ಇಟಾನಗರದಲ್ಲಿ ಪ್ರಧಾನಿ ಮೋದಿ ರೋಡ್ ಶೋ; ವಂದೇ ಭಾರತ್ ಘೋಷಣೆ ಮೂಲಕ ಜನರಿಂದ ಭರ್ಜರಿ ಸ್ವಾಗತ
ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಮಹಿಳೆಯರು ಮತ್ತು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ಅನೇಕ ಮಹಿಳೆಯರು ಅರುಣಾಚಲ ಪ್ರದೇಶದ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿದ್ದರು. ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಇಂದು ಬೆಳಿಗ್ಗೆ ಇಟಾನಗರದಲ್ಲಿ ನಿಜವಾಗಿಯೂ ಸ್ಮರಣೀಯ ಸ್ವಾಗತ ದೊರೆಯಿತು. ಅಲ್ಲಿನ ವಾತಾವರಣ ಮೈ ರೋಮಾಂಚನಗೊಳಿಸುವಂತಿತ್ತು. ವಂದೇ ಮಾತರಂ ಘೋಷಣೆಗಳು, ನಾರಿ ಶಕ್ತಿ ಹಾಗೂ ಯುವ ಶಕ್ತಿಯ ಸಂಕೇತವಾಗಿ ಸೇರಿದ್ದ ಜನರನ್ನು ಕಂಡು ಬಹಳ ಸಂತೋಷವಾಯಿತು. ಅರುಣಾಚಲ ಪ್ರದೇಶದ ಜನರ ಉತ್ಸಾಹ ಅಸಾಧಾರಣವಾದುದು ಎಂದು ಬಣ್ಣಿಸಿದ್ದಾರೆ. ಪ್ರಧಾನಿ ಮೋದಿ ಇಂದು ಅರುಣಾಚಲ ಪ್ರದೇಶದ ಇಟಾನಗರದಲ್ಲಿ 5,100 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಇಟಾನಗರ, ಸೆಪ್ಟೆಂಬರ್ 22: ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರದಲ್ಲಿ ರೋಡ್ ಶೋ ನಡೆಸಿದರು. ಅವರನ್ನು ಸ್ವಾಗತಿಸಲು ಜನರು ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದರು. ಪ್ರಧಾನಿ ಅವರಿಗೆ ಉತ್ಸಾಹಭರಿತ ಸ್ವಾಗತ ನೀಡಿದ ಜನರು, ತ್ರಿವರ್ಣ ಧ್ವಜವನ್ನು ಬೀಸುತ್ತಾ ವಂದೇ ಮಾತರಂ ಘೋಷಣೆಗಳನ್ನು ಕೂಗಿದರು. ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಮಹಿಳೆಯರು ಮತ್ತು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ಅನೇಕ ಮಹಿಳೆಯರು ಅರುಣಾಚಲ ಪ್ರದೇಶದ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿದ್ದರು. ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಇಂದು ಬೆಳಿಗ್ಗೆ ಇಟಾನಗರದಲ್ಲಿ ನಿಜವಾಗಿಯೂ ಸ್ಮರಣೀಯ ಸ್ವಾಗತ ದೊರೆಯಿತು. ಅಲ್ಲಿನ ವಾತಾವರಣ ಮೈ ರೋಮಾಂಚನಗೊಳಿಸುವಂತಿತ್ತು. ವಂದೇ ಮಾತರಂ ಘೋಷಣೆಗಳು, ನಾರಿ ಶಕ್ತಿ ಹಾಗೂ ಯುವ ಶಕ್ತಿಯ ಸಂಕೇತವಾಗಿ ಸೇರಿದ್ದ ಜನರನ್ನು ಕಂಡು ಬಹಳ ಸಂತೋಷವಾಯಿತು. ಅರುಣಾಚಲ ಪ್ರದೇಶದ ಜನರ ಉತ್ಸಾಹ ಅಸಾಧಾರಣವಾದುದು ಎಂದು ಬಣ್ಣಿಸಿದ್ದಾರೆ. ಪ್ರಧಾನಿ ಮೋದಿ ಇಂದು ಅರುಣಾಚಲ ಪ್ರದೇಶದ ಇಟಾನಗರದಲ್ಲಿ 5,100 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

