ಶಾಸಕ ಕೊತ್ತೂರು ಜಿ.ಮಂಜುನಾಥ್ ಜಾತಿ ಸಿಂಧುತ್ವ ಕೇಸ್: ರಿಟ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್
2021ರಲ್ಲಿ ತಮ್ಮ ಜಾತಿ ಪ್ರಮಾಣ ಪತ್ರ ಸಿಂದುತ್ವ ಕುರಿತು ಕೋಲಾರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಾತಿ ಪರಿಶೀಲನಾ ಸಮಿತಿ ತೀರ್ಮಾನದ ವಿರುದ್ಧ ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಶಾಸಕ ಕೊತ್ತೂರು ಜಿ. ಮಂಜುನಾಥ್ ಅರ್ಜಿ ಸಲ್ಲಿಸಿದ್ದರು. ಮೇಲ್ಮನವಿಯನ್ನು ಇಂದು ನ್ಯಾಯ ಮೂರ್ತಿ ನಾಗಪ್ರಸನ್ನ ಪೀಠ ವಜಾಗೊಳಿಸಿದೆ.
ಕೋಲಾರ, ಡಿಸೆಂಬರ್ 20: ಕಾಂಗ್ರೆಸ್ ಶಾಸಕ ಕೊತ್ತೂರು ಜಿ. ಮಂಜುನಾಥ್ (Kothur Manjunath) ಜಾತಿ ಸಿಂದುತ್ವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಮುಳಬಾಗಲು ಮೀಸಲು ಕ್ಷೇತ್ರದಿಂದ 2013ರಲ್ಲಿ ಗೆದ್ದಿದ್ದ ಶಾಸಕ ಮಂಜುನಾಥ್, ಕಾಂಗ್ರೆಸ್ಸ್ ಬೆಂಬಲಿತ ಸ್ವತಂತ್ರ್ಯ ಅಭ್ಯರ್ಥಿಯಾಗಿ ಶಾಸಕರಾಗಿದ್ಧರು.
2021ರಲ್ಲಿ ತಮ್ಮ ಜಾತಿ ಪ್ರಮಾಣ ಪತ್ರ ಸಿಂದುತ್ವ ಕುರಿತು ಕೋಲಾರ ಜಿಲ್ಲಾಧಿಕಾರಿ ನೇತೃತ್ವದ ಜಾತಿ ಪರಿಶೀಲನಾ ಸಮಿತಿ ತೀರ್ಮಾನದ ವಿರುದ್ಧ ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಮೇಲ್ಮನವಿಯನ್ನು ಇಂದು ನ್ಯಾಯ ಮೂರ್ತಿ ನಾಗಪ್ರಸನ್ನ ಪೀಠ ವಜಾಗೊಳಿಸಿದೆ.
ಇದನ್ನೂ ಓದಿ: ಹಿಂದೂ ಧರ್ಮ ಇಲ್ಲ ಎಂದ ಉದಯನಿಧಿ ಸ್ಟಾಲಿನ್ನನ್ನು ಗಲ್ಲಿಗೇರಿಸಿ: ಕಾಂಗ್ರೆಸ್ ಶಾಸಕ
2013ರ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಕೊತ್ತೂರು ಜಿ.ಮಂಜುನಾಥ ಪ್ರವರ್ಗ ಹಿಂದುಳಿದ ಜಾತಿ ಎಂದು ನಮೂದಿಸಲಾಗಿತ್ತು, ತದ ನಂತರ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ಜಯಶೀಲರಾಗಿದ್ದರು. 2022 ರಲ್ಲಿ ಮುಚ್ಚಿದ ಲಕೋಟೆ ಯಲ್ಲಿ ಸೆಲ್ವಮಣಿ ಸುಪ್ರೀಂ ಕೋರ್ಟ್ಗೆ ಜಾತಿ ಕುರಿತಾದ ವರದಿ ಸಲ್ಲಿಸಿದ್ದರು.
ಇದನ್ನೂ ಓದಿ: ವಿದೇಶದಲ್ಲೂ ಕೊತ್ತೂರು ಮಂಜುನಾಥ್ ಹವಾ: ಅಮೇರಿಕಾ, ಲಂಡನ್, ಕೆನಾಡದಲ್ಲೂ ಅಭಿಮಾನಿಗಳಿಂದ ಗೆಲುವಿನ ಸಂಭ್ರಮ
ಸುಪ್ರೀಂ ಕೋರ್ಟ್ ಜಾತಿ ವಿವಾದವನ್ನು ಹೈಕೋರ್ಟ್ನಲ್ಲೇ ಇತ್ಯರ್ಥ ಪಡೆಸಿಕೊಳ್ಳುವಂತೆ ಸೂಚನೆ ನೀಡಿತ್ತು. ನಂತರ ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಹಾಲಿ ಕೋಲಾರ ಶಾಸಕ ಮೊರೆ ಹೋಗಿದ್ದರು. ಹೈ ಕೋರ್ಟ್ ಶಾಸಕರ ಅರ್ಜಿ ತಿರಸ್ಕರಿಸಿದ್ದು ಶಾಸಕ ಮಂಜುನಾಥ್ಗೆ ಹಿನ್ನಡೆ ಉಂಟಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:07 pm, Wed, 20 December 23