ಮಧುಗಿರಿ ಸಮಾಜ ಕಲ್ಯಾಣ ಬಾಲಕಿಯರ ಹಾಸ್ಟೆಲ್ ನಲ್ಲಿ ವಾರ್ಡನ್ ನಿವೇದಿತಾಳ ಗಂಡನದೇ ದರ್ಬಾರು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 13, 2022 | 2:27 PM

ವಿಷಯವನ್ನು ಸಮಾಜ ಕಲ್ಯಾಣ ಅಧಿಕಾರಿ ಪ್ರೇಮಾ ಅವರ ಗಮನಕ್ಕೆ ತಂದರೂ ಅವರು ಯಾವ ಕ್ರಮವನ್ನೂ ತೆಗೆದುಕೊಳ್ಳುತ್ತಿಲ್ಲ ಎಂದು ವಿದ್ಯಾರ್ಥಿನಿಯರು ದೂರುತ್ತಿದ್ದಾರೆ.

ತುಮಕೂರು ಜಿಲ್ಲೆ ಮಧುಗಿರಿಯ ಬಾಲಕಿಯರ ಸರ್ಕಾರಿ ಹಾಸ್ಟೆಲ್ ನಲ್ಲಿರುವ ವಿದ್ಯಾರ್ಥಿನಿಯರ ಬದುಕನ್ನು ಹಾಸ್ಟೆಲ್ ವಾರ್ಡನ್ ನಿವೇದಿತಾ (warden Niveditha) ಮತ್ತು ಅವರ ಪತಿ ರಂಗನಾಥ್ (Ranganath) ಅಕ್ಷರಶಃ ನರಕವಾಗಿಸಿದ್ದಾರೆ ಎಂದು ದೂರಲಾಗಿದೆ. ಇಲ್ಲಿಯ ವಾರ್ಡನ್ ನಿವೇದಿತಾ ಅಗಿದ್ದರೂ ಹಾಸ್ಟೆಲ್ ಗೆ ಯಾವುದೇ ರೀತಿಯಲ್ಲಿ ಸಂಬಂಧವಿರದ ಅವರ ಗಂಡ ಪ್ರತಿನಿತ್ಯ ಹುಡುಗಿಯರನ್ನು ಗೋಳು ಹೊಯ್ದುಕೊಳ್ಳುತ್ತಿದ್ದಾನೆ. ವಿಷಯವನ್ನು ಸಮಾಜ ಕಲ್ಯಾಣ ಅಧಿಕಾರಿ ಪ್ರೇಮಾ (Prema) ಅವರ ಗಮನಕ್ಕೆ ತಂದರೂ ಅವರು ಯಾವ ಕ್ರಮವನ್ನೂ ತೆಗೆದುಕೊಳ್ಳುತ್ತಿಲ್ಲ ಎಂದು ವಿದ್ಯಾರ್ಥಿನಿಯರು ದೂರುತ್ತಿದ್ದಾರೆ.

ಇದನ್ನೂ ಓದಿ:  Viral Video: ರೋಹಿತ್ ಶರ್ಮಾ ಬಾರಿಸಿದ ಸಿಕ್ಸರ್​ನಿಂದ ಪುಟ್ಟ ಬಾಲಕಿಗೆ ಪೆಟ್ಟು