ಕೋಲಾರ ಶಾಸಕ ಕೊತ್ತೂರು ಮಂಜುನಾಥ್ಗೆ ಸಾರ್ವಜನಿಕ ವರ್ತನೆ ಗೊತ್ತಿಲ್ಲ, ನಾಲಗೆ ಮೇಲೆ ಹಿಡಿತವಿಲ್ಲ!
ಕಾಲೇಜಿನ ಮಹಿಳಾ ಉಪನ್ಯಾಸಕರು ತಿರುಗಿ ಬೀಳದಿದ್ದರೆ ಶಾಸಕ ಮಂಜುನಾಥ್ ಪ್ರಾಂಶುಪಾಲರಿಗೆ ಮತ್ತೇನು ಹೇಳುತ್ತಿದ್ದರೋ? ಸಚಿವ ಸುಧಾಕರ್ ಮಕ್ಕಳು ಮತ್ತು ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸುತ್ತಿದ್ದಾಗ ಶಾಸಕ ಮಧ್ಯಪ್ರವೇಶಿಸಿ ತನ್ನ ಗತ್ತು ತೋರುವ ಅವಶ್ಯಕತೆಯಿರಲಿಲ್ಲ.
ಕೋಲಾರ: ಕೋಲಾರದ ಶಾಸಕ ಕೊತ್ತೂರು ಮಂಜುನಾಥಗೆ ನಾಲಗೆ ಮೇಲೆ ಹಿಡಿತವಿಲ್ಲ ಅನಿಸುತ್ತೆ. ಸಾರ್ವಜನಿಕವಾಗಿ ಜೋರಾಗಿ ಕಿರುಚಾಡುವುದೇ ಜನಪ್ರತಿನಿಧಿಯೊಬ್ಬ ಲಕ್ಷಣ ಅಂತ ಅವರು ಅಂದುಕೊಂಡಿದ್ದಾರೆ. ಇಲ್ನೋಡಿ, ನಗರದ ಸರ್ಕಾರಿ ಕಾಲೇಜೊಂದರ ಸ್ಟಾಫ್ ಮತ್ತು ಮಕ್ಕಳು ಶೌಚಾಲಯದ ಸಮಸ್ಯೆ ಬಗ್ಗೆ ಉಸ್ತುವಾರಿ ಸಚಿವ ಡಾ ಎಂಸಿ ಸುಧಾಕರ್ ಹತ್ತಿರ ಹೇಳಿಕೊಂಡಿದ್ದಾರೆ. ಸಚಿವ ಅವರ ಸಮಸ್ಯೆಯನ್ನು ಆಲಿಸುತ್ತಿದ್ದಾಗ ಮಂಜುನಾಥ್ ಪ್ರಿನ್ಸಿಪಾಲ್ ರನ್ನು ಶಾಲಾ ಮಕ್ಕಳನ್ನು ಗದರುವಂತೆ ಗದರುತ್ತಾರೆ. ಶಾಸಕನಿಗೆ ಪ್ರಿನ್ಸಿಪಅಲ್ ಹುದ್ದೆಯ ಘನತೆಯ ಬಗ್ಗೆ ಅರಿವಿಲ್ಲದಿರೋದು ದುರಂತ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಶಾಸಕ ಕೊತ್ತೂರು ಜಿ.ಮಂಜುನಾಥ್ ಜಾತಿ ಸಿಂಧುತ್ವ ಕೇಸ್: ರಿಟ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್
Latest Videos