Loading video

ನಿಮ್ಮನ್ನ ಬುಡ ಸಮೇತ ಕಿತ್ತು ಹಾಕುತ್ತೇವೆ: ಹುಬ್ಬಳ್ಳಿ-ಧಾರವಾಡ ರೌಡಿಗಳಿಗೆ ಕಮಿಷನರ್ ಖಡಕ್ ಎಚ್ಚರಿಕೆ

|

Updated on: Sep 02, 2024 | 4:09 PM

ಇತ್ತೀಚೆಗೆ ಹುಬ್ಬಳ್ಳಿ ಧಾರವಾಡದಲ್ಲಿ ನಡೆಯುತ್ತಿರುವ ಅಪರಾಧ ಚಟುವಟಿಕೆ ಪ್ರಕರಣಗಳಿಂದ ಪೊಲೀಸರು ಸಿಡಿದೆದ್ದಿದ್ದಾರೆ. ಮುಂದೆ ಯಾವುದೇ ಅಪರಾಧ ಚಟುವಟಿಕೆಗಳು ನಡೆಯುದಂತೆ ಮುಂಜಾಗ್ರತಾವಾಗಿ ಇಂದು ಕಮಿಷನರ್ ಶಶಿಕುಮಾರ್ ಅವರು ರೌಡಿಗಳ ಪರೇಡ್ ನಡೆಸಿ ಖಡಕ್ ಎಚ್ಚರಿಗಳು ನೀಡಿದ್ದಾರೆ.

ಹುಬ್ಬಳ್ಳಿ, (ಸೆಪ್ಟೆಂಬರ್ 02): ಸ್ನೇಹ ಹಿರೀಮಠ, ಅಂಜಲಿ ಅಂಬಿಗೇರ ಕೊಲೆ ಹೀಗೆ ಹುಬ್ಬಳ್ಳಿಯಲ್ಲಿ ಸಾಲು ಸಾಲು ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಇನ್ನು ಈ ಸಂಬಂಧ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಅವರು ಇಂದು ರೌಡಿ ಪೆರೇಡ್ ನಡೆಸಿದರು. ಈ ವೇಳೆ ಕಮಿಷನರೇಟ್ ವ್ಯಾಪ್ತಿಯ 15 ಠಾಣೆಗಳಿಂದ 1,600 ರೌಡಿಗಳು ಇದ್ದರು. ಈ ವೇಳೆ ಕಮಿಷನರ್ ಎನ್ ಶಶಿಕುಮಾರ್, ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ನಿಮ್ಮ ತಂದೆ-ತಾಯಿಗೆ ಆಸರೆಯಾಗಿ ಬಾಳದ್ದರು ಪರವಾಗಿಲ್ಲ. ಸುಮ್ಮನೆ ಮನೆಯಲ್ಲಿ ಇರಿ. ಅದು ಬಿಟ್ಟು ಗ್ಯಾಂಗ್ ಕಟ್ಟಿಕೊಂಡು ರೌಡಿಸಂ ಮಾಡಿದ್ರೆ ಕಥೆ ಮುಗೀತು ನಿಮ್ಮನ್ನ ಬುಡ ಸಮೇತ ಕಿತ್ತು ಹಾಕುತ್ತೇವೆ ಎಂದು ವಾರ್ನ್​ ಮಾಡಿದರು. ನೀವು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಜೀವನ ನಡೆಸಿದ್ರೆ ಸರಿ ಇಲ್ಲ ನಿಮ್ಮ ಜೀವನದಲ್ಲಿ ನಾವು ಎಂಟ್ರಿ ಆಗುತ್ತೇವೆ. ನೀವು ಚೆನ್ನಾಗಿ ಜೀವನ‌ ನಡೆಸಿದರೆ ನಾವೇ ನಿಮ್ಮ ರೌಡಿ ಶಿಟರ್ ತೆಗೆದು ಹಾಕುತ್ತೇವೆ. ಅದು ಬಿಟ್ಟು ಬಾಲ ಬಿಚ್ಚಿದ್ರೆ ಪರಿಣಾಮ ಚೆನ್ನಾಗಿರಲ್ಲ ಎಂದು ಬಿಸಿ ಮುಟ್ಟಿಸಿದರು.