳ್ಳಿಹಾಕಿದ್ದಾರೆ.
ಇನ್ನು ಈ ಬಗ್ಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಮಾತನಾಡಿದ್ದು, ಜೀವ ಬೆದರಿಕೆ ಮತ್ತು ಅಪಹರಣ ಅಂತ ಯುವತಿ ಹೆತ್ತವರು ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಯುವತಿ ರಕ್ಷಣೆ ಮಾಡುವುದಕ್ಕೆ ಮೊದಲ ಆಧ್ಯತೆ ನೀಡಿದ್ದೇವೆ. ಕ್ವಾಜಾ ಶಿರಹಟ್ಟಿ ಗಾಗಿ ಕೂಡಾ ಹುಡುಕಾಟ ನಡೆದಿದೆ. ಆದಷ್ಟು ಬೇಗನೆ ಯುವತಿ ರಕ್ಷಣೆ ಮಾಡಿ ಕ್ವಾಜಾ ಶಿರಹಟ್ಟಿ ವಿಚಾರಣೆ ಮಾಡುತ್ತೇವೆ. ನಿಷ್ಪಕ್ಷಪಾತವಾಗಿ ತನಿಖೆ ಮಾಡ್ತೇವೆ. ಯುವತಿ ಸೋಶಿಯಲ್ ಮೀಡಿಯಾದಲ್ಲಿ ಬಿಟ್ಟಿರುವ ಸ್ಪಷ್ಟನೆ ವಿಡಿಯೋ ಪರಿಗಣಿಸಲು ಆಗಲ್ಲ. ಆಕೆ ಯಾವ ಸ್ಥಿತಿಯಲ್ಲಿ ಹೇಳಿದ್ದಾಳೆ ಎಂದು ನಿರ್ಧರಿಸಲು ಆಗಲ್ಲ.ಹೀಗಾಗಿ ಆಕೆಯನ್ನು ರಕ್ಷಿಸಿದ ಮೇಲೆ ಹೇಳಿಕೆ ಪಡೆದು ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.
ಒಟ್ಟಿನಲ್ಲಿ ಮುಕುಳೆಪ್ಪ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದು, ಆತನಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

