ಬಾಲಕಿ ಹತ್ಯೆಗೈದಿದ್ದ ಆರೋಪಿ ಪೊಲೀಸ್​ ಗುಂಡೇಗೆ ಬಲಿ: ಕಮಿಷನರ್​ಗೆ ಜೈಕಾರ

Updated By: ವಿವೇಕ ಬಿರಾದಾರ

Updated on: Apr 13, 2025 | 9:49 PM

ಹುಬ್ಬಳ್ಳಿಯಲ್ಲಿ ಬಾಲಕಿಯ ಹತ್ಯೆಗೈದ ಆರೋಪಿಯನ್ನು ಪೊಲೀಸರು ಗುಂಡು ಹಾರಿಸಿದ್ದಾರೆ. ಆರೋಪಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಜನರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದರು. ಚಪ್ಪಾಳೆ ತಟ್ಟಿ, ಜೈಕಾರ ಹಾಕಿದರು. ಬಾಲಕಿಯ ಘಟನೆ ಹುಬ್ಬಳ್ಳಿಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಹುಬ್ಬಳ್ಳಿಯಲ್ಲಿ ಬಾಲಕಿ ಹತ್ಯೆಗೈದಿದ್ದ ಆರೋಪಿ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದು, ಹುಬ್ಬಳ್ಳಿ-ಧಾರವಾಡ ಪೊಲೀಸ್​ ಆಯುಕ್ತ ಶಶಿಕುಮಾರ್​ ಅವರಿಗೆ ಜನರು ಜೈಕಾರ ಹಾಕಿದರು.  ಆರೋಪಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕಿಮ್ಸ್ ಆಸ್ಪತ್ರೆ ಮುಂಭಾಗದಲ್ಲಿ ಸೇರಿದ್ದ ಜನ ಚಪ್ಪಾಳೆ ತಟ್ಟಿ, ಜೈಕಾರ ಹಾಕಿದರು. ಈ ವೇಳೆ ಪೊಲೀಸ್​ ಕಮಿಷನರ್ ಎನ್​. ಶಶಿಕುಮಾರ್​ ಜನರನ್ನು ಚದುರಿಸಿದರು.

Published on: Apr 13, 2025 09:45 PM