ಇತಿಹಾಸ ತಿರುಚಬೇಡಿ, ಟಿಪ್ಪು ಸುಲ್ತಾನ್ ಕೂಡ ದಸರಾ ಆಚರಿಸಿದ್ದರು: ಸಿಎಂ ಸಿದ್ದರಾಮಯ್ಯ
ನಾಡಹಬ್ಬ ಮೈಸೂರು ದಸರಾಗೆ ಚಾಲನೆ ಸಿಕ್ಕಿದೆ. ಲೇಖಕಿ ಬಾನು ಮುಷ್ತಾಕ್ ಅವರು ತಾಯಿ ಚಾಮುಂಡೇಶ್ವರಿ ಪುಷ್ಪಾರ್ಚನೆ ಮಾಡಲು ಮೂಲಕ ಉದ್ಘಾಟಿಸಿದರು. ಇನ್ನು ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಟಿಪ್ಪು ಸುಲ್ತಾನ್ ಕೂಡ ದಸರಾ ಆಚರಿಸಿದ್ದರು ಇತಿಹಾಸ ತಿರುಚಬೇಡಿ ಎಂದರು.
ಮೈಸೂರು (ಸೆಪ್ಟೆಂಬರ್.22): ನಾಡಹಬ್ಬ ಮೈಸೂರು ದಸರಾಗೆ (Mysuru Dasara 2025) ಚಾಲನೆ ಸಿಕ್ಕಿದೆ. ಇಂದು (ಸೆಪ್ಟೆಂಬರ್ 22) ಲೇಖಕಿ ಬಾನು ಮುಷ್ತಾಕ್ (Banu Mushtaq ಅವರು ತಾಯಿ ಚಾಮುಂಡೇಶ್ವರಿ ಪುಷ್ಪಾರ್ಚನೆ ಮಾಡಲು ಮೂಲಕ ಉದ್ಘಾಟಿಸಿದರು. ಇನ್ನು ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, (Siddaramaiah) ಟಿಪ್ಪು ಸುಲ್ತಾನ್ ( Tipu Sultan)ಕೂಡ ದಸರಾ ಆಚರಿಸಿದ್ದರು ಇತಿಹಾಸ ತಿರುಚಬೇಡಿ ಎಂದರು.
ವಿಜಯನಗರ ಕಾಲದಲ್ಲಿ ದಸರಾ ಆಚರಣೆ ಮಾಡುತ್ತಿದ್ದರು. ಬಳಿಕ ವಿಜಯನಗರ ಸಾಮ್ರಾಜ್ಯ ಪತನವಾದ ಸಂದರ್ಭದಲ್ಲಿ ಮೈಸೂರು ಅರಸರು ಆಚರಣೆ ಮಾಡಿದರು. ನಂತರ ಶ್ರೀರಂಗಪಟ್ಟಣದಲ್ಲಿ ಹೈದರಾಲಿ ಟಿಪ್ಪು ಸುಲ್ತಾನ್ ಕೂಡ ದಸರಾ ಆಚರಣೆ ಮಾಡಿದ್ದರು. ಎಲ್ಲರೂ ಇತಿಹಾಸವನ್ನ ತಿಳಿದುಕೊಳ್ಳಬೇಕು. ಆ ಕಾರಣಕ್ಕಾಗಿಯೇ ಸಂವಿಧಾನದ ಪೀಠಿಕೆಯನ್ನು ಪ್ರತಿಯೊಂದು ಶಾಲೆಯಲ್ಲೂ ಓದಬೇಕೆಂದು ಮಾಡಿದ್ದೇವೆ. ಇತಿಹಾಸವನ್ನ ತಿರುಚಿ ರಾಜಕೀಯಕ್ಕೋಸ್ಕರ ಮಾಡಬಾರದು. ರಾಜಕೀಯ ಮಾಡೋಣ ಅಂದ್ರೆ ಬಹಳಷ್ಟು ಇದೆ. ಚುನಾವಣೆ ಸಂದರ್ಭದಲ್ಲಿ ರಾಜಕೀಯ ಮಾಡೋಣ. ಇಲ್ಲ ಸಲ್ಲದ ದ್ವೇಷಕ್ಕೋಸ್ಕರ ರಾಜಕಾರಣ ಮಾಡಬಾರದು ಎಂದು ಹೇಳಿದರು.
ಈ ಮೂಲಕ ಟಿಪ್ಪು ಸುಲ್ತಾನ್ ಸಹ ದಸರಾ ಆಚಣೆ ಮಾಡಿದ್ದಾರಾ ಎನ್ನುವ ಚರ್ಚೆಗಳು ಶುರುವಾಗಿದ್ದು, ಈ ಬಗ್ಗೆ ಇತಿಹಾಸಕಾರರು ದಸರಾದ ನಿಜವಾದ ಇತಿಹಾಸವನ್ನು ಈಗಿನ ಪೀಳಿಗೆಗೆ ತಿಳಿಸಬೇಕಿದೆ.

