ಉತ್ತರ ಕನ್ನಡ: ಅಂಕೋಲದ ಗ್ರಾಮವೊಂದರ ಸೇತುವೆ ಬಳಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ, ಸ್ಥಳೀಯರಲ್ಲಿ ಆತಂಕ
ಮೊಸಳೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಜನರು ನದಿಗಿಳಿಯುವ ಪ್ರಯತ್ನ ಮಾಡಬಾರದೆಂದು ಅಂಕೋಲ ತಾಲ್ಲೂಕು ಆಡಳಿತ ಎಚ್ಚರಿಗೆ ನೀಡಿದೆ. ನದಿ ತಟದ ಗ್ರಾಮದ ನಿವಾಸಿಗಳ ಬದುಕಿಮ ಹೆಚ್ಚಿಮ ಭಾಗ ನದಿ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗೇ, ಮೊಸಳೆನ್ನು ಹಿಡಿದು ಬೇರೆ ಸ್ಥಳಕ್ಕೆ ಒಯ್ಯುವಂತೆ ಹಿಲ್ಲೂರು ಗ್ರಾಮದ ಜನ ಒತ್ತಾಯಿಸುತ್ತಿದ್ದಾರೆ.
ಕಾರವಾರ: ಮೊಸಳೆ ಉಭಯವಾಸಿ (Amphibious) ನಿಜ ಅದರೆ ನೀರಲ್ಲಿರುವಾಗ ಭಯಂಕರ ಅಪಾಯಕಾರಿ ಪ್ರಾಣಿ. ಗಾತ್ರದಲ್ಲಿ ತನಗಿಂತ ದೊಡ್ಡ ಪ್ರಾಣಿಗಳನ್ನು ನೀರಲ್ಲಿ ಕೆಡವಿಕೊಂಡು ತಿಂದು ಬಿಡುತ್ತದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲ (Ankola) ತಾಲ್ಲೂಕಿನಲ್ಲಿ ಹಿಲ್ಲೂರು ಹೆಸರಿನ ಗ್ರಾಮವೊಂದಿದ್ದು ಅಲ್ಲಿಮ ಹೊಸಕಂಬಿ ಸೇತುವೆ ಬಳಿ ಬೃಹತ್ ಗಾತ್ರದ ಮೊಸಳೆಯೊಂದು (huge crocodile) ಕಾಣಿಸಿಕೊಂಡಿದೆ. ಸ್ಥಳೀಯರು ಹೇಳುವ ಪ್ರಕಾರ ಮೊಸಳೆ ಸುಮಾರು 7 ಅಡಿಗಳಷ್ಟು ಉದ್ದವಿದೆ. ಈ ಮೊಸಳೆ ಕಳೆದ ವಾರ ಕಾರವಾರ ಬಳಿಯ ಕದಂಬ ನೌಕಾನೆಲೆ (Kadamba Naval Base) ಬಳಿ ಕಾಣಿಸಿಕೊಂಡಿತ್ತು ಮತ್ತು ಅದನ್ನು ಹಿಡಿದು ಗಂಗಾವಳಿ ನದಿಯಲ್ಲಿ ಬಿಡಲಾಗಿತ್ತು. ಅದೀಗ ಹೊಸಕಂಬಿ ಸೇತುವೆ ಬಳಿ ಕಾಣಿಸಿಕೊಂಡಿದೆಯೆಂದು ಜನ ಹೇಳುತ್ತಿದ್ದಾರೆ. ಮೊಸಳೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಜನರು ನದಿಗಿಳಿಯುವ ಪ್ರಯತ್ನ ಮಾಡಬಾರದೆಂದು ಅಂಕೋಲ ತಾಲ್ಲೂಕು ಆಡಳಿತ ಎಚ್ಚರಿಗೆ ನೀಡಿದೆ. ನದಿ ತಟದ ಗ್ರಾಮದ ನಿವಾಸಿಗಳ ಬದುಕಿಮ ಹೆಚ್ಚಿಮ ಭಾಗ ನದಿ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗೇ, ಮೊಸಳೆನ್ನು ಹಿಡಿದು ಬೇರೆ ಸ್ಥಳಕ್ಕೆ ಒಯ್ಯುವಂತೆ ಹಿಲ್ಲೂರು ಗ್ರಾಮದ ಜನ ಒತ್ತಾಯಿಸುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ